ಸಂತರು ಅಥವಾ ಜವಾಬ್ದಾರ ಸಾಧಕರು ತಪ್ಪುಗಳು ಹೇಳುವ ಹಿಂದಿನ ದೃಷ್ಟಿಕೋನ ತಿಳಿದುಕೊಳ್ಳಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಂತರು ಅಥವಾ ಜವಾಬ್ದಾರ ಸಾಧಕರು ತಪ್ಪುಗಳು ಹೇಳಿದ ನಂತರ ಅಥವಾ ಅವರ ಸೇವೆಯ ವರದಿ ತೆಗೆದುಕೊಂಡರೆ ಕೆಲವು ಸಾಧಕರಿಗೆ ಅಪಮಾನವಾದಂತಾಗಿ ಬೇಸರ ಆಗುತ್ತದೆ. ಸೇವೆಯಲ್ಲಿ ತಪ್ಪುಗಳು ಆಗಿಯೇ ಆಗುತ್ತವೆ. ನಾವು ಸಾಧ್ಯವಾದಷ್ಟು ಸೇವೆ ಮಾಡುತ್ತೇವೆ. ಆದರೂ ಸಂತರು ಅಥವಾ ಜವಾಬ್ದಾರ ಸಾಧಕರು ನಮ್ಮ ಸೇವೆಯ ವರದಿಯನ್ನು ಏಕೆ ತೆಗೆದುಕೊಳ್ಳುತ್ತಾರೆ ? ಎಂದು ಸಾಧಕರ ಮನಸ್ಸಿನಲ್ಲಿ ಪ್ರತಿಕ್ರಿಯೆ ಬರುತ್ತದೆ. ಸಾಧಕರು ತಮ್ಮ ಕ್ಷಮತೆಮೀರಿ, ಪರಿಪೂರ್ಣ ಮತ್ತು ಜವಾಬ್ದಾರಿ ತೆಗೆದುಕೊಂಡು ಸೇವೆ ಮಾಡಿದರೆ ಅವರ ಸೇವೆಯ ಫಲನಿಷ್ಪತ್ತಿ ಹೆಚ್ಚಾಗಿ ಸಾಧನೆಯಲ್ಲಿ ಬೇಗನೆ ಪ್ರಗತಿ ಆಗುತ್ತದೆ. ಆದಕಾರಣ ಸಂತರು ಅಥವಾ ಜವಾಬ್ದಾರ ಸಾಧಕರು ಸಾಧಕರಿಗೆ ತಪ್ಪು ಹೇಳುತ್ತಾರೆ, ಸೇವೆಯ ವರದಿ ತೆಗೆದುಕೊಳ್ಳುತ್ತಾರೆ.

(ಪೂ.) ಶ್ರೀ. ಸಂದೀಪ ಆಳಶಿ,

ನನ್ನ ಸೌಭಾಗ್ಯದಿಂದ ನನಗೆ ಹಾಗೂ ಸದ್ಗುರು ಸತ್ಯವಾನ ಕದಮ, ಸದ್ಗುರು ಅನುರಾಧಾ ವಾಡೇಕರ, ಶ್ರೀ. ದಿನೇಶ ಶಿಂದೆ ಹೀಗೆ ಕೆಲವು ಜನರಿಗೆ ೪ – ೫ ವರ್ಷ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಅಮೂಲ್ಯ ಸತ್ಸಂಗ ಲಭಿಸಿತ್ತು. ಅವರೇ ನಮಗೆ ವಿವಿಧ ಸೇವೆಗಳನ್ನು ಮಾಡಲು ಕಲಿಸಿದರು. ಸೇವೆ ಮಾಡುವಾಗ ನಮ್ಮಿಂದ ಬಹಳಷ್ಟು ಸಣ್ಣಪುಟ್ಟ ತಪ್ಪುಗಳು ಆಗುತ್ತಿದ್ದವು. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಪ್ರತಿಯೊಂದು ಸಲ ಅದನ್ನು ನಮಗೆ ತೋರಿಸುತ್ತಿದ್ದರು ಮತ್ತು ಕೆಲವು ಸಲ ಎಲ್ಲರ ಎದುರು ನಮಗೆ ಸಿಟ್ಟಿನಿಂದ ತಪ್ಪುಗಳನ್ನು ಹೇಳುತ್ತಿದ್ದರು. ಆ ಸಮಯದಲ್ಲಿ ನಾವು ಎಲ್ಲರೂ ಸಾಧನೆಯಲ್ಲಿ ಹೊಸಬರಾಗಿದ್ದರೂ ನಮಗೆ ಯಾರಿಗೂ ಇದರ ಬಗ್ಗೆ ಬೇಸರ ಆಗಿರಲಿಲ್ಲ, ಅದರ ಬದಲು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ನಮಗೆ ಅಧಿಕಾರದಿಂದ ತಪ್ಪು ಹೇಳುತ್ತಾರೆ, ಸಿಟ್ಟು ಮಾಡಿಕೊಳ್ಳುತ್ತಾರೆ, ಇದರ ಬಗ್ಗೆ ನಮಗೆ ಒಳ್ಳೆಯದೇ ಅನಿಸುತ್ತಿತ್ತು. ಆದ್ದರಿಂದ ಅವರು ತೋರಿಸಿದ ತಪ್ಪುಗಳ ಕಡೆಗೆ ನಾವು ಸಕಾರಾತ್ಮಕ ದೃಷ್ಟಿಕೋನದಿಂದ ನೋಡುತ್ತಿದ್ದೆವು. ಅವರು ಹೇಳಿರುವ ಬಹಳಷ್ಟು ತಪ್ಪುಗಳು ಇಂದಿಗೂ ನಮ್ಮ ನೆನಪಿನಲ್ಲಿದೆ. ಅವರು ತಪ್ಪುಗಳು ಹೇಳಿರುವುದರಿಂದ ನಾವು ಪರಿಪೂರ್ಣ ಸೇವೆ ಮಾಡಲು ಕಲಿತೆವು. ಇದುವೇ ಇತರರು ನಮಗೆ ತಪ್ಪಿನ ಅರಿವು ಮಾಡಿಕೊಡುವುದರ ಮಹತ್ವವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ನಮಗೆ ಸೇವೆ ನೀಡುವಾಗ ಅದನ್ನು ಎಷ್ಟು ಸಮಯದೊಳಗೆ ಪೂರ್ಣ ಮಾಡಬೇಕು, ಎಂದು ಹೇಳುತ್ತಿದ್ದರು ಮತ್ತು ಆ ಸೇವೆಯ ವರದಿಯನ್ನು ಸಹ ತೆಗೆದುಕೊಳ್ಳುತ್ತಿದ್ದರು. ನಮ್ಮಿಂದ ಸೇವೆ ಪೂರ್ಣ ಆಗಲು ತಡವಾದರೆ ಅದರ ಅರಿವನ್ನು ಕೂಡ ಮಾಡಿಕೊಡುತ್ತಿದ್ದರು. ಈ ರೀತಿ ನಮ್ಮ ಸೇವೆಯ ಫಲನಿಷ್ಪತ್ತಿ ಹೆಚ್ಚಿಸುವುದರ ಬಗ್ಗೆ ಅವರು ಸದಾ ಜಾಗರೂಕರಿರುತ್ತಿದ್ದರು. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ್‌ ಇವರಿಂದಲೇ ನಾವು ಸೇವೆ, ಸಾಧನೆಯಲ್ಲಿ ಸಕ್ಷಮರಾಗಲು ಸಾಧ್ಯವಾಯಿತು. ಅದಕ್ಕಾಗಿ ನಾವು ಅವರ ಚರಣಗಳಲ್ಲಿ ಕೃತಜ್ಞರಾಗಿದ್ದೇವೆ. ಎಲ್ಲಾ ಸಾಧಕರು ಮೇಲಿನ ದೃಷ್ಟಿಕೋನವನ್ನು ಗಮನದಲ್ಲಿಟ್ಟು ಸಾಧನೆಯಲ್ಲಿ ಮುನ್ನಡೆದರೆ ಅವರು ಸದಾ ಸಕಾರಾತ್ಮಕವಾಗಿರಲು ಸಾಧ್ಯವಾಗಿ ಅವರ ಸೇವೆಯ ಫಲನಿಷ್ಪತ್ತಿ ಹೆಚ್ಚುತ್ತದೆ. – ಪೂ. ಸಂದೀಪ ಆಳಶಿ (೬.೭.೨೦೨೩)