‘ನಾಮಜಪಾದಿ ಉಪಾಯಗಳನ್ನು ಮಾಡಿದುದರಿಂದ ಆಧ್ಯಾತ್ಮಿಕ ತೊಂದರೆಗಳು ಹೇಗೆ ದೂರವಾಗುತ್ತವೆ ?’, ಈ ವಿಷಯದ ಲೇಖನಮಾಲೆ !
‘೯.೧೨.೨೦೨೧ ಈ ದಿನ ನನಗೆ ಸೋಲಾಪುರ ಸೇವಾಕೇಂದ್ರದ ಪೂ. (ಕು.) ದೀಪಾಲಿ ಮತಕರ ಇವರ ದೂರವಾಣಿ ಕರೆ ಬಂದಿತು. ಅವರು, “ಓರ್ವ ಸಂತರಿಗೆ ೧೦೦ ಫ್ಯಾ. ಜ್ವರ ಬಂದಿದೆ ಮತ್ತು ಅವರ ತಲೆ ತುಂಬಾ ನೋಯುತ್ತಿದೆ, ತಲೆ ಎಷ್ಟೊಂದು ನೋಯುತ್ತಿದೆ ಎಂದರೆ, ಅವರು ಅಕ್ಷರಶಃ ಅಳುತ್ತಿದ್ದಾರೆ. ನೀವು ಅವರ ಮೇಲೆ ನಾಮಜಪಾದಿ ಉಪಾಯಗಳನ್ನು ಮಾಡಬಹುದೇ ?” ಎಂದು ಕೇಳಿದರು. ಆಗ ನಾನು, “ನಾನು ತಕ್ಷಣ ನಾಮಜಪವನ್ನು ಆರಂಭಿಸುತ್ತೇನೆ. ನೀವು ೧೦ – ೧೫ ನಿಮಿಷಗಳ ನಂತರ ‘ಅವರ ತೊಂದರೆಯಲ್ಲಿ ಏನು ಬದಲಾವಣೆಯಾಗುತ್ತದೆ ?’, ಎಂಬುದನ್ನು ನನಗೆ ತಿಳಿಸಿರಿ”, ಎಂದು ಹೇಳಿದೆನು.
೧. ಯಾವುದಾದರೊಬ್ಬ ದೂರದ ವ್ಯಕ್ತಿಯ ಮೇಲೆ ನಾಮಜಪಾದಿ ಉಪಾಯಗಳನ್ನು ಮಾಡಲು ಅವನನ್ನು ಸ್ಮರಿಸಿ ಆಧ್ಯಾತ್ಮಿಕ ಸ್ತರದಲ್ಲಿ ಉಪಾಯಗಳನ್ನು ಮಾಡಿದರೆ ಆ ವ್ಯಕ್ತಿಯ ಮೇಲೆ ಉಪಾಯವಾಗುವುದು
ನಾನು ಆ ಸಂತರ ಮೇಲೆ ಉಪಾಯ ಮಾಡತೊಡಗಿದೆನು. ಇದಕ್ಕಾಗಿ ನಾನು ಅವರನ್ನು ಸ್ಮರಿಸಿ ನನ್ನ ಮೇಲೆ ನಾಮಜಪಾದಿ ಉಪಾಯಗಳನ್ನು ಮಾಡತೊಡಗಿದೆನು. ಯಾವುದಾದರೊಬ್ಬ ವ್ಯಕ್ತಿಯ ಮೇಲೆ ಉಪಾಯವನ್ನು ಮಾಡುವಾಗ ಅವರನ್ನು ಸ್ಮರಿಸಿದರೆ ಆ ವ್ಯಕ್ತಿಯ ಸ್ಪಂದನಗಳು ನಮ್ಮ ಶರೀರದ ಮೇಲೆ ಅರಿವಾಗುತ್ತವೆ ಮತ್ತು ಆಗ ನಾವು ನಮ್ಮ ಮೇಲೆ ನಾಮಜಪಾದಿ ಉಪಾಯವನ್ನು ಮಾಡಿದರೆ ಆ ವ್ಯಕ್ತಿಗೆ ಆಧ್ಯಾತ್ಮಿಕ ಲಾಭವಾಗಿ ಅವರ ತೊಂದರೆಗಳು ದೂರವಾಗುತ್ತವೆ. ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿಯು ಒಟ್ಟಿಗಿರುತ್ತವೆ’ ಈ ಅಧ್ಯಾತ್ಮದಲ್ಲಿನ ಸಿದ್ಧಾಂತಕ್ಕನುಸಾರ ವ್ಯಕ್ತಿಯನ್ನು ಸ್ಮರಿಸಿದರೆ ಅವನ ಸ್ಪಂದನಗಳು ನಮಗೆ ಅರಿವಾಗುತ್ತವೆ.
೨. ಮೊದಲು ಆ ಸಂತರ ಮೇಲಿರುವ ಆವರಣ ಅರಿವಾಗದಿರುವುದು ಮತ್ತು ನಾಮಜಪಾದಿ ಉಪಾಯಗಳನ್ನು ಮಾಡಿದಾಗ ನಿರ್ಗುಣ ಸ್ತರದಲ್ಲಿರುವ ಆವರಣವು ಗಮನಕ್ಕೆ ಬಂದು ಅದನ್ನು ದೂರ ಮಾಡಲು ಸಾಧ್ಯವಾಗುವುದು
ಆ ಸಂತರ ಮೇಲೆ ನಾಮಜಪಾದಿ ಉಪಾಯಗಳನ್ನು ಮಾಡುವಾಗ ಮೊದಲಿಗೆ ನಾನು ‘ಅವರ ಮೇಲೆ ತೊಂದರೆದಾಯಕ ಶಕ್ತಿಯ ಆವರಣ ಇದೆಯೇ ?’, ಎಂದು ನೋಡಿದೆನು. ನನಗೆ ಅವರ ಮೇಲೆ ಆವರಣದ ಅರಿವಾಗುತ್ತಿರಲಿಲ್ಲ. ನನ್ನ ಮನಸ್ಸಿನಲ್ಲಿ, ‘ಆ ಸಂತರಿಗೆ ಇಷ್ಟೊಂದು ವೇದನೆಗಳು ಆಗುತ್ತಿವೆ ಎಂದಾದರೆ, ಅವರ ಮೇಲೆ ಖಂಡಿತವಾಗಿಯೂ ಆವರಣವಿದೆ; ಆದರೆ ಕೆಟ್ಟ ಶಕ್ತಿಗಳು ಅದನ್ನು ಅರಿವು ಮಾಡಿಕೊಡದೇ ನಮ್ಮನ್ನು ಮೋಸಗೊಳಿಸುತ್ತಿವೆ. ಕೆಟ್ಟ ಶಕ್ತಿಗಳು ನಿರ್ಗುಣ ಸ್ತರದಲ್ಲಿ ಆಕ್ರಮಣ ಮಾಡಿ ಆವರಣ ವಿಲ್ಲದಂತೆ ಭಾಸಿಸುತ್ತವೆ’, ಎಂಬ ವಿಚಾರ ಬಂದಿತು. ಆದುದರಿಂದ ನಾನು ಎರಡೂ ಕೈಗಳ ಮಧ್ಯದ ಬೆರಳುಗಳನ್ನು ಪರಸ್ಪರ ಜೋಡಿಸಿ ಮತ್ತು ಮಣಿಕಟ್ಟುಗಳನ್ನು ತಲೆಯ ಎರಡೂ ಬದಿಗಳಿಗೆ ತಾಗಿಸಿ ಗೋಪುರದಂತೆ ಮುದ್ರೆಯನ್ನು (ಛಾಯಾಚಿತ್ರ ಕ್ರಮ. ೧) ಮಾಡಿದೆನು ಮತ್ತು ಅದನ್ನು ನನ್ನ ಕುಂಡಲಿನಿಚಕ್ರಗಳ ಮೇಲೆ ತಿರುಗಿಸಿದೆನು. ಆಗ ನಾನು ‘ನಿರ್ಗುಣ’ ಈ ನಾಮಜಪವನ್ನು ಮಾಡಿದೆನು. ಹೀಗೆ ಮಾಡಿದ ಮೇಲೆ ನನಗೆ ಆ ಸಂತರ ಶರೀರದ ಮೇಲೆ ಕೆಲವೊಂದು ಪ್ರಮಾಣದಲ್ಲಿ ಆವರಣವಿರುವುದು ಅರಿವಾಗತೊಡಗಿತು. ನಾನು ನಾಮಜಪಾದಿ ಉಪಾಯಗಳನ್ನು ಮಾಡಲು ಪುನಃ ನಾಮಜಪವನ್ನು ಹುಡಕಿದೆನು. ಈಗ ‘ಓಂ’ ಈ ನಾಮಜಪ ಬಂದಿತು. ನಂತರ ನಾನು ನನ್ನ ಒಂದು ಕೈಯ ಅಂಗೈಯನ್ನು ನನ್ನ ಶರೀರದ ದಿಕ್ಕಿನಲ್ಲಿಟ್ಟು ಅದರ ಮೇಲೆ ಇನ್ನೊಂದು ಕೈಯ ಅಂಗೈಯನ್ನು, ಮೊದಲ ಅಂಗೈಯ ವಿರುದ್ಧ ದಿಕ್ಕಿಗೆ ಬರುವಂತೆ ಇಟ್ಟೆನು. (ಛಾಯಾಚಿತ್ರ ಕ್ರ. ೨) ಕೈಗಳ ಈ ಮುದ್ರೆಯನ್ನು ಮಾಡಿ ನಾನು ಆ ಮುದ್ರೆಯನ್ನು ನನ್ನ ಎಲ್ಲ ಚಕ್ರಗಳ ಮೇಲೆ ತಿರುಗಿಸಿದೆನು, ಆಗ ಆ ಸಂತರ ಶರೀರದ ಮೇಲಿರುವ ಎಲ್ಲ ಆವರಣ ದೂರವಾಯಿತು. ಈ ಮುದ್ರೆಯಿಂದ ನಮ್ಮ ಮೇಲೆ ಸತತವಾಗಿ ಬರುವ ಕೆಟ್ಟ ಶಕ್ತಿಗಳ ತೊಂದರೆದಾಯಕ ಶಕ್ತಿಯ ಪ್ರವಾಹವನ್ನು ತಡೆಯಲಾಗುತ್ತದೆ, ಹಾಗೆಯೇ ನಮ್ಮ ಮೇಲೆಯೂ ನಾಮಜಪಾದಿ ಉಪಾಯ ಆಗುತ್ತದೆ. ಈ ಮುದ್ರೆಯು ಎರಡು ಅಸ್ತ್ರಗಳಂತೆ ಕಾರ್ಯ ಮಾಡುತ್ತದೆ.
೩. ಆ ಸಂತರ ಮೇಲಿನ ಆವರಣ ದೂರವಾದ ನಂತರ ನಾನು ಅವರಿಗಾಗಿ ಪುನಃ ನಾಮಜಪಾದಿ ಉಪಾಯಗಳನ್ನು ಹುಡುಕಿದೆ. ಆಗ ನನಗೆ ಅವರ ತಲೆಯ ಮೇಲೆ ಮಧ್ಯಭಾಗದಿಂದ ೨ ಸೆಂ.ಮೀ. ಬಲಬದಿಗೆ ನೋವಾಗುತ್ತಿರುವುದು ಅರಿವಾಯಿತು, ಹಾಗೆಯೇ ಅದು ಕೆಟ್ಟ ಶಕ್ತಿಗಳ ಸ್ಥಾನ ಇರುವುದಾಗಿಯೂ ಅರಿವಾಯಿತು.
೪. ತಲೆಯ ಮೇಲಿನ ಕೆಟ್ಟ ಶಕ್ತಿಗಳ ಸ್ಥಳದಲ್ಲಿ ೧೦ ನಿಮಿಷ ಉಪಾಯ ಮಾಡಿದ ನಂತರ ಆ ಸಂತರ ತಲೆ ನೋವು ಶೇ. ೨೦ ರಷ್ಟು ಕಡಿಮೆಯಾಗುವುದು; ಆದರೆ ಅವರ ತಾಪಮಾನ ೧೦೨ ಫ್ಯಾ, ಆಗಿರುವುದಾಗಿ ತಿಳಿಯುವುದು ಮತ್ತು ಇದರಿಂದ ಕೆಟ್ಟ ಶಕ್ತಿಗಳು ಆ ಸಂತರ ಮೇಲೆ ಆವರಣವನ್ನು ತಂದು ಅವರ ಜ್ವರದ ಅರಿವಾಗದಂತೆ ಮಾಡಿರುವುದು ಗಮನಕ್ಕೆ ಬರುವುದು
ನನಗೆ ನಾಮಜಪಾದಿ ಉಪಾಯಗಳಿಗಾಗಿ ‘ಓಂ’ ಈ ನಾಮಜಪವು ಸಿಕ್ಕಿತು. ಅದರಂತೆ ನಾನು ತಲೆಯ ಮೇಲೆ ಕೆಟ್ಟ ಶಕ್ತಿಗಳ ಸ್ಥಾನದಲ್ಲಿ ಅಂಗೈಯನ್ನಿಟ್ಟು ‘ಓಂ’ ಈ ನಾಮಜಪವನ್ನು ೧೦ ನಿಮಿಷಗಳ ಕಾಲ ಮಾಡಿದೆನು. ಅನಂತರ ನನಗೆ ಪೂ. ದೀಪಾಲಿ ಇವರ ದೂರವಾಣಿ ಕರೆ ಬಂದಿತು. ಅವರು, “ಈಗ ಆ ಸಂತರ ತಲೆನೋವು ಶೇ. ೨೦ ರಷ್ಟು ಕಡಿಮೆಯಾಗಿದೆ; ಆದರೆ ಅವರ ತಾಪಮಾನ ೧೦೨ ಫ್ಯಾ. ಆಗಿದೆ”, ಎಂದು ಹೇಳಿದರು. ಆಗ ನಾನು, “ಕೆಟ್ಟ ಶಕ್ತಿಗಳು ಆ ಸಂತರ ಮೇಲೆ ಆವರಣವನ್ನು ತಂದು ಅವರ ಜ್ವರವನ್ನು ಅರಿವು ಮಾಡಿಕೊಟ್ಟಿರಲಿಲ್ಲ. ಈಗ ಆವರಣವನ್ನು ತೆಗೆದ ನಂತರ ಅವರ ಜ್ವರ ಎಷ್ಟಿದೆ ಎಂಬುದು ಪ್ರತ್ಯಕ್ಷ ತಿಳಿಯತೊಡಗಿದುದರಿಂದ ಅದು ೧೦೨ ಫ್ಯಾ. ಇರುವುದು ತಿಳಿಯಿತು. ಹಾಗೆಯೇ ಕೆಟ್ಟ ಶಕ್ತಿಗಳು ಆವರಣ ತಂದು ಆ ಸಂತರ ತಲೆಯ ಮೇಲಿನ ತಮ್ಮ ಸ್ಥಾನವನ್ನೂ ಮುಚ್ಚಿದ್ದವು. ಆವರಣವನ್ನು ತೆಗೆದ ನಂತರ ಅದು ಗಮನಕ್ಕೆ ಬಂದಿತು. ಆದುದರಿಂದ ಈಗ ನಾಮಜಪಾದಿ ಉಪಾಯಗಳನ್ನು ಮಾಡಿ ತೊಂದರೆಗಳನ್ನು ದೂರ ಮಾಡಬಹುದು”, ಎಂದು ಹೇಳಿದೆನು.
೫. ನಾಮಜಪಾದಿ ಉಪಾಯಗಳನ್ನು ಮಾಡಿದ ಮೇಲೆ ತಲೆನೋವು ಪೂರ್ತಿ ಕಡಿಮೆ ಆಗುವುದು ಮತ್ತು ಜ್ವರವೂ ಕಡಿಮೆ ಆಗುವುದು
ನಾನು ಇನ್ನೂ ಅರ್ಧ ಗಂಟೆ ನಾಮಜಪವನ್ನು ಮಾಡಿದಾಗ ನನಗೆ ಆ ಸಂತರ ತೊಂದರೆ ಖಂಡಿತವಾಗಿಯೂ ದೂರವಾಗಿರುವುದು ಅರಿವಾಯಿತು. ಆಗ ಅವರಿಗೆ ದೂರವಾಣಿ ಕರೆ ಮಾಡಿದಾಗ, ಅವರು, “ಈಗ ನನ್ನ ತಲೆನೋವು ಸಂಪೂರ್ಣ ಕಡಿಮೆಯಾಗಿದೆ, ಹಾಗೆಯೇ ನನ್ನ ಜ್ವರವೂ ಕಡಿಮೆಯಾಗಿದೆ. ಈಗ ನನಗೆ ಸಂಪೂರ್ಣ ಆರಾಮವಾಗಿದೆ ”, ಎಂದು ಹೇಳಿದರು.
ಈ ಉದಾಹರಣೆಯಿಂದ ‘ಕೆಟ್ಟ ಶಕ್ತಿಗಳು ಆಕ್ರಮಣ ಮಾಡಿ ಜ್ವರವನ್ನು ಹೇಗೆ ತರಬಹುದು, ಹಾಗೆಯೇ ನಿರ್ಗುಣದಿಂದ ಆಕ್ರಮಣ ಮಾಡಿ ತಮ್ಮ ಸ್ಥಾನ ಮತ್ತು ಆವರಣವನ್ನು ಹೇಗೆ ಅರಿವಾಗಲು ಕೊಡುವುದಿಲ್ಲ’, ಎಂಬುದು ಗಮನಕ್ಕೆ ಬಂದಿತು.’
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೨.೧೨.೨೦೨೧)