ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು
ಓದಿರಿ ಹೊಸ ಲೇಖನಮಾಲೆ : ‘ಸನಾತನದ ದೈವಿ ಬಾಲಕರ ಅಲೌಕಿಕ ಗುಣವೈಶಿಷ್ಟ್ಯಗಳು’
ಪರಾತ್ಪರ ಗುರು ಡಾ. ಆಠವಲೆ ಇವರ ಸಂಕಲ್ಪದಂತೆ ಕೆಲವು ವರ್ಷಗಳಲ್ಲೇ ಈಶ್ವರೀ ರಾಜ್ಯ ಸ್ಥಾಪನೆಯಾಗಲಿದೆ. ಬಹಳಷ್ಟು ಜನರ ಮನಸ್ಸಿನಲ್ಲಿ ‘ಈ ಹಿಂದೂ ರಾಷ್ಟ್ರವನ್ನು ಮುನ್ನಡೆಸುವವರು ಯಾರು ?’ ಎಂಬ ಪ್ರಶ್ನೆ ಬರುತ್ತದೆ. ಈಶ್ವರನು ಉಚ್ಚ ಲೋಕದಿಂದ ದೈವಿ ಬಾಲಕರನ್ನು ಪೃಥ್ವಿಯ ಮೇಲೆ ಜನ್ಮ ಪಡೆಯಲು ಕಳುಹಿಸಿದ್ದಾರೆ. ಅವರಲ್ಲಿರುವ ಪ್ರಬುದ್ಧ ವಿಚಾರ ಮತ್ತು ಅಲೌಕಿಕ ವೈಶಿಷ್ಟ್ಯಗಳನ್ನು ಈ ಮಾಲಿಕೆಯ ಅಂರ್ತಗತ ಪ್ರಕಟಿಸುತ್ತಿದ್ದೇವೆ.
ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/57128.html |
ತಾಯಿ-ತಂದೆಯರೇ, ದೈವಿ ಬಾಲಕರ ಸಾಧನೆಗೆ ವಿರೋಧಿಸದೇ ಅವರ ಸಾಧನೆಯತ್ತ ಗಮನ ಹರಿಸಿ !ಪರಾತ್ಪರ ಗುರು ಡಾ. ಆಠವಲೆ‘ಕೆಲವು ದೈವಿ ಬಾಲಕರ ಆಧ್ಯಾತ್ಮಿಕ ಮಟ್ಟ ಎಷ್ಟು ಒಳ್ಳೆದಿರುತ್ತದೆ ಎಂದರೆ ಅವರು ೨೦-೨೫ ವಯಸ್ಸನ್ನು ತಲುಪುವುದರೊಳಗೆ ಸಂತರಾಗಬಹುದು. ತಾಯಿ-ತಂದೆಯರು ಇಂತಹ ಬಾಲಕರಿಗೆ ಪೂರ್ಣವೇಳೆ ಸಾಧನೆ ಮಾಡಲು ವಿರೋಧಿಸುತ್ತಾರೆ ಮತ್ತು ಅವರಿಗೆ ಮಾಯೆಯಲ್ಲಿನ ಶಿಕ್ಷಣ ನೀಡಿ ಅವರ ಜೀವನವನ್ನು ವ್ಯರ್ಥಗೊಳಿಸುತ್ತಾರೆ. ಸಾಧಕನಿಗೆ ಸಾಧನೆಗೆ ವಿರೋಧ ಮಾಡುವಷ್ಟು ಮಹಾಪಾಪ ಇನ್ನೊಂದಿಲ್ಲ. ಇದನ್ನು ಗಮನದಲ್ಲಿಟ್ಟು ತಾಯಿ-ತಂದೆಯರು ಮಕ್ಕಳ ಸಾಧನೆ ಒಳ್ಳೆಯದಾಗಲು ಗಮನಹರಿಸಿದರೆ ತಾಯಿ-ತಂದೆಯರ ಸಾಧನೆಯಾಗಿ ಅವರೂ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವರು ! – ಪರಾತ್ಪರ ಗುರು ಡಾ. ಆಠವಲೆ (೧೮.೧೦.೨೦೨೧) |
ಬಾಲ್ಯಾವಸ್ಥೆಯಲ್ಲಿಯೆ ಸಾಧನೆಯ ತೀವ್ರ ತಳಮಳವಿರುವ ಹಾಗೂ ಸಾಧನೆಯ ಫ್ರೌಢಿಮೆಯನ್ನು ತೋರಿಸುವಂತಹ ಪುಣೆಯ ಶೇ. ೬೭ ಆಧ್ಯಾತ್ಮಿಕ ಮಟ್ಟದ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) !
ಪರಾತ್ಪರ ಗುರು ಡಾ. ಆಠವಲೆ ಇವರೊಂದಿಗಿನ ಒಂದು ಭೇಟಿಯಲ್ಲಿ ಕು. ಪ್ರಾರ್ಥನಾ ಪಾಠಕ ಇವಳ ಸಾಧನೆಯ ತಳಮಳದ ವಿಷಯದಲ್ಲಿ ಅರಿವಾದ ಹಾಗೂ ಅವಳ ಸಾಧನೆಯ ಪ್ರಬುದ್ಧತೆಯನ್ನು ತೋರಿಸುವ ಕೆಲವು ಅಮೂಲ್ಯ ವಿಷಯಗಳನ್ನು ಇಲ್ಲಿ ಕೊಡಲಾಗಿದೆ. ಅವು ಎಲ್ಲ ಸಾಧಕರೂ ಅಭ್ಯಾಸ ಮಾಡುವ ಹಾಗಿವೆ.
೧. ಕು. ಪ್ರಾರ್ಥನಾಳ ಸಾಧನೆಯ ತಳಮಳ ಹಾಗೂ ಅವಳನ್ನು ಅಪಾರವಾಗಿ ಪ್ರಶಂಸಿಸಿದ ಪರಾತ್ಪರ ಗುರು ಡಾ. ಆಠವಲೆಯವರು !
ಪರಾತ್ಪರ ಗುರು ಡಾ. ಆಠವಲೆ : ಪ್ರಾರ್ಥನಾಳ ಆಧ್ಯಾತ್ಮಿಕ ಮಟ್ಟ ಶೇ. ೬೭ ರಷ್ಟಿದೆ, ಆದ್ದರಿಂದ ಅವಳು ಶೀಘ್ರದಲ್ಲಿಯೇ ಸಂತಳಾಗುವಳಲ್ಲ ! (ಪ್ರಾರ್ಥನಾಳನ್ನು ಉದ್ದೇಶಿಸಿ) ನಂತರ ನೀನು ಸಂತರ ಸಾಲಿನಲ್ಲಿ ಕುಳಿತುಕೊಳ್ಳುವಿ !
ಸೌ. ಸ್ವಾತಿ ಶಿಂದೆ : ಕು. ಪ್ರಾರ್ಥನಾಳ ವೈಶಿಷ್ಟ್ಯವೆಂದರೆ, ‘ಅವಳು ನಮ್ಮ ಸನಾತನದ ಎಲ್ಲ ಗ್ರಂಥಗಳನ್ನು ಅಧ್ಯಯನಪೂರ್ವಕವಾಗಿ ಓದುತ್ತಾಳೆ ಹಾಗೂ ಅದರಿಂದ ಕಲಿಯಲು ಸಿಕ್ಕಿದ ವಿಷಯಗಳನ್ನು ಅವಳು ವಹಿಯಲ್ಲಿ ಬರೆದಿಡುತ್ತಾಳೆ. ಅವಳು ತನಗೆ ಕಲಿಯಲು ಸಿಕ್ಕಿದ ವಿಷಯಗಳನ್ನು ಇತರ ಸಾಧಕರಿಗೂ ಒಳ್ಳೆಯ ರೀತಿಯಲ್ಲಿ ವಿವರಿಸಿ ಹೇಳುತ್ತಾಳೆ. ಪ್ರಾರ್ಥನಾಳು ಅಪಾಲಾಳಿಗೆ (ಕು. ಅಪಾಲಾ ಔಂಧಕರ್ಗೆ, ಅವಳ ವಯಸ್ಸು ೧೪ ವರ್ಷ, ಆಧ್ಯಾತ್ಮಿಕ ಮಟ್ಟ ಶೇ. ೬೧) ದೈವೀ ಬಾಲಕರ ಸತ್ಸಂಗ ತೆಗೆದುಕೊಳ್ಳಲು ಸಹಾಯವನ್ನೂ ಮಾಡುತ್ತಾಳೆ.
ಪರಾತ್ಪರ ಗುರು ಡಾ. ಆಠವಲೆ : ಸನಾತನದ ಎಲ್ಲ ಗ್ರಂಥಗಳನ್ನು ಓದಿದ ಸನಾತನದ ಎಷ್ಟು ಸಾಧಕರಿದ್ದಾರೆ ? ಇವಳೊಬ್ಬಳೇ ಇರ ಬಹುದಲ್ಲ ! ಅದೂ ಇಷ್ಟು ಚಿಕ್ಕ ವಯಸ್ಸಿನಲ್ಲಿ ! ಅವಳು ಇತರರಿಗೆ ಹೇಳಲು ಅದರಲ್ಲಿನ ಟಿಪ್ಪಣಿಗಳನ್ನೂ ಬರೆದಿಡುತ್ತಾಳೆ ! ಇದರಿಂದ ‘ಅವಳು ಶೀಘ್ರದಲ್ಲಿಯೇ ಸಂತಳಾಗುವಳು, ಎನ್ನುವುದರಲ್ಲಿ ಸಂಶಯವಿಲ್ಲ ತಾನೆ ?’
೨. ಸ್ವಾಮಿ ವಿವೇಕಾನಂದರ ಕಥೆಯಿಂದ ಈಶ್ವರಪ್ರಾಪ್ತಿಯ ತಳಮಳವನ್ನು ಕಲಿಯುವ ಕು. ಪ್ರಾರ್ಥನಾ !
ಕು. ಪ್ರಾರ್ಥನಾ ಪಾಠಕ : ಪರಮ ಪೂಜ್ಯರೇ (ಪರಾತ್ಪರ ಗುರು ಡಾ. ಆಠವಲೆ), ‘ಈಶ್ವರಪ್ರಾಪ್ತಿಯ ತಳಮಳ ಹೇಗಿರಬೇಕು ?’, ಎಂಬುದು ನನಗೆ ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರ ಒಂದು ಪ್ರಸಂಗದಿಂದ ಕಲಿಯಲು ಸಿಕ್ಕಿತು.
೨ ಅ. ಶ್ರೀ ರಾಮಕೃಷ್ಣ ಪರಮಹಂಸರು ನರೇಂದ್ರನಿಗೆ (ಸ್ವಾಮಿ ವಿವೇಕಾನಂದರಿಗೆ) ‘ನಿನಗೆ ಸಿದ್ಧಿ ಬೇಕಾಗಿದೆಯೇ ?’, ಎಂದು ಕೇಳಿ ಅದರ ಮೂಲಕ ‘ನೀನು ಮಹತ್ಕಾರ್ಯವನ್ನು ಮಾಡುವಿ’, ಎಂದು ಹೇಳುವುದು : ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದ ಇವರ ನಡುವಿನ ಪ್ರಸಂಗ ಹೀಗಿದೆ. ಸ್ವಾಮಿ ವಿವೇಕಾನಂದರ ಮೊದಲಿನ ಹೆಸರು ‘ನರೇಂದ್ರ’ ಎಂದಾಗಿತ್ತು. ಒಂದು ದಿನ ದಕ್ಷಿಣೇಶ್ವರದ ಪಂಚವಟಿಯಲ್ಲಿ ನರೇಂದ್ರ ಮತ್ತು ಶ್ರೀ ರಾಮಕೃಷ್ಣ ಪರಮಹಂಸರು ಕುಳಿತಿದ್ದರು. ಆಗ ಶ್ರೀ ರಾಮಕೃಷ್ಣ ಪರಮಹಂಸರು ನರೇಂದ್ರನಿಗೆ, “ನಾನು ಕಠೋರವಾದ ತಪಶ್ಚರ್ಯವನ್ನು ಮಾಡುವಾಗ ನನಗೆ ಕೆಲವು ಸಿದ್ಧಿಗಳು ಪ್ರಾಪ್ತಿಯಾಗಿವೆ, ಅವುಗಳು ನಿನಗೆ ಬೇಕೇ ? ಅದರಿಂದ ನೀನು ಮಹತ್ಕಾರ್ಯಗಳನ್ನು ಮಾಡಬಲ್ಲೆ. ದೇವಿ ಕಾಳಿಮಾತೆ ನನಗೆ ಇದನ್ನು ನಿನಗೆ ಕೇಳಲು ಹೇಳಿದ್ದಾಳೆ”, ಎಂದರು.
೨ ಆ. ‘ಯಾವುದೇ ಸಿದ್ಧಿಯಿಂದ ನನಗೆ ಈಶ್ವರಪ್ರಾಪ್ತಿ ಆಗದಿದ್ದರೆ, ಅಂತಹ ಸಿದ್ಧಿಗಳು ನನಗೆ ಬೇಡ’, ಎಂದು ಶ್ರೀ ರಾಮಕೃಷ್ಣ ಪರಮಹಂಸರಿಗೆ ಹೇಳುವ ಸ್ವಾಮಿ ವಿವೇಕಾನಂದರು ! : ಆಗ ನರೇಂದ್ರನು ತಕ್ಷಣವೇ, “ಈ ಸಿದ್ಧಿಗಳು ನನಗೆ ಈಶ್ವರದರ್ಶನ ಅಥವಾ ಈಶ್ವರಪ್ರಾಪ್ತಿಗಾಗಿ ಆವಶ್ಯಕ ಅಥವಾ ಉಪಯುಕ್ತವಾಗಿವೆಯೇ ?”, ಎಂದು ಕೇಳಿದನು.
ಆಗ ಶ್ರೀ ರಾಮಕೃಷ್ಣ ಪರಮಹಂಸರು, “ಇಲ್ಲ. ಅವುಗಳಿಂದ ನಿನಗೆ ಈಶ್ವರನ ದರ್ಶನ ಅಥವಾ ಈಶ್ವರಪ್ರಾಪ್ತಿಗಾಗಿ ಉಪಯೋಗವಿಲ್ಲ; ಆದರೆ ಅವುಗಳಿಂದ ನೀನು ಮಹತ್ಕಾರ್ಯಗಳನ್ನು ಮಾಡಬಲ್ಲೆ”, ಎಂದರು. ಆಗ ನರೇಂದ್ರನು, “ಹಾಗಾದರೆ ನನಗೆ ಆ ಸಿದ್ಧಿಗಳು ಬೇಡ. ಎಲ್ಲಿಯ ತನಕ ನನಗೆ ಈಶ್ವರನ ದರ್ಶನ ಅಥವಾ ಈಶ್ವರಪ್ರಾಪ್ತಿ ಆಗುವುದಿಲ್ಲವೋ, ಅಷ್ಟರವರೆಗೆ ನಾನು ಸಿದ್ಧಿಗಳ ವಿಚಾರವನ್ನೇ ಮಾಡುವುದಿಲ್ಲ. ನನಗೆ ಈಶ್ವರಪ್ರಾಪ್ತಿ ಆದ ನಂತರವೇ ನಾನು ಆ ವಿಷಯಗಳ ವಿಚಾರ ಮಾಡುವೆನು”, ಎಂದನು. ನರೇಂದ್ರನ ಈ ಉತ್ತರವನ್ನು ಕೇಳಿ ಶ್ರೀ ರಾಮಕೃಷ್ಣರು ಅತ್ಯಂತ ಪ್ರಸನ್ನರಾದರು. ಈ ಪ್ರಸಂಗದಿಂದ ನನಗೆ ‘ಈಶ್ವರಪ್ರಾಪ್ತಿಯ ತಳಮಳ ಹೇಗಿರಬೇಕು’, ಎಂಬುದು ಕಲಿಯಲು ಸಿಕ್ಕಿತು. ಪರಮ ಪೂಜ್ಯರೇ, ನೀವೇ ನನ್ನಲ್ಲಿ ಆ ತಳಮಳವನ್ನು ಮೂಡಿಸಬೇಕು, ಹಾಗೂ ಹಾಗೆ ಪ್ರಯತ್ನ ಮಾಡಿಸಿಕೊಳ್ಳಬೇಕು.
ಪರಾತ್ಪರ ಗುರು ಡಾ. ಆಠವಲೆ : ‘ತಾವೇ ನನ್ನಲ್ಲಿ ತಳಮಳವನ್ನು ನಿರ್ಮಾಣ ಮಾಡಬೇಕು’, ಎಂದು ಕೇವಲ ಪ್ರಾರ್ಥನೆ ಮಾತ್ರ ಮಾಡುವುದಲ್ಲ, ‘ಅದಕ್ಕಾಗಿ ನಾನು ಪ್ರಯತ್ನಿಸುತ್ತೇನೆ’, ಎನ್ನುವುದು ಹೆಚ್ಚು ಮಹತ್ವದ್ದಾಗಿದೆ. ಅತೀ ಸುಂದರ ! ಪ್ರಾರ್ಥನಾ ಎಷ್ಟು ಓದುತ್ತಾಳೆ ಹಾಗೂ ವಿಷಯಗಳನ್ನು ನೋಂದಣಿ ಮಾಡಿಟ್ಟುಕೊಳ್ಳುತ್ತಾಳೆ, ಎಂಬುದನ್ನು ಕೇಳಿದ್ದೆನು. ಇಂದು ಅದರ ಉದಾಹರಣೆ ಸಿಕ್ಕಿತು.
೩. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ನೀಡಿರುವ ಧ್ಯೇಯಗಳ ಸಂಪೂರ್ಣ ಅರಿವು ಇರುವ ಕು. ಪ್ರಾರ್ಥನಾ !
ಕು. ಪ್ರಾರ್ಥನಾ ಪಾಠಕ : ಪರಮಪೂಜ್ಯರೆ, ತಾವು ನಮ್ಮೆಲ್ಲ ಸಾಧಕರಿಗೆ ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆ ಎನ್ನುವ ಎರಡು ಧ್ಯೇಯಗಳನ್ನು ಕೊಟ್ಟಿದ್ದೀರಿ. ವ್ಯಷ್ಟಿ ಸಾಧನೆಯ ಧ್ಯೇಯ ‘ಈಶ್ವರಪ್ರಾಪ್ತಿ’ಯಾಗಿದೆ ಹಾಗೂ ಸಮಷ್ಟಿ ಸಾಧನೆಯ ಧ್ಯೇಯ ವೆಂದರೆ ಹಿಂದೂ ರಾಷ್ಟ್ರ !
ಮಹಿಳೆಯರು ಗರ್ಭಧಾರಣೆ ಆದಾಗಿನಿಂದಲೇ ನಾಮಜಪಾದಿ ಉಪಾಯಗಳನ್ನು ಮಾಡಿದರೆ, ಜನಿಸುವ ಮಗುವಿಗೆ ಆಧ್ಯಾತ್ಮಿಕ ತೊಂದರೆಗಳಾಗುವ ಪ್ರಮಾಣ ಕಡಿಮೆ ಇರುವುದು ಅಥವಾ ಇರುವುದಿಲ್ಲ ಎಂದು ಗಮನಕ್ಕೆ ಬರುವುದು೧. ಆಧ್ಯಾತ್ಮಿಕ ತೊಂದರೆಯಿಂದಾಗಿ ಸಾಧನೆಯನ್ನು ಬಿಟ್ಟು ಬಿಡುವ ಸಾಧಕರಿಗೆ ಗರ್ಭಾವಸ್ಥೆಯಿಂದಲೇ ಆಧ್ಯಾತ್ಮಿಕ ತೊಂದರೆ ಇರುವುದು ಅರಿವಾಗುವುದು‘ಮಾರ್ಚ್ ೧೯೯೭ ರಿಂದ ನನಗೆ ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಧರ್ಮಪ್ರಸಾರ ಮಾಡುವ ಅವಕಾಶ ಸಿಕ್ಕಿತು. ಈಶ್ವರನ ಕೃಪೆಯಿಂದ ನನ್ನ ಸೂಕ್ಷ್ಮ ಜ್ಞಾನೇಂದ್ರಿಯಗಳು ಜಾಗೃತವಾಗಿರುತ್ತವೆ. ಆದ್ದರಿಂದ ನನಗೆ ಧರ್ಮಪ್ರಸಾರದ ಸೇವೆಯನ್ನು ಪರಿಣಾಮಕಾರಿಯಾಗಿ ಮಾಡಲು ತುಂಬಾ ಸಹಾಯವಾಗುತ್ತದೆ. ಧರ್ಮಪ್ರಸಾರ ಮಾಡುವಾಗ ನನಗೆ ಅರಿವಾಗಿರುವುದೇನೆಂದರೆ, ‘ಕೆಲವು ಸಾಧಕರಿಗೆ ಸಾಧನೆ ಮಾಡುವ ಇಚ್ಛೆ ಇರುತ್ತದೆ ಹಾಗೂ ಅವರ ಆಧ್ಯಾತ್ಮಿಕ ಮಟ್ಟ ಶೇ. ೪೦ ಕ್ಕಿಂತ ಹೆಚ್ಚು ಇರುತ್ತದೆ. ಆದರೂ ಅವರಿಗೆ ಕೆಲವೊಮ್ಮೆ ಹೆಚ್ಚು ಸಮಯ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಬಾಲ್ಯದಿಂದಲೇ ನನ್ನ ವೃತ್ತಿ ಸಮಸ್ಯೆಯ ಮೂಲಕ್ಕೆ ಹೋಗಿ ಅದನ್ನು ನಿವಾರಿಸುವುದರ ಕಡೆಗಿತ್ತು; ಆದ್ದರಿಂದ ನಾನು ಸಾಧಕರಿಂದ ಸಾಧನೆ ಮಾಡಿಸಿಕೊಳ್ಳಲು ಅವರ ಸಮಸ್ಯೆಗಳ ಮೂಲಕ್ಕೆ ಹೋಗುವ ಪ್ರಯತ್ನ ಮಾಡುತ್ತೇನೆ. ಈ ವಿಷಯವನ್ನು ಅಭ್ಯಾಸ ಮಾಡುವಾಗ ನನಗೆ ಅರಿವಾಗಿರುವುದೇನೆಂದರೆ, ‘ಆಧ್ಯಾತ್ಮಿಕ ತೊಂದರೆಯಿಂದಾಗಿ ಯಾವ ಸಾಧಕರು ಸಾಧನೆಯನ್ನು ಬಿಟ್ಟು ಬಿಡುತ್ತಾರೊ, ಅವರಿಗೆ ಗರ್ಭಾವಸ್ಥೆಯಿಂದಲೇ ಆಧ್ಯಾತ್ಮಿಕ ತೊಂದರೆ ಇರುತ್ತದೆ’. ೨. ‘ಹಿಂದೂ ರಾಷ್ಟ್ರವನ್ನು ನಡೆಸಲು ಸಿದ್ಧರಾಗುವ ಪೀಳಿಗೆಯಲ್ಲಿನ ಸಾಧಕರಿಗೆ ಜನ್ಮದಿಂದ ಕೆಟ್ಟ ಶಕ್ತಿಗಳ ತೊಂದರೆ ಇಲ್ಲದಿದ್ದರೆ ಅವರು ಧರ್ಮ ಕಾರ್ಯವನ್ನು ವೇಗದಿಂದ ಹಾಗೂ ಪರಿಣಾಮಕಾರಿಯಾಗಿ ಮಾಡಬಹುದು’, ಎಂದು ಅನಿಸುವುದುಹಿಂದೆ ‘ಉತ್ತರ ಭಾರತದಲ್ಲಿ ಮಾತ್ರ ಈ ಸಮಸ್ಯೆ ಇದೆ’, ಎಂದು ನನಗೆ ಅನಿಸುತ್ತಿತ್ತು. ೨೦೧೦ ರಿಂದ ನಾನು ‘ವೈದಿಕ ಉಪಾಸನಾ ಪೀಠ’ ಈ ಸಂಸ್ಥೆಯ ಮೂಲಕ ಧರ್ಮಪ್ರಸಾರ ಮಾಡಲು ಆರಂಭಿಸಿದೆನು ಹಾಗೂ ಇದೇ ಸಮಯದಲ್ಲಿ ನಾನು ದೇಶ-ವಿದೇಶಗಳಲ್ಲಿ ಸಂಚಾರ ಮಾಡಿ ಧರ್ಮಪ್ರಸಾರ ಮಾಡಿದೆನು. ಆಗ ಈ ಸಮಸ್ಯೆಯು ಸಂಪೂರ್ಣ ಜಗತ್ತಿನಲ್ಲಿರುವುದು ನನ್ನ ಗಮನಕ್ಕೆ ಬಂತು. ಆದ್ದರಿಂದ ನಾನು ಅದಕ್ಕೆ ಪರಿಹಾರೋಪಾಯವನ್ನು ಶೋಧಿಸಲು ಆರಂಭಿಸಿದೆನು. ಹಿಂದೂ ರಾಷ್ಟ್ರವನ್ನು ನಡೆಸಲು ಸಿದ್ಧರಾಗುವ ಹೊಸ ಪೀಳಿಗೆಯ ಸಾಧಕರಿಗೆ ಜನ್ಮದಿಂದಲೇ ಕೆಟ್ಟ ಶಕ್ತಿಗಳ ತೊಂದರೆ ಕಡಿಮೆಯಿದ್ದರೆ ಅಥವಾ ಇಲ್ಲದಿದ್ದರೆ, ಅವರು ಶೀಘ್ರಗತಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ಧರ್ಮಕಾರ್ಯವನ್ನು ಮಾಡಬಹುದು. ೩. ‘ದೈವೀ ಬಾಲಕನ ಜನಿಸಬೇಕು’, ಎಂದು ‘ಗರ್ಭವತಿ ಸ್ತ್ರೀಯ ಹಾಗೂ ಗರ್ಭ’ದ ಸುತ್ತಲೂ ಸಂರಕ್ಷಣಾಕವಚ ನಿರ್ಮಾಣವಾಗಲು ಸ್ಥೂಲ ಮತ್ತು ಸೂಕ್ಷ್ಮ ಸ್ತರದಲ್ಲಿ ಹೇಳಿರುವ ಉಪಾಯಗಳಿಂದ ಒಳ್ಳೆಯ ಪರಿಣಾಮ ಆಗಿರುವುದು ಅರಿವಾಗುವುದುಆಗಸ್ಟ್ ೨೦೦೯ ರಿಂದ ನಾನು ನನ್ನ ತಂದೆಯವರ ಸ್ವಂತ ಊರಿನಲ್ಲಿ ಪ್ರಯೋಗ ಮಾಡಲು ಆರಂಭಿಸಿದೆನು. ‘ಎಲ್ಲಿಯಾದರೂ ಓರ್ವ ಸಾಧಕಿ ಗರ್ಭವತಿ ಆಗಿದ್ದಾಳೆಂಬ’ ಸುಳಿವು ಸಿಕ್ಕಿದಾಗ ನಾನು ಅವಳ ಗರ್ಭದಲ್ಲಿರುವ ಜೀವದ ಸುತ್ತಲೂ ಸಂರಕ್ಷಣಾಕವಚ ನಿರ್ಮಾಣ ಮಾಡಲು ಅವಳಿಗೆ ಸ್ಥೂಲ ಹಾಗೂ ಸೂಕ್ಷ್ಮ ಸ್ತರದಲ್ಲಿ ವಿವಿಧ ಪ್ರಕಾರದ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಹೇಳಲು ಆರಂಭಿಸಿದೆನು. ‘ಈ ಉಪಾಯಗಳಿಂದ ಗರ್ಭವತಿ ಸ್ತ್ರೀಯ ಮತ್ತು ಗರ್ಭದ ಮೇಲೆ ಎಂತಹ ಪರಿಣಾಮವಾಗುತ್ತದೆ ?’, ಎಂಬುದನ್ನು ನಾನು ಅಭ್ಯಾಸ ಮಾಡಲು ಆರಂಭಿಸಿದೆನು. ‘ಮಗುವಿನ ಜನಿಸಿದ ನಂತರ ಆ ಉಪಾಯಗಳಿಂದ ಅದರ ಮೇಲೆ ಎಷ್ಟು ಪ್ರಭಾವ ಬೀರಿದೆ ?’, ಎಂಬುದನ್ನು ಕೂಡ ನಾನು ನಿರೀಕ್ಷಣೆ ಮಾಡಲು ಆರಂಭಿಸಿದೆನು. ‘ಗರ್ಭವತಿ ಮಾತೆಯರಿಗೆ ನಾಮಜಪಾದಿ ಉಪಾಯಗಳನ್ನು ಹೇಳಿದ ನಂತರ ದೈವೀ ಬಾಲಕರ ಜನ್ಮವಾಗಲು ಆರಂಭವಾಯಿತು’, ಎಂದು ನನಗೆ ಅರಿವಾಯಿತು. ಇದು ದೊಡ್ಡ ಆನಂದದ ವಿಷಯವಾಗಿತ್ತು. ಯಾವ ಗರ್ಭವತಿ ಮಹಿಳೆಯರು ನಾನು ಹೇಳಿರುವ ವಿಷಯಗಳನ್ನು ಚಾಚೂ ತಪ್ಪದೆ ಪಾಲನೆ ಮಾಡಿದರೋ, ಅವರ ಮಕ್ಕಳಿಗೆ ಕೆಟ್ಟ ಶಕ್ತಿಗಳ ತೊಂದರೆ ಸ್ವಲ್ಪವೂ ಇರಲಿಲ್ಲ. ಯಾವ ಗರ್ಭವತಿ ಮಹಿಳೆಯರು ನಾನು ಹೇಳಿರುವ ವಿಷಯಗಳನ್ನು ಸ್ವಲ್ಪ ಪ್ರಮಾಣದಲ್ಲಿ ಪಾಲನೆ ಮಾಡಿದರೋ, ಅವರ ಮಕ್ಕಳಿಗೆ ಜನ್ಮತಾಳುವಾಗಲೇ ಸ್ವಲ್ಪ ಪ್ರಮಾಣದಲ್ಲಿ ತೊಂದರೆ ಇರುವುದು ಕಂಡುಬಂತು. ಈ ೨ ವರ್ಷಗಳಲ್ಲಿ ನನಗೆ ಈ ವಿಷಯದಲ್ಲಿ ಉತ್ಸಾಹ ವರ್ಧಕ ಪ್ರೋತ್ಸಾಹ ಸಿಗಲು ಆರಂಭವಾಯಿತು. ಆಗ ಈ ವಿಷಯವನ್ನು ನಾನು ಸಾರ್ವಜನಿಕವಾಗಿ ಹೇಳಲು ಆರಂಭಿಸಿದೆನು. ‘ಇಂದು ಸಮಾಜದ ಮಹಿಳೆಯರಿಗೆ ಅವರ ಉದರದಿಂದ ಸಾತ್ತ್ವಿಕ ಮಕ್ಕಳು ಜನಿಸಬೇಕಾದರೆ ಆಚರಣೆ ಹೇಗಿರಬೇಕು ?’, ಎಂಬುದನ್ನು ಕಲಿಸುವ ಅವಶ್ಯಕತೆಯಿದೆ. ಇದರಿಂದ ಎಷ್ಟು ಪ್ರಮಾಣದಲ್ಲಿ ‘ಹಿಂದೂ ಧರ್ಮಕ್ಕೆ ಹಾನಿಯಾಗಿದೆ ?’, ಎಂಬುದು ಅರಿವಾಗುತ್ತದೆ. – ಪೂ. ತನುಜಾ ಠಾಕೂರ, ಸಂಸ್ಥಾಪಕಿ, ವೈದಿಕ ಉಪಾಸನಾ ಪೀಠ. (೧೨.೧೧.೨೦೨೧) |
ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ, ಹಿಂದೂಗಳು ಸಂಘಟಿತರಾಗಬೇಕು, ಅದಕ್ಕಾಗಿ ಹಿಂದೂಸಂಘಟನೆಗಳ ವಿಚಾರಧಾರೆಯೇ ಸ್ಪೂರ್ತಿ ನೀಡುವುದು, ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಒಂದು ಆಧ್ಯಾತ್ಮಿಕ ಪ್ರಕ್ರಿಯೆಯಾಗಿದೆ ಹಿಂದೂ ರಾಷ್ಟ್ರವು ನಮ್ಮ ಜನ್ಮಸಿದ್ಧ ಹಕ್ಕಾಗಿದೆ ಮತ್ತು ನಾವು ಅದನ್ನು ಖಂಡಿತ ಪಡೆಯುವೆವು. – ಶ್ರೀ ಸಖಾರಾಮ ಏಕಶಿಂಗೆ. |