ಆರೋಗ್ಯವನ್ನು ನಿರ್ಲಕ್ಷಿಸಬೇಡಿ; ಆದರೆ ಆರೋಗ್ಯದ ಬಗ್ಗೆ ಚಿಂತೆಯನ್ನೂ ಮಾಡಬೇಡಿ !

(ಪೂ.) ಶ್ರೀ. ಸಂದೀಪ ಆಳಶಿ,

ಕೆಲವು ಸಾಧಕರು ತಮ್ಮ ಆರೋಗ್ಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಸಂವೇದನಾಶೀಲರಾಗಿರುತ್ತಾರೆ ಮತ್ತು ತಮ್ಮ ಆರೋಗ್ಯದ ಬಗ್ಗೆ ಚಿಂತೆಯನ್ನೂ ಮಾಡುತ್ತಾರೆ. ‘ನನ್ನ ಆರೋಗ್ಯ ಅಷ್ಟು ಚೆನ್ನಾಗಿಲ್ಲ; ಇದರಿಂದ ನನಗೆ ಅಧಿಕ ಸೇವೆ ಮಾಡಲು ಸಾಧ್ಯವಾಗುವುದಿಲ್ಲ’, ಎಂದು ಮೊದಲೇ ಗ್ರಹಿಸಿಕೊಂಡಿರುತ್ತಾರೆ. ಕೆಲವು ಸಾಧಕರು ಅನಾರೋಗ್ಯದ ಕಾರಣವನ್ನು ಮುಂದೆ ಮಾಡಿ ಹೆಚ್ಚು ಸಮಯ ಮಲಗಿರುತ್ತಾರೆ ಅಥವಾ ಶಾರೀರಿಕ ಶ್ರಮದ ಸೇವೆಗಳನ್ನು ನಿರಾಕರಿಸುತ್ತಾರೆ. ಕೆಲವು ಜನರ ಮನಸ್ಸಿನಲ್ಲಿ ‘ತಾವು ಸುಂದರವಾಗಿ ಕಾಣಬೇಕು’ ಎಂಬ ವಿಚಾರವಿರುತ್ತದೆ ಮತ್ತು ಈ ವಿಚಾರಗಳಿಂದಾಗಿ ‘ಸುಂದರವಾಗಿ ಕಾಣಲು ಇನ್ನೇನು ಮಾಡಬಹುದು ?’ ಎಂದು ಅದಕ್ಕಾಗಿ ಅವರು ಪ್ರಯತ್ನಿಸುತ್ತಿರುತ್ತಾರೆ.

ವಾಸ್ತವದಲ್ಲಿ ‘ದೇಹ ಸುದೃಢ ಮತ್ತು ಸುಂದರವಾಗಿರುವುದು’ ದೈವಿ ಕೊಡುಗೆಯಾಗಿರುತ್ತದೆ’. ಇದು ಹೆಚ್ಚಾಗಿ ನಮ್ಮ ಪ್ರಾರಬ್ಧವನ್ನು ಅವಲಂಬಿಸಿರುತ್ತದೆ. ಸದ್ಯದ ಕಾಲಮಹಾತ್ಮೆಗನುಸಾರ ಕೆಟ್ಟ ಶಕ್ತಿಗಳ ತೊಂದರೆ ಹೆಚ್ಚಾಗಿದೆ ಮತ್ತು ಸಾಧಕರ ಆರೋಗ್ಯದ ಮೇಲೆ ಇದರ ಪರಿಣಾಮವಾಗುತ್ತಿದೆ. ಸಾಧನೆ ಉತ್ತಮವಾಗಿ ಆಗಲು ಆರೋಗ್ಯ ಚೆನ್ನಾಗಿರುವುದು ಅತ್ಯಾವಶ್ಯಕವಾಗಿದೆ. ಆರೋಗ್ಯ ಹದಗೆಡದಿರಲು ಅಥವಾ ರೋಗ ದೂರವಾಗಲು ಆವಶ್ಯಕವಿರುವ ಕಾಳಜಿ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು ಮತ್ತು ಆವಶ್ಯಕತೆಯನುಸಾರ ನಾಮಜಪಾದಿ ಉಪಾಯಗಳನ್ನು ಕೂಡ ಮಾಡಬೇಕು. ಇದರೊಂದಿಗೆ ಆರೋಗ್ಯ ಸುದೃಢವಾಗಿರಲು ವ್ಯಾಯಾಮ, ಯೋಗಾಸನ ಇತ್ಯಾದಿಗಳನ್ನು ಸಹ ಮಾಡಬೇಕು. ಆದರೆ ಆರೋಗ್ಯದ ಬಗ್ಗೆ ಚಿಂತೆ ಮಾಡಬಾರದು; ಇಲ್ಲದಿದ್ದರೆ ಚಿಂತೆಯ ಅಂದರೆ ಮಾನಸಿಕವಾಗಿ ಕುಗ್ಗಿದ ಪರಿಣಾಮವಾಗಿ ದೈಹಿಕ ಆರೋಗ್ಯವೂ ಹದಗೆಡಬಹುದು. ಈ ಸಂದರ್ಭದಲ್ಲಿ ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಡಬೇಕು.

೧. ‘ಶರೀರವನ್ನು ಸುದೃಢಗೊಳಿಸುವುದು ಮತ್ತು ಸುಂದರ ಗೊಳಿಸುವುದು’ ಇದು ನಾವು ಮಾಡುತ್ತಿರುವ ಸಾಧನೆಯ ಮೂಲ ಉದ್ದೇಶ ಅಲ್ಲ, ಬದಲಿಗೆ ‘ಈಶ್ವರಪ್ರಾಪ್ತಿ’ಯು ನಮ್ಮ ಉದ್ದೇಶವಾಗಿದೆ. ಈ ಉದ್ದೇಶವನ್ನು ನಾವು ಮರೆಯಬಾರದು. ‘ಇರುವ ಪರಿಸ್ಥಿತಿಯಲ್ಲಿ ಸಾಧ್ಯವಿರುವಷ್ಟು ಅಧಿಕ ಸಾಧನೆಯನ್ನು ಸಂತೋಷದಿಂದ ಮಾಡುತ್ತಿರುವುದು’, ಇದೇ ಸದ್ಯದ ಆಪತ್ಕಾಲದ ಸಾಧನೆಯಾಗಿದೆ.

೨. ‘ದೈಹಿಕ ಅಥವಾ ಮಾನಸಿಕ ಕಾಯಿಲೆಗಳನ್ನು ಅನುಭವಿಸುವ ಮಾಧ್ಯಮದಿಂದ ದೇವರು ನನ್ನ ಪ್ರಾರಬ್ಧವನ್ನು ಆದಷ್ಟು ಬೇಗ ಕಡಿಮೆ ಮಾಡಿ ನನ್ನನ್ನು ತನ್ನ ಚರಣಗಳಲ್ಲಿ ಸೇರಿಸುತ್ತಿದ್ದಾನೆ’ ಎಂಬ ಭಾವವನ್ನು ಇಟ್ಟುಕೊಂಡರೆ ಮನಸ್ಸಿನ ಅಸಮಾಧಾನ ಅಥವಾ ನಕಾರಾತ್ಮಕತೆ ಕಡಿಮೆಯಾಗುತ್ತದೆ.

೩. ನಾವು ಅನುಭವಿಸುವ ಅನಾರೋಗ್ಯ ನಮ್ಮ ಪ್ರಾರಬ್ಧ ಅಥವಾ ಕೆಟ್ಟ ಶಕ್ತಿಗಳ ತೊಂದರೆಗಳಿಂದ ಆಗಿರುತ್ತದೆ. ನಾವು ಎಷ್ಟು ಹೆಚ್ಚು ಸೇವೆ ಮತ್ತು ಸಾಧನೆಯನ್ನು ಮಾಡುತ್ತೇವೆಯೋ, ಅಷ್ಟು ನಮ್ಮ ಪ್ರಾರಬ್ಧ ಮತ್ತು ಕೆಟ್ಟ ಶಕ್ತಿಗಳ ತೊಂದರೆ ಕಡಿಮೆಯಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ‘ಸೇವೆ ಮತ್ತು ಸಾಧನೆ’, ಇವೇ ಪ್ರಾರಬ್ಧ ಮತ್ತು ಕೆಟ್ಟ ಶಕ್ತಿಗಳ ತೊಂದರೆಯನ್ನು ಕಡಿಮೆ ಮಾಡುವ ಅತ್ಯುತ್ತಮ ಮಾರ್ಗವಾಗಿದೆ !

೪. ‘ನನಗೆ ಈ ಕೆಲವು ಸೇವೆಗಳಿಂದ ತೊಂದರೆಯಾಗಬಹುದು; ಆದ್ದರಿಂದ ನನಗೆ ಆ ಸೇವೆ ಬೇಡ’ ಎಂದು ವಿಚಾರ ಮಾಡುವ ಸಾಧಕನು ‘ಆ ಸೇವೆಯನ್ನು ತಳಮಳದಿಂದ ಮಾಡಿದರೆ ದೇವರು ನಮ್ಮ ಕಾಳಜಿಯನ್ನು ಖಂಡಿತವಾಗಿಯೂ ತೆಗೆದುಕೊಳ್ಳುತ್ತಾನೆ’, ಎಂಬ ವಿಚಾರವನ್ನೇಕೆ ಮಾಡುವುದಿಲ್ಲ.

೫. ದೇವರ ಶಕ್ತಿ ಅಪಾರವಿದೆ. ಶಾರೀರಿಕ ಅಥವಾ ಮಾನಸಿಕ ಅನಾರೋಗ್ಯದಿಂದ ನನ್ನ ದೇಹ ಅಥವಾ ಮನಸ್ಸಿನ ಶಕ್ತಿ ಕ್ಷೀಣಿಸಿದ್ದರೂ, ನಾನು ಭಾವವನ್ನು ಇಟ್ಟುಕೊಂಡರೆ, ನನಗೆ ಈಶ್ವರನ ಶಕ್ತಿ ಸಿಗಲಿದೆ’ ಎನ್ನುವ ವಿಚಾರವನ್ನು ಮಾಡಿ ಭಾವದ ಸ್ತರದ ಪ್ರಯತ್ನಗಳನ್ನು ಹೆಚ್ಚಿಸಬೇಕು. ಇದರಿಂದ ನಮ್ಮ ಉತ್ಸಾಹ ಮತ್ತು ಕಾರ್ಯಕ್ಷಮತೆಯಲ್ಲಿ ವೃದ್ಧಿಯಾಗುತ್ತದೆ.

೬. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಗೆ ಪ್ರತಿದಿನ ಬಹಳ ಆಯಾಸವಿರುವಾಗಲೂ ಅವರು ಒಬ್ಬ ಸಾಧಕನೊಂದಿಗೆ ಕುಳಿತು ಗಣಕಯಂತ್ರದಲ್ಲಿ (ಕಂಪ್ಯೂಟರಿನಲ್ಲಿ) ಗ್ರಂಥಗಳ ಸಂಕಲನ ಸೇವೆಯನ್ನು ಮಾಡುತ್ತಾರೆ. ಒಮ್ಮೆ ಅವರಿಗೆ ಅತಿಯಾದ ಆಯಾಸದಿಂದ ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆಗ ಅವರು ಸಾಧಕನಿಗೆ, ”ನಾನು ಹಾಸಿಗೆಯ ಮೇಲೆ ಮಲಗಿಕೊಂಡು ಗ್ರಂಥಗಳ ಲೇಖನವನ್ನು ಪರಿಶೀಲಿಸುತ್ತೇನೆ !” ಎಂದು ಹೇಳಿದರು.

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಅಧ್ಯಾತ್ಮದ ಇಷ್ಟು ಉನ್ನತ ಸ್ಥಾನದಲ್ಲಿರುವಾಗಲೂ ಶಾರೀರಿಕ ಸ್ಥಿತಿಯನ್ನು ಮೆಟ್ಟಿನಿಂತು ಯಾವ ರೀತಿ ಸೇವೆಯ ತಳಮಳವನ್ನು ತೋರಿಸುತ್ತಾರೆಯೋ, ಅದೇ ರೀತಿಯ ತಳಮಳವನ್ನು ನಾವೂ ತೋರಿದರೆ, ಶ್ರೀವಿಷ್ಣು ಸ್ವರೂಪವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ನಮಗೆ ಸೇವೆಗಾಗಿ ಶಕ್ತಿಯನ್ನು ಖಂಡಿತವಾಗಿಯೂ ನೀಡುತ್ತಾರೆ.

೭. ಅನೇಕ ಸಾಧಕರು ಅನಾರೋಗ್ಯ ಮತ್ತು ದುಷ್ಟ ಶಕ್ತಿಗಳ ತೊಂದರೆ ಇರುವಾಗಲೂ  ಅವರು ಸಮರ್ಪಿತಭಾವದಿಂದ ತಳಮಳದಿಂದ ಸೇವೆಯನ್ನು ಮಾಡಿದಾಗ, ಅವರಿಗೆ ತಮ್ಮ ಸ್ವಂತ ಶಾರೀರಿಕ ಸ್ಥಿತಿಯ ಅಥವಾ ತೊಂದರೆಗಳ ಅರಿವೂ ಆಗುವುದಿಲ್ಲ. ಅಂತಹ ಸಾಧಕರಿಗೆ ದೇವರು ಕೃಪಾಶೀರ್ವಾದ ಖಂಡಿತವಾಗಿಯೂ ಮಾಡುತ್ತಾನೆ. ಸನಾತನ ಸಂಸ್ಥೆಯ ಸದ್ಗುರು ಅನುರಾಧಾ ವಾಡೇಕರ್, ಪೂ (ಸೌ.) ಸಂಗೀತಾ ಜಾಧವ್, ಪೂ. (ಶ್ರೀಮತಿ) ಮಂದಾಕಿನಿ ಡಗವಾರ್, ಪೂ. (ಸೌ.) ಮನೀಷಾ ಪಾಠಕ ಅವರಂತಹ ಅನೇಕ ಸಂತರು ಶಾರೀರಿಕ ಅನಾರೋಗ್ಯ ಕಾಡುತ್ತಿದ್ದರೂ ತಳಮಳದಿಂದ ಮತ್ತು ಸಂತೋಷದಿಂದ ಸೇವೆ ಮತ್ತು ಸಾಧನೆಯನ್ನು ಮಾಡಿದರು; ಆದ್ದರಿಂದ, ಅದರ ಫಲಸ್ವರೂಪ, ದೇವರು ಅವರ ಆಧ್ಯಾತ್ಮಿಕ ಉನ್ನತಿಯನ್ನು ಶೀಘ್ರವಾಗಿ  ಮಾಡಿಸಿಕೊಂಡನು. ನಾವು ಕೂಡ ಅವರ ಅನುಕರಣೆ ಮಾಡಿದರೆ, ದೇವರು ನಮ್ಮ ಆಧ್ಯಾತ್ಮಿಕ ಉನ್ನತಿಯನ್ನು ಖಂಡಿತವಾಗಿಯೂ ಮಾಡಿಸಿಕೊಳ್ಳುತ್ತಾನೆ.

೮. ಶಾರೀರಿಕ ಅಥವಾ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವಾಗ ಮನಸ್ಸಿನಲ್ಲಿ ಕಿರಿಕಿರಿಯಾಗುತ್ತಿದ್ದರೆ, ಅಸ್ವಸ್ಥತೆ ಹೆಚ್ಚುತ್ತಿದ್ದರೆ ಅಥವಾ ನಕಾರಾತ್ಮಕತೆ; ನಿರಾಶೆ ಉಂಟಾಗುತ್ತಿದ್ದರೆ, ಅದಕ್ಕಾಗಿ ಮನಸ್ಸಿಗೆ ಸ್ವಯಂಸೂಚನೆ ನೀಡಬೇಕು ಮತ್ತು ಅವಶ್ಯಕತೆಯನುಸಾರ ಮನೋವೈದ್ಯರ ಮಾರ್ಗದರ್ಶನವನ್ನೂ ಪಡೆದುಕೊಳ್ಳಬೇಕು.’ – ಪೂ. ಸಂದೀಪ ಅಳಶಿ (೨೦.೫.೨೦೨೩)