ಪ್ರಯಾಗರಾಜ (ಉತ್ತರಪ್ರದೇಶ): 5 ಮನೆಗಳ ಮೇಲೆ ಬುಲ್ಡೋಜರ್‌ನಿಂದ ನಡೆಸಿದ ಕಾರ್ಯಾಚರಣೆ ಅಯೋಗ್ಯ! – ಸುಪ್ರೀಂ ಕೋರ್ಟ್ !

ಪ್ರತಿ ವ್ಯಕ್ತಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ

ನವದೆಹಲಿ – ಜನರ ತಲೆಯ ಮೇಲಿನ ಛಾವಣಿಯನ್ನು ಬುಲ್ಡೋಜರ್‌ನಿಂದ ನೆಲಸಮ ಮಾಡುವಂತಿಲ್ಲ. ಮನೆಗಳನ್ನು ನೆಲಸಮಗೊಳಿಸಿದ ರೀತಿ ಸಂವಿಧಾನದ ಮೌಲ್ಯಗಳು ಮತ್ತು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಹೇಳುತ್ತಾ, ಸುಪ್ರೀಂ ಕೋರ್ಟ್ 4 ವರ್ಷಗಳ ಹಿಂದೆ ಪ್ರಯಾಗರಾಜ (ಉತ್ತರಪ್ರದೇಶ) ದಲ್ಲಿ 5 ಜನರ ಮನೆಗಳನ್ನು ನೆಲಸಮಗೊಳಿಸಿದ್ದನ್ನು ಅಯೋಗ್ಯವೆಂದು ಘೋಷಿಸಿದೆ. ಸರ್ಕಾರವು ಪ್ರತಿ ಅರ್ಜಿದಾರರಿಗೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಪ್ರಯಾಗರಾಜ ಪ್ರಾಧಿಕರಣವು ಮಾರ್ಚ್ 2021 ರಲ್ಲಿ ಲೂಕರ್ಗಂಜ್‌ನಲ್ಲಿ ಪ್ರಾಧ್ಯಾಪಕರು, ವಕೀಲರು ಮತ್ತು ಇತರ ಮೂವರ ಮನೆಗಳನ್ನು ನೆಲಸಮಗೊಳಿಸಿತ್ತು. ನಮ್ಮ ಮನೆಗಳು ರೌಡಿ ಅತೀಕ್ ಅಹ್ಮದ್‌ಗೆ ಸಂಬಂಧಿಸಿದ್ದಾಗಿವೆ ಎಂದು ಪರಿಗಣಿಸಿ ಸರ್ಕಾರವು ಅವನ್ನು ಧ್ವಂಸಗೊಳಿಸಿದೆ ಎಂದು ಅರ್ಜಿದಾರರು ದೂರಿದ್ದರು.

ಅಲಹಾಬಾದ್ ಹೈಕೋರ್ಟ್ ಸರ್ಕಾರದ ಈ ಕ್ರಮವನ್ನು ಯೋಗ್ಯವೆಂದು ತೀರ್ಪು ನೀಡಿತ್ತು. ಆದರೆ ಅರ್ಜಿದಾರರು ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಸಂಪಾದಕೀಯ ನಿಲುವು

ಅತಿಕ್ರಮಣ ಮಾಡುವವರ ಮೇಲೆ ಸರಕಾರ ಕ್ರಮ ಕೈಗೊಂಡಾಗ, ಸರಕಾರವು ಅವರಿಂದ ದಂಡವನ್ನು ವಸೂಲಿ ಮಾಡುತ್ತದೆ, ಈಗ ಅತಿಕ್ರಮಣಕಾರರಿಗೆ ಕಠಿಣ ಶಿಕ್ಷೆ ನೀಡುವಂತೆ ಸರಕಾರವು ಪ್ರಯತ್ನಿಸಬೇಕು!