ವರ್ಧಂತ್ಯುತ್ಸವ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆ ಇವರ ಸಂದೇಶ

‘ಸನಾತನ ಪ್ರಭಾತ’ ಮೊದಲಿನಿಂದಲೂ ಆದರ್ಶ ರಾಷ್ಟ್ರ ನಿರ್ಮಾಣದ ರಾಜಕೀಯೇತರ ಕಲ್ಪನೆ, ರಾಷ್ಟ್ರ-ಧರ್ಮದ ಹಿತದ ದೃಷ್ಟಿಕೋನ ಹಾಗೂ ಜ್ವಲಂತ ಹಿಂದುತ್ವದ ನಿಲುವಿನ ಮೂಲಕ ವೈಚಾರಿಕ ಕ್ರಾಂತಿಯ ಸಂದೇಶ ನೀಡಿದೆ. ಅನೇಕರು ‘ಸನಾತನ ಪ್ರಭಾತ’ದ ವೈಚಾರಿಕ ಸಂದೇಶವನ್ನು ಕೃತಿಗೆ ತಂದು ರಾಷ್ಟ್ರ-ಧರ್ಮ ರಕ್ಷಣೆಗಾಗಿ ಕೃತಿ ಕೂಡಾ ಮಾಡಿದ್ದಾರೆ. ಜ್ಞಾನಶಕ್ತಿಯಿಂದಾಗಿ ಕ್ರಿಯಾಶಕ್ತಿ ಜಾಗೃತವಾಗುತ್ತದೆ, ಎಂಬುದನ್ನು ‘ಸನಾತನ ಪ್ರಭಾತ’ದ ಜ್ಞಾನಶಕ್ತಿಯು ರುಜುವಾತು ಪಡಿಸಿದೆ.

‘ಸನಾತನ ಪ್ರಭಾತ’ದ ಸ್ವರೂಪ ವೈಚಾರಿಕದ ಜೊತೆ ಆಧ್ಯಾತ್ಮಿಕ ದೃಷ್ಟಿಯನ್ನೂ ನೀಡುತ್ತದೆ. ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾಗುವ ಸಂತರು ಹಾಗೂ ಸಾಧಕರ ಅನುಭವ ಹಾಗೂ ಅನುಭೂತಿಗಳ ಬಗೆಗಿನ ಲೇಖನವು ಸಾಧನೆಯ ಪ್ರಾಯೋಗಿಕ ಅಂಶಗಳ ಬಗ್ಗೆ ಮಾರ್ಗದರ್ಶನ ನೀಡುತ್ತದೆ. ಜಗತ್ತಿನ ಯಾವುದೇ ನಿಯತಕಾಲಿಕೆಯಲ್ಲಿ ಈ ರೀತಿಯ ಅಧ್ಯಾತ್ಮವನ್ನು ಕಲಿಸುವ ಲೇಖನಗಳು ಲಭ್ಯವಿಲ್ಲ. ‘ಸನಾತನ ಪ್ರಭಾತ’ದ ‘ಸಾಧನೆ’ ಹಾಗೂ ‘ಅಧ್ಯಾತ್ಮ’ ಈ ವಿಷಯಗಳ ಕುರಿತು ಲೇಖನಗಳನ್ನು ನಿಯಮಿತವಾಗಿ ಓದಿದರೆ ವಾಚಕರಲ್ಲಿ ಖಂಡಿವಾಗಿಯೂ ಆಧ್ಯಾತ್ಮಿಕ ದೃಷ್ಟಿ ಮತ್ತು ಸಾಧಕತ್ವ ನಿರ್ಮಾಣವಾಗಲಿದೆ. ಅದಕ್ಕಾಗಿ ‘ಸನಾತನ ಪ್ರಭಾತ’ದ ಜ್ಞಾನಶಕ್ತಿಯ ಪರಿಪೂರ್ಣ ಲಾಭ ಪಡೆದುಕೊಳ್ಳಿ ಹಾಗೂ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಒಂದು ಅಂಗವಾಗಿ ಸಹಭಾಗಿಯಾಗುವುದರ ಜೊತೆಗೆ ಈ ಜನ್ಮವನ್ನು ಸಾರ್ಥಕಗೊಳಿಸಲು ಉತ್ತಮ ಸಾಧಕ ನಿರ್ಮಾಣವಾಗುವ ಪ್ರಕ್ರಿಯೆಯನ್ನು ಆರಂಭಿಸಿ !

– (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಸಂಸ್ಥಾಪಕ-ಸಂಪಾದಕರು, ‘ಸನಾತನ ಪ್ರಭಾತ ನಿಯತಕಾಲಿಕೆ ಸಮೂಹ

ಸನಾತನ ಪ್ರಭಾತ ನಿಯತಕಾಲಿಕೆಗಳ ಫಲಶೃತಿ

‘ಸೋ ಸುನಾರ ಕಿ ಎಕ ಲುಹಾರ್ ಕಿ !’, ಎಂದು ಹಿಂದಿ ಭಾಷೆಯಲ್ಲಿ ನಾಣ್ನುಡಿ ಇದೆ. ಅದರ ಅರ್ಥ, ‘ಅಕ್ಕಸಾಲಿಗನ ೧೦೦ ಆಘಾತಗಳಿಂದ ಯಾವ ಕೆಲಸವಾಗುವುದಿಲ್ಲವೋ ಅದು ಕಮ್ಮಾರನ ಒಂದು ಆಘಾತದಿಂದ ಆಗುತ್ತದೆ. ಅದೇ ರೀತಿ ‘ಸನಾತನ ಪ್ರಭಾತ’ ನಿಯಕಾಲಿಕೆಗಳ ಸಂದರ್ಭದಲ್ಲಿ ಇದೆ. ‘ಸನಾತನ ಪ್ರಭಾತ’ದ ಕೆಲವು ಸಾವಿರ ವಾಚಕರು ಯಾರು ರಾಷ್ಟ್ರ-ಧರ್ಮದ ಕಾರ್ಯ ಮಾಡುತ್ತಿದ್ದಾರೆ ಅದನ್ನು ಲಕ್ಷಗಟ್ಟಲೆ ವಾಚಕರಿರುವ ದಿನಪತ್ರಿಕೆಯ ವಾಚಕರು ಮಾಡಲಾರರು !

– (ಪರಾತ್ಪರ ಗುರು) ಡಾ. ಆಠವಲೆ

‘ಸನಾತನ ಪ್ರಭಾತ’ದ ವಾಚಕರು, ಜಾಹೀರಾತುದಾರರು, ವಿತರಕರು ಮತ್ತು ಹಿತಚಿಂತಕರಿಗೆ ಮನಃಪೂರ್ವಕವಾಗಿ ಆಭಾರ ಮತ್ತು ವರ್ಧಂತ್ಯುತ್ಸವದ ನಿಮಿತ್ತ ಎಲ್ಲರ ಆಧ್ಯಾತ್ಮಿಕ ಉನ್ನತಿಯಾಗಲೆಂದು ಪ್ರಾರ್ಥನೆ