ಸಹಜಭಾವದಲ್ಲಿರುವ ಇತರರಿಗೆ ಸಹಾಯ ಮಾಡುವ ಮತ್ತು ಸಂತರು ಹಾಗೂ ಗುರುಗಳ ಬಗ್ಗೆ ವಾತ್ಸಲ್ಯವನ್ನು ಹೊಂದಿರುವ ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಪ್ರಭು (೪ ವರ್ಷ)

ಪೂ. ರಾಧಾ ಪ್ರಭು ಅಜ್ಜಿಯವರು ಸಾಧಕರ ಜೊತೆಗೆ ಜಪ ಮಾಡಲು ಕುಳಿತುಕೊಳ್ಳುತ್ತಾರೆ. ಆ ಸಮಯದಲ್ಲಿ ಪೂ. ಭಾರ್ಗವರಾಮ ನಾಮಜಪಕ್ಕಾಗಿ ಕುಳಿತುಕೊಳ್ಳುತ್ತಾರೆ. ನಾಮಜಪವಾದ ಕೂಡಲೇ ಪೂ. ಭಾರ್ಗವರಾಮ ಪೂ. ಅಜ್ಜಿಯ ಚರಣಗಳ ಕೆಳಗಿಟ್ಟಿರುವ ಫುಟ್‌ರೆಸ್ಟ್ ಮತ್ತು ಆಸನ (ಮ್ಯಾಟ)ವನ್ನು ತಕ್ಷಣವೇ ತೆಗೆದು ಇಡುತ್ತಾರೆ.

ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯಿಂದ ಜೀವವು ಬೇಗನೆ ಪೂರ್ಣತ್ವಕ್ಕೆ ಹೋಗುತ್ತದೆ !

ಸಾಧನೆಯ ಅನೇಕ ಮಾರ್ಗಗಳಿವೆ. ನಾವು ‘ಓಂ’ ಕಾರದ ಸಾಧನೆ ಮಾಡಿದೆವು, ಧ್ಯಾನಧಾರಣೆ ಮಾಡಿದೆವು, ಅಲಿಪ್ತರಾಗಿದ್ದು ಅಜ್ಞಾತ ಸ್ಥಳಕ್ಕೆ ಹೋಗಿ ಸಾಧನೆಯನ್ನು ಮಾಡಿದೆವು ಅಥವಾ ಶಕ್ತಿಪಾತಯೋಗಾನುಸಾರ ಸಾಧನೆಯನ್ನು ಮಾಡಿದೆವು, ಆದರೂ ಈ ಸಾಧನೆಯು ಪೂರ್ಣತ್ವಕ್ಕೆ ಹೋದರೆ ಮಾತ್ರ ಆ ಜೀವಕ್ಕೆ ಮೋಕ್ಷಪ್ರಾಪ್ತಿಯಾಗುತ್ತದೆ.

೨೦೨೫ ರ ತನಕ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿದೆ ! – ಪರಾತ್ಪರ ಗುರು ಡಾ. ಆಠವಲೆ

ಸಂತರು ಹೇಳಿದಂತೆ ಆಪತ್ಕಾಲ ಮುಂದೆ ಹೋದರೂ ಯಾವುದೇ ಸಮಯದಲ್ಲಾದರೂ ಪ್ರಾರಂಭವಾಗಬಹುದು. ಕೊರೊನಾದಂತಹ ಸಾಂಕ್ರಾಮಿಕ ರೋಗಗಳ ಮಾಧ್ಯಮದಿಂದ ನಾವೆಲ್ಲರೂ ಇದನ್ನು ಅನುಭವಿಸಿದ್ದೇವೆ. ಮೂರನೇಯ ಮಹಾಯುದ್ಧವು ಯಾವುದೇ ಸಮಯದಲ್ಲಿ ಆಗಬಹುದು. ಆದ್ದರಿಂದ ಸಾಧಕರು ಆಪತ್ಕಾಲದ ಸಿದ್ಧತೆಯನ್ನು ಮುಂದುವರಿಸಬೇಕು.’

ಮದುವೆಯಾಗದ (ಅವಿವಾಹಿತ) ವಯಸ್ಕರ ಮಹಿಳೆಯರ ಹೆಸರುಗಳ ಮುಂದೆ ‘ಸುಶ್ರೀ’ ಎಂಬ ಉಪಾಧಿಯನ್ನು ಹಾಕಬೇಕು

ಕನ್ನಡದಲ್ಲಿ ಲಭ್ಯವಿರುವ ಉಪಾಧಿಗಳನ್ನು ಅಧ್ಯಯನ ಮಾಡುವ ಮೂಲಕ, ಸಂಸ್ಕೃತ ಭಾಷೆಯಲ್ಲಿ ಮದುವೆಯಾಗದ(ಅವಿವಾಹಿತ) ವಯಸ್ಕರ (೪೦ ವರ್ಷಕ್ಕಿಂತ ಮೇಲ್ಪಟ್ಟ) ಕನ್ಯೆಯರಿಗೆ (ಮಹಿಳೆಯರಿಗೆ) ‘ಸುಶ್ರೀ’ ಎಂಬ ಶೀರ್ಷಿಕೆಯನ್ನು ನೀಡುವುದು ಸೂಕ್ತವೆಂದು ತೋರುತ್ತದೆ.

ಸಾಧಕರ ಸೇವೆಯ ಜವಾಬ್ದಾರಿ ಇರುವವರು ಸಾಧಕರ ವ್ಯಷ್ಟಿ ಸಾಧನೆಯ ಕಡೆಗೂ ಗಾಂಭೀರ್ಯದಿಂದ ಗಮನ ನೀಡುವುದು ಆವಶ್ಯಕ !

‘ಗುರುಕಾರ್ಯವನ್ನು ಹೆಚ್ಚಿಸುವುದು’, ಸಮಷ್ಟಿ ಸಾಧನೆಯ ಒಂದು ಅಂಗವಾಗಿದ್ದರೆ, ‘ಸಾಧಕರ ಸಾಧನೆಯು ಉತ್ತಮವಾಗಲು ಪ್ರಯತ್ನಿಸುವುದು’, ಇದು ಸಮಷ್ಟಿ ಸಾಧನೆಯ ಎರಡನೇ ಅಂಗವಾಗಿದೆ. ಜವಾಬ್ದಾರ ಸಾಧಕರು ಎರಡೂ ಅಂಗಗಳಿಂದ ಸೇವೆಯನ್ನು ಮಾಡಿದರೆ, ಅವರ ಸೇವೆಯು ಪರಿಪೂರ್ಣವಾಗುವುದು.

ಇಂದಿನ ಹಿರಿಯ ನಾಗರಿಕರು : ಒಂದು ಸಕಾರಾತ್ಮಕ ಭಾಗ !

ಹಿರಿಯ ನಾಗರಿಕರಲ್ಲಿ ಶೇ. ೨೫ ರಿಂದ ೩೦ ರಷ್ಟು ವೃದ್ಧರು ಬಡತನರೇಖೆಯ ಕೆಳಗಿದ್ದಾರೆ. ಅವರ ಸ್ಥಿತಿ ಮಾತ್ರ ದಯನೀಯವಾಗಿದೆ. ದುರ್ಬಲ ಆರ್ಥಿಕ ಸ್ಥಿತಿ, ಅಸಮರ್ಪಕ ಆರೋಗ್ಯ ಸೌಲಭ್ಯಗಳು ಹಾಗೂ ಅಭದ್ರತೆಯಿಂದಾಗಿ ಈ ಹಿರಿಯ ನಾಗರಿಕರ ಗುಂಪಿನ ಬಗ್ಗೆ ಸಮಾಜ ಮತ್ತು ಸರಕಾರ ಗಮನ ಹರಿಸುವುದು ಅತ್ಯಂತ ಆವಶ್ಯಕವಾಗಿದೆ.

ಶಿಕ್ಷಣ ವ್ಯವಸ್ಥೆಗೆ ಪುರಾವೆಗಳ ಆಧಾರವಿರುವುದು ಆವಶ್ಯಕ !

ಮನುಷ್ಯನಿಗೆ ಭೌತಿಕ ಸಂಪನ್ನತೆಯನ್ನು ಪ್ರದಾನಿಸುವುದರೊಂದಿಗೆ ದೈವೀ ಸಂಪತ್ತು (ಚಾರಿತ್ರ್ಯ ನಿರ್ಮಿತಿ) ಪ್ರಾಪ್ತ ಮಾಡಿಕೊಡಬಹುದಾದ, ಮನುಷ್ಯನ ಆಂತರ್ಯದಲ್ಲಿರುವ ಶಕ್ತಿಗಳನ್ನು ಜಾಗೃತ ಮಾಡುವ, ಹಾಗೆಯೇ ಯಾವುದರಲ್ಲಿ ಕಲ್ಯಾಣಕರ ಧ್ಯೇಯದ ವರೆಗೆ ತಲುಪಿಸುವ ಸಾಮರ್ಥ್ಯವಿರುವುದೋ, ಅಂತಹ ಶಿಕ್ಷಣವು ಇಂದು ಬೇಕಾಗಿದೆ.

ಹಿಂದೂಗಳೇ, ಸ್ವಾಮಿ ವಿವೇಕಾನಂದರ ಆಜ್ಞೆಯಂತೆ ವಿದೇಶಿಯಾಗಿದ್ದರೂ ಭಾರತೀಯ ಭಾಷೆ ಉಪಯೋಗಿಸಲು ಹೇಳಿದ ‘ಭಗಿನಿ ನಿವೇದಿತಾ’ರಿಂದ ಕಲಿಯಿರಿ !

ಭಗಿನಿ ನಿವೇದಿತಾರು “ಭಾಷಣದಲ್ಲಿ ಯಾವುದೇ ವಿಷಯವು ಒಳ್ಳೆಯದೆನಿಸಿದರೆ ಸ್ವಭಾಷೆಯಲ್ಲಿ, ಸಚ್ಚಿದಾನಂದ ಪರಮಾತ್ಮಾ ಕೀ ಜೈ, ಭಾರತಮಾತಾ ಕೀ ಜೈ, ಸದ್ಗುರು ಕೀ ಜೈ, ಎಂದು ಜಯಘೋಷ ಮಾಡಿ” ಎಂದರು. ಯುವಕರು ಕೂಡಲೇ ಆ ನಿರ್ದೇಶನ ಪಾಲಿಸಿದರು.

ಪರಾತ್ಪರ ಗುರು ಡಾಕ್ಟರ ಆಠವಲೆಯವರ ಮೂಗು ಮತ್ತು ಬಾಯಿಯಿಂದ ಉಚ್ಛ್ವಾಸದ ಮೂಲಕ ಹೊರಬೀಳುವ ಗಾಳಿಯು ಬಿಸಿಯಾಗಿರುವುದರ ಕಾರಣಗಳು !

ಪರಾತ್ಪರ ಗುರು ಡಾಕ್ಟರ ಆಠವಲೆಯವರ ಉಚ್ಛ್ವಾಸದಿಂದ ಪ್ರಕ್ಷೇಪಿಸುವ ಮಾರಕ ಶಕ್ತಿಯು ಬಹಳಷ್ಟು ಇರುವುದರಿಂದ ಅದು ತ್ವಚೆಗೆ ಸಹನೆಯಾಗುವುದಿಲ್ಲ. ಆದುದರಿಂದ ಮೂಗಿನಿಂದ ದೀರ್ಘ ಉಚ್ಛ್ವಾಸವನ್ನು ಬಿಟ್ಟರೆ ಮೂಗಿನ ಕೆಳಗಿನ ತ್ವಚೆಗೆ ಅನಪೇಕ್ಷಿತ ಬಿಸಿಯ ಅರಿವಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಮಾಡುತ್ತಿದ್ದ ತಂದೆ (ಪ.ಪೂ. ಬಾಳಾಜಿ (ದಾದಾ) ಆಠವಲೆ) ಮತ್ತು ತಾಯಿ (ಪೂ. (ಸೌ.) ನಲಿನಿ ಆಠವಲೆ) ಇವರ ವಿವಿಧ ಸೇವೆಗಳು !

“ಪೂರ್ಣವೇಳೆ ಸಾಧನೆ ಮಾಡುವ ಸಾಧಕನು ಆಶ್ರಮದಲ್ಲಿನ ವಯಸ್ಸಾದವರ ಹಾಗೂ ಅನಾರೋಗ್ಯವಿರುವ ಸಾಧಕರ ಮತ್ತು ಸಂತರ ಸೇವೆಯನ್ನು ಭಾವಪೂರ್ಣವಾಗಿ ಮತ್ತು ಪ್ರೀತಿಯಿಂದ ಮಾಡಿದರೆ ಅವನು ತಾಯಿ-ತಂದೆಯರ ಋಣದಿಂದ ಮುಕ್ತರಾದಂತೆಯೇ ಇದೆ. ಆದ್ದರಿಂದ ಸಾಧಕರು ಅದರ ಬಗ್ಗೆ ಕಾಳಜಿ ಮಾಡುವ ಅವಶ್ಯಕತೆಯಿಲ್ಲ”. ಎಂದು ಪ.ಪೂ. ಡಾಕ್ಟರರು ಹೇಳಿದರು.