ಹಿಂದೂ ರಾಷ್ಟ್ರ ಸ್ಥಾಪನೆಯ ಧರ್ಮಕಾರ್ಯದಲ್ಲಿ ಪಾಲ್ಗೊಂಡು ತಮ್ಮ ಉದ್ಧಾರ ಮಾಡಿಕೊಳ್ಳಿ ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ
ಸನಾತನ ಸಂಸ್ಥೆಯ ವತಿಯಿಂದ ಪೂ. ರಮಾನಂದ ಗೌಡ ಇವರು ಇತ್ತೀಚೆಗೆ ‘ಕೊರೊನಾ ಮಹಾಮಾರಿಯ ವಿರುದ್ಧ ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಹೋರಾಡಬೇಕು ? ಈ ವಿಷಯ ದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾರ್ಗದರ್ಶನ ಮಾಡುತ್ತಿದ್ದರು. ಇದರ ನೇರ ಪ್ರಸಾರದ ಸಮಯದಲ್ಲಿ ೪ ಸಾವಿರದ ೩೦೦ ಜನರು ಹಾಗೂ ಮಾರ್ಗದರ್ಶನದ ನಂತರ ದಿನವಿಡೀ ೨೦ ಸಾವಿರ ಜಿಜ್ಞಾಸುಗಳು ಕಾರ್ಯಕ್ರಮದ ವಿಡಿಯೋ ನೋಡಿದರು.