ಗುರುಗಳ ಪ್ರೀತಿ ಸಾಧಕರ ಮೇಲೆ ಯಾವಾಗಲೂ ಇರುತ್ತದೆ !

‘ಆಧ್ಯಾತ್ಮಿಕ ತೊಂದರೆ’ಯಿರುವ ಕೆಲವು ಸಾಧಕರ ತೊಂದರೆಗಳು

(ಪೂ.) ಸಂದೀಪ ಆಳಶಿ

ನಾಮಜಪ ಮುಂತಾದ ಉಪಾಯಗಳನ್ನು ಮಾಡಿದರೂ ಬೇಗ ಕಡಿಮೆಯಾಗುವುದಿಲ್ಲ ಅಥವಾ ಕೆಲವು ಸಾಧಕರು ತುಂಬಾ ಸೇವೆಯನ್ನು ಮಾಡುತ್ತಿದ್ದರೂ, ಅವರ ಆಧ್ಯಾತ್ಮಿಕ ಪ್ರಗತಿ ಆಗುವುದಿಲ್ಲ. ಇಂತಹ ಸಾಧಕರ ಮನಸ್ಸಿನಲ್ಲಿ ಕೆಲವೊಮ್ಮೆ ‘ನನ್ನ ಕಡೆಗೆ ಗುರುಗಳ (ಪರಾತ್ಪರ ಗುರು ಡಾ. ಜಯಂತ ಆಠವಲೆಯವರ) ಗಮನವಿಲ್ಲ. ಅವರು ಇತರ ಸಾಧಕರನ್ನು ಪ್ರೀತಿಸುತ್ತಾರೆ; ಆದರೆ ನನ್ನನ್ನು ಪ್ರೀತಿಸುವುದಿಲ್ಲ’, ಇಂತಹ ನಕಾರಾತ್ಮಕ ವಿಚಾರಗಳು ಬರುತ್ತವೆ. ಇಂತಹ ಸಾಧಕರು ಮುಂದಿನ ದೃಷ್ಟಿಕೋನವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

೧. ಕಳೆದ ಕೆಲವು ವರ್ಷಗಳಿಂದ ಸ್ಥೂಲದಲ್ಲಿನ ಮತ್ತು ಸೂಕ್ಷ್ಮದಲ್ಲಿನ ಆಪತ್ಕಾಲ ನಡೆಯುತ್ತಿದ್ದು ಈಗ ಬೇಗನೇ ಸ್ಥೂಲದಲ್ಲಿನ ಮಹಾಭೀಕರ ಆಪತ್ಕಾಲ ಪ್ರಾರಂಭವಾಗುವುದಿದೆ. ಇಲ್ಲಿಯವರೆಗೆ ಈ ಆಪತ್ಕಾಲದಲ್ಲಿ ಪರಾತ್ಪರ ಗುರು ಡಾಕ್ಟರರ ಕೃಪೆಯ ಕವಚದಿಂದ ಸಾಧಕರ ಜೀವದ ರಕ್ಷಣೆಯಾಗಿದೆ ಮತ್ತು ಈ ಮುಂದೆಯೂ ಆಗಲಿದೆ. ಇದರಿಂದ ಪರಾತ್ಪರ ಗುರು ಡಾಕ್ಟರರಿಗೆ ಸಾಧಕರ ಮೇಲೆ ಎಷ್ಟು ಆಗಾಧ ಪ್ರೀತಿಯಿದೆ ಎಂಬುದು ಗೊತ್ತಾಗುತ್ತದೆ ! ಇದರ ಕುರಿತು ಸಾಧಕರ ಮನಸ್ಸಿನಲ್ಲಿ ಪರಾತ್ಪರ ಗುರು ಡಾಕ್ಟರರ ಬಗ್ಗೆ ಸತತವಾಗಿ ಕೃತಜ್ಞತಾಭಾವವಿರಬೇಕು.

೨. ‘ನಾನಾ ನಾತೀ ದಾವಿಯಲಿ ತೀ |

ತ್ಯಾ ಸರ್ವಾವರಿ ತವ ಸಮ ಪ್ರೀತಿ ||’

(ಅರ್ಥ : ಬೇರೆ ಬೇರೆ ಸಂಬಂಧವನ್ನು ತೋರಿಸಿದರೂ ಅವರ (ಗುರುಗಳ) ಪ್ರೀತಿ ಎಲ್ಲರ ಮೇಲೆ ಸಮಾನವಿರುತ್ತದೆ) ಇದು ಪ.ಪೂ. ಭಕ್ತರಾಜ ಮಹಾರಾಜರ ಭಜನೆಯ ಸಾಲುಗಳಿಗನುಸಾರ ‘ಪರಾತ್ಪರ ಗುರು ಡಾಕ್ಟರರ ಪ್ರೀತಿಯು ಎಲ್ಲ ಸಾಧಕರ ಮೇಲೆ ಸಮನಾಗಿಯೇ ಇದೆ.’

೩. ‘ಮನಸ್ಸಿನಲ್ಲಿ ಯಾವುದೇ ಅಪೇಕ್ಷೆಯನ್ನಿಡದೇ ಸಾಧನೆ ಮಾಡುವುದು’, ಇದುವೇ ನಿಜವಾದ ಸಾಧನೆಯಾಗಿದೆ.

೪. ಆಧ್ಯಾತ್ಮಿಕ ತೊಂದರೆಯು ಬೇಗ ಕಡಿಮೆ ಆಗದಿರುವ ಸಾಧಕರು ಅಥವಾ ತುಂಬಾ ಸೇವೆಯನ್ನು ಮಾಡಿದರೂ ಆಧ್ಯಾತ್ಮಿಕ ಪ್ರಗತಿ ಆಗಿದಿರುವ ಸಾಧಕರು ‘ಹೀಗೇಕೆ ಆಗುತ್ತದೆ ?’, ಎಂಬುದರ ಚಿಂತನೆಯನ್ನು ಮಾಡಬೇಕು, ಅಂದರೆ ಅವರಿಗೆ ಇದರ ಹಿಂದಿನ ಕಾರಣಗಳು ಗಮನಕ್ಕೆ ಬಂದು ಯೋಗ್ಯ ಉಪಾಯ ಯೋಜನೆಯನ್ನು ಮಾಡಬಹುದು. ಅವಶ್ಯಕತೆಯಿದ್ದರೆ ಅವರು (ಆ ಸಾಧಕರು) ಈ ಕುರಿತು ಜವಾಬ್ದಾರ ಸಾಧಕರಲ್ಲಿ ಅಥವಾ ಸಂತರಲ್ಲಿ ಕೇಳಿಕೊಳ್ಳಬಹುದು.’

– (ಪೂ.) ಶ್ರೀ. ಸಂದೀಪ ಆಳಶಿ (೧೮.೧೧.೨೦೨೧)

ಸಾಧನೆಯ ಪ್ರಯತ್ನಗಳ ಶಕ್ತಿಯೇ ಆಪತ್ಕಾಲದಲ್ಲಿ ನಮ್ಮನ್ನು ಪಾರು ಮಾಡುವುದು !

‘ಸಾಧನೆಗಾಗಿ ಅನುಕೂಲ ಪರಿಸ್ಥಿತಿಯಲ್ಲಿ ಸಾಧನೆಯ ಪ್ರಯತ್ನಗಳು ಒಳ್ಳೆಯದಾಗುತ್ತವೆ. ಸಾಧನೆಗಾಗಿನ ಪ್ರತಿಕೂಲ ಪರಿಸ್ಥಿತಿಯಲ್ಲಿ ಮಾತ್ರ ಸಾಧನೆಯ ಪ್ರಯತ್ನವು ಒಳ್ಳೆಯದಾಗುವುದು ಸಾಧನೆಯ ಪ್ರಯತ್ನಗಳ ಶಕ್ತಿಯನ್ನು ಅವಲಂಬಿಸಿರುತ್ತದೆ. ಈ ಶಕ್ತಿಯು ಪ್ರಯತ್ನಗಳ ತಳಮಳ ಮತ್ತು ಪ್ರಯತ್ನಗಳಲ್ಲಿನ ಸಾತತ್ಯತೆಯ ಮೇಲೆ ಅವಲಂಬಿಸಿರುತ್ತದೆ. ‘ಮುಂಬರುವ ಆಪತ್ಕಾಲದಲ್ಲಿ ಯಾವೆಲ್ಲ ಭೀಕರ ಪರಿಸ್ಥಿತಿಗಳನ್ನು ನಮಗೆ ಎದುರಿಸಬೇಕಾಗುವುದು’, ಎಂಬುದರ ಬಗ್ಗೆ ನಾವು ಈಗ ಕಲ್ಪನೆಯನ್ನು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಈಗಲೇ ಸಾಧನೆಯ ಪ್ರಯತ್ನಗಳ ಶಕ್ತಿಯನ್ನು ಹೆಚ್ಚಿಸಿದಾಗಲೇ ನಾವು ಆ ಆಪತ್ಕಾಲದಿಂದ ಪಾರಾಗಲು ಸಾಧ್ಯ; ಇಲ್ಲದಿದ್ದರೆ ಸಾಧ್ಯವಿಲ್ಲ !

– (ಪೂ.) ಸಂದೀಪ ಆಳಶಿ (೨೮.೩.೨೦೨೧)