ಸಂತರನ್ನು ಬಹಿರ್ಮುಖ ದೃಷ್ಟಿಯಿಂದ ಅಲ್ಲ, ಆದರೆ ಅಂತರ್ಮುಖ ದೃಷ್ಟಿಯಿಂದ ನೋಡಿರಿ !

(ಪೂ.) ಶ್ರೀ. ಸಂದೀಪ ಆಳಶಿ,

‘ಸಂತರ ಸಹವಾಸ ಪಡೆಯಲು ತುಂಬಾ ಭಾಗ್ಯ ಬೇಕಾಗುತ್ತದೆ. ಸಾಧಕರು ಸಂತರನ್ನು ಅಂತರ್ಮುಖ ದೃಷ್ಟಿಯಿಂದ ನೋಡಿದಾಗ ಮಾತ್ರ ಅವರಿಗೆ ಸಂತರಲ್ಲಿನ ದೇವತ್ವದ ನಿಜವಾದ ಲಾಭ ಆಗುತ್ತದೆ. ‘ಸಂತರ ಸಹವಾಸ ಪಡೆದ ನಂತರ ಅವರಲ್ಲಿನ ಚೈತನ್ಯದ ಲಾಭವಾಗಲು ಪ್ರಾರ್ಥನೆ ಮಾಡುವುದು, ‘ಸಂತರು ಏನೆಲ್ಲ ಹೇಳುತ್ತಾರೋ ಅದು ನಮ್ಮ ಕಲ್ಯಾಣಕ್ಕಾಗಿಯೆ ಇದೆ’ ಎಂದು ತಿಳಿದುಕೊಳ್ಳುವುದು, ಅವರ ಗುಣಗಳ ಅಭ್ಯಾಸ ಮಾಡಿ ಆ ಗುಣವನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದು, ಅವರಿಂದ ಆಧ್ಯಾತ್ಮಿಕ ಮಟ್ಟದಲ್ಲಿ ಕಲಿಯುವುದು, ಅವರ ಸಹವಾಸದಲ್ಲಿ ಭಾವದ ಸ್ತರದಲ್ಲಿ ಇರುವುದು’, ಇಂತಹ ಪ್ರಯತ್ನ ಮಾಡುವುದು, ಅಂದರೆ ಸಂತರನ್ನು ಆಂತರ್ಮುಖ ದೃಷ್ಟಿಯಿಂದ ನೋಡುವುದು  ಎಂದರ್ಥ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ತಮ್ಮ ಗುರುಗಳ ಮುಂದೆ ಎಂದಿಗೂ ಕುಳಿತುಕೊಳ್ಳುತ್ತಿರಲಿಲ್ಲ, ಯಾವಾಗಲೂ ನಿಂತುಕೊಂಡಿದ್ದು ಗುರುಗಳು ಸಹಜ ಮಾತನಾಡಿದÀ ಪ್ರತಿಯೊಂದು ವಾಕ್ಯದಿಂದ ಕಲಿಯುತ್ತಿದ್ದರು ! ಸಂತರ ಸಹವಾಸದಲ್ಲಿರಲು ಅವಕಾಶ ಸಿಕ್ಕಿರುವ ಸಾಧಕರು ಸಹ ಸಾಧನೆಯ ಪ್ರಯತ್ನ ವೃದ್ಧಿಸಬೇಕು.’

– ಪೂ. ಸಂದೀಪ ಆಳಶಿ