ಸಾಧಕರ ಗುರುನಿಷ್ಠೆ ಮತ್ತು ‘ಸನಾತನ ಪ್ರಭಾತ’ದಿಂದ ನಾನು ತುಂಬಾ ಕಲಿತೆ ! – ವೈದ್ಯ ಸುವಿನಯ ದಾಮಲೆ

ಸನಾತನ ಪ್ರಭಾತದ ವರ್ಧ್ಯಂತ್ಯುತ್ಸವ ದಿನದ ನಿಮಿತ್ತ ಗೌರವೋದ್ಗಾರ

ವೈದ್ಯ ಸುವಿನಯ ದಾಮಲೆ

ನಾನು ದೈನಿಕ ‘ಸನಾತನ ಪ್ರಭಾತ’ದ ಮೊದಲನೇಯ ಸಂಚಿಕೆಯಿಂದ ಇಲ್ಲಿಯ ವರೆಗಿನ, ಅಂದರೆ ಕಳೆದ ೨೨ ವರ್ಷಗಳಿಂದ ಅದರ ಸಾಕ್ಷಿದಾರನಾಗಿದ್ದೇನೆ. ಸಾಧಕರ ಕಠಿಣ ಪರಿಶ್ರಮ, ಅವರು ಗುರುಚರಣಗಳಲ್ಲಿ ಅರ್ಪಿಸಿದ ಸರ್ವಸ್ವ, ಗುರುಗಳ ಬಗೆಗಿನ ಅವರ ನಿಷ್ಠೆಯನ್ನು ನಾನು ನೋಡಿದ್ದೇನೆ. ಅವರ ಭಕ್ತಿಭಾವವನ್ನು ನಾನು ನೋಡಿದ್ದೇನೆ. ಸಾಧಕರಿಂದ ಹಾಗೂ ದೈನಿಕದಿಂದ ನನಗೆ ತುಂಬಾ ಕಲಿಯಲು ಸಿಕ್ಕಿತು ಮತ್ತು ನನ್ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಸಾಧ್ಯವಾಯಿತು, ಅದರ ಆನಂದ ನನಗೆ ಸಿಕ್ಕಿದೆ.

ಸರ್ವಾಂಗೀಣ ಜ್ಞಾನವನ್ನು ನೀಡುವ ಪತ್ರಿಕೆ ಅಂದರೆ ‘ಸನಾತನ ಪ್ರಭಾತ’ !

 ‘ಸನಾತನ ಪ್ರಭಾತ’ದಲ್ಲಿ ಬರುವ ಮಾಹಿತಿಯನ್ನು ವಿಷಯಕ್ಕನುಸಾರ ಸಂಗ್ರಹಿಸಿದರೆ, ಒಂದು ಹವ್ಯಾಸವನ್ನು ಕಾಪಾಡುವುದರ ಜೊತೆಗೆ ಒಂದು ಉತ್ತಮ ಮಾಹಿತಿ ಸಂಕಲನವಾಗಬಹುದು. ಕೇವಲ ಆಯುರ್ವೇದ ಅಷ್ಟೇ ಅಲ್ಲ, ‘ಸನಾತನ ಪ್ರಭಾತ’ವು ಎಲ್ಲ ಬದಿಗಳಿಂದ ಎಲ್ಲ ರೀತಿಯ ಮಾಹಿತಿಯನ್ನು ನೀಡುವ ಪತ್ರಿಕೆ ಆಗಿದೆ. ನಮ್ಮ ಇತಿಹಾಸ, ನಮ್ಮ ಭೂಗೋಲ, ಕ್ರಾಂತಿಕಾರರ ತ್ಯಾಗ ಇತ್ಯಾದಿ ಸರ್ವಾಂಗಸುಂದರ ಮಾಹಿತಿಯು ಸನಾತನ ಪ್ರಭಾತದಲ್ಲಿ ಬರುತ್ತಿರುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ನನಗೆ ಓರ್ವ ಒಳ್ಳೆಯ ಮನುಷ್ಯನೆಂದು ನಿರ್ಮಾಣವಾಗಬೇಕಾಗಿದೆ. ಸಮಾಜದಲ್ಲಿನ ಅತ್ಯಂತ ದೂಷಿತ ವಾತಾವರಣದಲ್ಲಿ ನನಗೆ ಕಮಲದಂತೆ ಇರಬೇಕಾಗಿದ್ದರೆ, ಈ ವಾತಾವರಣದ ಯಾವುದೇ ಪರಿಣಾಮ ನನ್ನ ಮೇಲೆ ಆಗದಂತೆ ಜೀವಿಸಬೇಕಾಗಿದ್ದರೆ, ಅದಕ್ಕಾಗಿ ‘ಸನಾತನ ಪ್ರಭಾತ’ವನ್ನು ನಿಯಮಿತವಾಗಿ ಓದುವುದು ಮತ್ತು ಅದರಲ್ಲಿ ಹೇಳಿದ ಅಂಶಗಳನ್ನು ಅನುಕರಣೆ ಮಾಡುವುದು ಆವಶ್ಯಕವಿದೆ.

ಹಿಂದೆ ಅವಿಭಕ್ತ ಕುಟುಂಬ ಪದ್ಧತಿಯಿಂದ ಸಂಸ್ಕಾರಗಳು ಪರಸ್ಪರರಲ್ಲಿ ಬರುತ್ತಿದ್ದವು. ಇಂದು ಸಂಸ್ಕೃತಿ. ಸಂಸ್ಕಾರ, ಇತಿಹಾಸ, ರಾಮಾಯಣ-ಮಹಾಭಾರತ ಇವುಗಳ ಬಗ್ಗೆ ಬಹಳ ಕಡಿಮೆ ಜನರಿಗೆ ಮಾಹಿತಿ ಇದೆ. ನಿಜವಾದ ಇತಿಹಾಸವನ್ನು ತಿಳಿದುಕೊಳ್ಳಬೇಕಾಗಿದ್ದರೆ, ‘ಸನಾತನ ಪ್ರಭಾತ’ ಪತ್ರಿಕೆಯನ್ನು ಓದಬೇಕು. ನಾವು ಈ ಎಲ್ಲ ಜ್ಞಾನವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿದೆ. ಮನುಷ್ಯನಿಗೆ ಬದುಕಲು ಅನ್ನ, ಬಟ್ಟೆ ಮತ್ತು ವಸತಿ ಇವು ಆವಶ್ಯಕವಾಗಿವೆ. ಅದರಂತೆ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮ ನಿರ್ಮಾಣವಾಗುವುದೂ ಆವಶ್ಯಕವಾಗಿವೆ ಮತ್ತು ಅದೂ ಕೂಡಾ ಸಣ್ಣವರಿರುವಾಗಲೇ, ಇದರಿಂದ ಅದರ ಜೋಪಾಸನೆ ಆಗುವುದು.

– ವೈದ್ಯ ಸುವಿನಯ ದಾಮಲೆ, ರಾಷ್ಟ್ರೀಯ ಗುರು, ಆಯುಷ್ ಸಚಿವಾಲಯ.

೧. ಸಮರ್ಥ ರಾಮದಾಸಸ್ವಾಮಿಗಳ ಚತುಃಸೂತ್ರಗಳಿಗನುಸಾರ ‘ಸನಾತನ ಪ್ರಭಾತ’ದ ಮಾರ್ಗಕ್ರಮಣ !

ಸನಾತನದ ಸಾಧಕರು ತೆಗೆದುಕೊಂಡ ಪರಿಶ್ರಮವು ಧರ್ಮಾರ್ಥ ಕಾಮಮೋಕ್ಷಾಣಾಮ್ ಅಂತೂ ಆಗಿದೆ; ಆದರೆ ಅದೊಂದು ಪುರುಷಾರ್ಥವೂ ಆಗಿದೆ. ಈ ಪುರುಷಾರ್ಥವು ಧರ್ಮದ ಸ್ಥಾಪನೆಗಾಗಿ ಮತ್ತು ಅರ್ಥ, ಕಾಮ ಮತ್ತು ಮೋಕ್ಷ ಇವುಗಳ ಪ್ರಾಪ್ತಿಗಾಗಿ ಇದೆ. ಸಮರ್ಥ ರಾಮದಾಸಸ್ವಾಮಿಗಳು ಹೇಳುತ್ತಾರೆ,

ಮುಖ್ಯ ಇರುವುದು ಹರಿಕಥೆಯ ನಿರೂಪಣೆ | ಎರಡನೇಯದ್ದು ರಾಜಕಾರಣ |

ಮೂರನೆಯದ್ದು ಎಚ್ಚರಿಕೆ | ಎಲ್ಲ ವಿಷಯಗಳ ಬಗ್ಗೆ |

ನಾಲ್ಕನೆಯದ್ದು ವಿಪರೀತ ಸಾಕ್ಷ್ಯ || ಪೂರ್ಣ ಮಾಡಲಿ ವಿವಿಧ ಆಕ್ಷೇಪ ||

ಈ ಚತುಃಸೂತ್ರಗಳನ್ನು ಉಪಯೋಗಿಸಿ ‘ಸನಾತನ ಪ್ರಭಾತ’ದ ಮಾರ್ಗಕ್ರಮಣ ನಡೆದಿದೆ. ಅದಕ್ಕನುಸಾರ ‘ಸನಾತನ ಪ್ರಭಾತ’ ಅಧ್ಯಾತ್ಮಶಾಸ್ತ್ರ ಮತ್ತು ಭಕ್ತಿಮಾರ್ಗದ ಪ್ರಸಾರವನ್ನು ಮಾಡುತ್ತಿದೆ. ಎರಡನೇಯದ್ದು ಸಮಾಜದ ದೃಷ್ಟಿಯಿಂದ, ಅಂದರೆ ಸಮಾಜ ಎಲ್ಲಿ ಹೋಗುತ್ತಿದೆ, ಅದಕ್ಕೆ ನಿಖರವಾಗಿ ಎಲ್ಲಿ ಹೋಗಬೇಕಾಗಿದೆ ? ಅದರ ಇಷ್ಟ ಸ್ಥಳ ಯಾವುದು ?, ನಮ್ಮ ಧರ್ಮಕ್ಕನುಸಾರ ಇಷ್ಟಸ್ಥಳ ಮೋಕ್ಷವೇ ಆಗಿದೆ. ಅದರ ಪ್ರಾಪ್ತಿಗಾಗಿ ಸಾಧನೆಯನ್ನು ಹೇಗೆ ಮಾಡಬೇಕು ಎಂಬುದರ ಮಾರ್ಗವನ್ನು ದೈನಿಕ ‘ಸನಾತನ ಪ್ರಭಾತ’ ತೋರಿಸುತ್ತಿದೆ. ಆದ್ದರಿಂದ ಯಾರ ಕೈಯಲ್ಲಿ ‘ಸನಾತನ ಪ್ರಭಾತ’, ಅವರ ಕೈಯಲ್ಲಿ ‘ಧರ್ಮಸಂಸ್ಥಾಪನೆ’, ಎಂದು ಹೇಳಿದರೆ ತಪ್ಪಾಗಲಾರದು. ಯಾರು ‘ಸನಾತನ ಪ್ರಭಾತ’ದ ವಾಚಕರೋ, ಅವರು ಧರ್ಮಸಂಸ್ಥಾಪನೆಯ ಮಾರ್ಗದಲ್ಲಿನ ಸಹಪ್ರಯಾಣಿಕರು. ಅವರಿಗೆ ಮುಮುಕ್ಷು, ಸಾಧಕ ಎಂದು ಹೇಳಬಹುದು. ವ್ಯಕ್ತಿ ಮತ್ತು ಸಮಾಜದ ಮೇಲೆ ರಾಷ್ಟ್ರ ಹಾಗೂ ಧರ್ಮದ ಸಂಸ್ಕಾರ ಮಾಡುವ ಕಾರ್ಯವನ್ನು ‘ಸನಾತನ ಪ್ರಭಾತ’ ಮಾಡುತ್ತಿದೆ.

೨. ‘ಸನಾತನ ಪ್ರಭಾತ’ವು ಆಯುರ್ವೇದದ ಪುನರುತ್ಥಾನದ ಕಾರ್ಯವನ್ನು ಮಾಡುತ್ತಿದೆ !

ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ನಾಲ್ಕು ಪುರುಷಾರ್ಥಗಳನ್ನು ಸಾಧ್ಯಗೊಳಿಸಲಿಕ್ಕಾಗಿ ನಮ್ಮ ಜನ್ಮವಿದೆ. ಅದಕ್ಕಾಗಿ ಆರೋಗ್ಯ ಉತ್ತಮವಿರಬೇಕು. ಅದಕ್ಕಾಗಿ ಆಯುರ್ವೇದದ ಮೇಲೆ ವಿಶ್ವಾಸವನ್ನಿಡುವುದು ಆವಶ್ಯಕವಾಗಿದೆ. ಸ್ವಾತಂತ್ರ್ಯದ ನಂತರ ನಮ್ಮ ಮುಖ್ಯ ಚಿಕಿತ್ಸಾಪದ್ಧತಿ ಆಯುರ್ವೇದ ಆಗಬೇಕಾಗಿತ್ತು; ಆದರೆ ದೌರ್ಭಾಗ್ಯದಿಂದ ಜಾತ್ಯತೀತ ಸರಕಾರದ ಆಡಳಿತದಲ್ಲಿ ನಾವು ವಿದೇಶಿ ಚಿಕಿತ್ಸಾ ಪದ್ಧತಿಯನ್ನು ಸ್ವೀಕರಿಸಿದೆವು ಮತ್ತು ಆ ಪಾಶ್ಚಿಮಾತ್ಯ ಪದ್ಧತಿಗನುಸಾರ ನಮ್ಮ ಆರೋಗ್ಯವನ್ನು ಆ ಚೌಕಟ್ಟಿನಲ್ಲಿ ಇಡಲು ಪ್ರಯತ್ನಿಸಿದೆವು. ಅಲ್ಲಿಯೇ ಅಧೋಗತಿ ಆರಂಭವಾಯಿತು. ಇಂದು ನಾವು ೨೦೨೫ ರ ಹೊಸ್ತಿಲಿನ ಮೇಲೆ ನಿಂತಿದ್ದೇವೆ; ಆದರೆ ನಮಗೆ ಸಂಪೂರ್ಣ ಆರೋಗ್ಯವೇನು ಸಿಕ್ಕಿಲ್ಲ. ಅದು ನಮಗೆ ಸಿಗಬೇಕಾದರೆ ಒಂದೇ ಮಾರ್ಗವಿದೆ, ಅದೆಂದರೆ, ‘ಸನಾತನ ಪ್ರಭಾತ’ವನ್ನು ಓದುವುದು. ‘ಸನಾತನ ಪ್ರಭಾತ’ದಲ್ಲಿ ಆಯುರ್ವೇದದ ಅಮೂಲ್ಯ ಮಾಹಿತಿ ಬರುತ್ತಿರುತ್ತದೆ. ಸಾಧಕರು, ವಾಚಕರು, ಹಿತಚಿಂತಕರು ಯಾರೇ ಆಗಿದ್ದರೂ, ‘ಸನಾತನ ಪ್ರಭಾತ’ದಲ್ಲಿನ ಆಯುರ್ವೇದದ ವಿಷಯವನ್ನು ನಿಯಮಿತವಾಗಿ ಓದಿ.  ಓದಿ ಕೃತಿ ಮಾಡಿ ಮತ್ತು ಅದರ ಪ್ರಸಾರವನ್ನೂ ಮಾಡಿ. ಆಯುರ್ವೇದದ ಗತವೈಭವ ಅತ್ಯಂತ ಒಳ್ಳೆಯದಾಗಿತ್ತು; ಆದರೆ ಈಗ ಅದರ ಪುನರುತ್ಥಾನ ಮಾಡುವುದು ಆವಶ್ಯಕವಾಗಿದೆ. ‘ಸನಾತನ ಪ್ರಭಾತ’ ಆಯುರ್ವೇದದ ಗತವೈಭವವನ್ನು ಪ್ರಾಪ್ತ ಮಾಡಿಕೊಡಲು ಪ್ರಯತ್ನಿಸುತ್ತಿದೆ. ಮುಂಬರುವ ಆಪತ್ಕಾಲದ ದೃಷ್ಟಿಯಿಂದಲೂ ‘ಸನಾತನ ಪ್ರಭಾತ’ದಲ್ಲಿ ಒಳ್ಳೆಯ ಮಾಹಿತಿ ಬರುತ್ತಿದೆ. ಇದರಲ್ಲಿ ಆಪತ್ಕಾಲದಲ್ಲಿ ಆಯುರ್ವೇದದ ದೃಷ್ಟಿಯಿಂದ ಏನೇನು ಮಾಡಬೇಕು ? ಇದರ ಬಗ್ಗೆ ಉತ್ತಮ ಮಾಹಿತಿ ಇರುತ್ತದೆ.

ಇಂದಿನ ಕೊರೊನಾದ ಕಾಲದಲ್ಲಿ ಅನೇಕ ಜನರು ಆಯುರ್ವೇದ ಚಿಕಿತ್ಸೆಯಿಂದ ಗುಣಮುಖರಾದರು; ಆದರೆ ಆಯುರ್ವೇದಕ್ಕೆ ರಾಜಾಶ್ರಯವೇನು ಸಿಕ್ಕಿಲ್ಲ. ಅಧಿಕೃತ ಮಾನ್ಯತೆ ಇಲ್ಲ. ಕೊರೊನಾವನ್ನು ಸಂಪೂರ್ಣ ನಾಶ ಮಾಡಲು ಅನೇಕ ವೈದ್ಯರು ಸಕ್ರಿಯರಾಗಿದ್ದಾರೆ. ಸಾಧಕರೂ ಮಂತ್ರದಿಂದ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ಹೋಮಗಳನ್ನು ಮಾಡಿ ಪ್ರಯತ್ನ ಮಾಡುತ್ತಿದ್ದಾರೆ. ಇವೆಲ್ಲವುಗಳ ಪ್ರಯತ್ನದಿಂದ ನಾವು ಕೊರೊನಾವನ್ನು ಖಂಡಿತವಾಗಿಯೂ ಸೋಲಿಸುವವರಿದ್ದೇವೆ. ಹೀಗಿದ್ದರೂ ಆಯುರ್ವೇದ ಸರಕಾರದಲ್ಲಿ ನೋಂದಣಿ ಆಗಬೇಕಾಗಿದ್ದರೆ, ಸರಕಾರದ ಮೇಲೆ ಒತ್ತಡವನ್ನು ತರುವುದು ಆವಶ್ಯಕವಾಗಿದೆ. ರಾಷ್ಟ್ರ ಮತ್ತು ಧರ್ಮ ಸಂಕಟಕ್ಕೊಳಗಾದಾಗ ಜನಸಾಮಾನ್ಯರು ಈ ಅಂಶವನ್ನು ಎತ್ತಿ ಹಿಡಿಯಬೇಕು.

೩. ಮುಂಬರುವ ಆಪತ್ಕಾಲದ ಬಗ್ಗೆ ಸಮಾಜವನ್ನು ಎಚ್ಚರಿಸುವುದು !

ಮೂರನೇ ಮಹಾಯುದ್ಧದ ಬಗ್ಗೆ ಹೇಳಲಾಗುತ್ತಿದೆ. ಜಗತ್ತಿಗೆ ಈ ಹಿಂದೆ ಇದರ ಮಾಹಿತಿ ಇರಲಿಲ್ಲ; ಆದರೆ ಪರಾತ್ಪರ ಗುರು ಡಾ. ಆಠವಲೆಯವರು ಈ ಆಪತ್ಕಾಲದ ಬಗ್ಗೆ ಈ ಹಿಂದೆಯೇ ಹೇಳಿದ್ದಾರೆ. ಅದಕ್ಕಾಗಿ ಏನೆಲ್ಲ ಸಿದ್ಧತೆಗಳನ್ನು ಮಾಡಬೇಕು ? ಎಂಬುದನ್ನೂ ಹೇಳಲಾಗುತ್ತಿದೆ. ಇಂದು ಲಾಕ್‌ಡೌನ್ ಆದರೆ ಜನರು ಅಸ್ವಸ್ಥರಾಗುತ್ತಾರೆ. ಚಿಂತೆಯಲ್ಲಿ ಸಿಲುಕಿದ್ದಾರೆ. ಮುಂದಿನ ೩-೪ ವರ್ಷ ಆಪತ್ಕಾಲ ಇರಲಿದೆ. ಇಂತಹ ಸಮಯದಲ್ಲಿ ಏನು ಮಾಡಬೇಕು ? ಹೇಗೆ ಸಿದ್ಧತೆಯನ್ನು ಮಾಡಬೇಕು ? ಇದರ ಮಾರ್ಗದರ್ಶನವನ್ನು ‘ಸನಾತನ ಪ್ರಭಾತ’ ಮಾಡುತ್ತದೆ.

೪. ‘ಸನಾತನ ಪ್ರಭಾತ’ವನ್ನು ಓದಿದ್ದರಿಂದ ಅನೇಕ ಪ್ರಶ್ನೆಗಳ ಉತ್ತರಗಳು ದೊರಕಿ ನನಗೆ ಅಧ್ಯಾತ್ಮದಲ್ಲಿ ವಿಶ್ವಾಸ ಹೆಚ್ಚಾಯಿತು

ಸನಾತನ ಸಂಸ್ಥೆಯ ಮಾತೃಮಂದಿರವೆಂದರೆ ಗೋವಾದಲ್ಲಿನ ರಾಮನಾಥಿ ಆಶ್ರಮ ! ಅಲ್ಲಿ ನನಗೆ ಹೋಗುವ ಅವಕಾಶ ಸಿಕ್ಕಿದಾಗಲೆಲ್ಲ ಅಲ್ಲಿನ ವ್ಯವಸ್ಥಾಪನೆ, ಆಯೋಜನೆಯನ್ನು ನೋಡಿ ನಾನು ಆಶ್ಚರ್ಯಪಡುತ್ತೇನೆ. ಆಪತ್ಕಾಲದಲ್ಲಿ ಕೇವಲ ಸ್ವಂತದ ರಕ್ಷಣೆ ಮಾತ್ರವಲ್ಲ, ಈಶ್ವರನ ಆಶೀರ್ವಾದದಿಂದ ಕುಟುಂಬ, ಸಾಧಕರು, ಸಮಾಜ ಇವುಗಳ ರಕ್ಷಣೆಯನ್ನು ಹೇಗೆ ಮಾಡಬೇಕು ? ಎಂಬುದೂ ಅಲ್ಲಿ ನೋಡಲು ಸಿಗುತ್ತದೆ. ಭಕ್ತನು ಕರೆದರೆ ಈಶ್ವರ ಖಂಡಿತವಾಗಿಯೂ ಬರುತ್ತಾನೆ, ಇದರ ಅನೇಕ ಉದಾಹರಣೆಗಳು ನಮ್ಮ ಬಳಿ ಇವೆ, ಆದರೆ ನನಗೆ ಅದರ ಮೇಲೆ ವಿಶ್ವಾಸ ಇರಲಿಲ್ಲ. ‘ಸನಾತನ ಪ್ರಭಾತ’ದ ವಾಚನದಿಂದ ಈಶ್ವರ ಭಕ್ತಿಯ ಜ್ಞಾನ ದೊರಕಿದ್ದರಿಂದ ನನಗೆ ವಿಶ್ವಾಸ ಬರಲಾರಂಭಿಸಿತು.

೫. ಆತ್ಮೋನ್ನತಿಯ ಕಡೆಗೆ ಕರೆದುಕೊಂಡು ಹೋಗುವ ‘ಸನಾತನ ಪ್ರಭಾತ’ದ ಎಲ್ಲ ಅಂಕಣಗಳು

‘ಸನಾತನ ಪ್ರಭಾತ’ದಲ್ಲಿನ ಎಲ್ಲ ಅಂಕಣಗಳು ಆತ್ಮೋನ್ನತಿಯ ಕಡೆಗೆ, ಮೋಕ್ಷದ ಕಡೆಗೆ ಕರೆದೊಯ್ಯುತ್ತವೆ. ನಮ್ಮಲ್ಲಿನ ಸ್ವಭಾವ ದೋಷಗಳನ್ನು ದೂರಗೊಳಿಸಿ ಹೇಗೆ ಪರಿಪೂರ್ಣವಾಗಬೇಕು ? ಇದರ ಮಾರ್ಗದರ್ಶನ ಸನಾತನ ಪ್ರಭಾತದಲ್ಲಿ ಸಿಗುತ್ತದೆ. ಸನಾತನ ಪ್ರಭಾತದಲ್ಲಿ ಪ್ರಕಟವಾಗುವ ಸಾಧಕರ ಅನುಭೂತಿಗಳಿಂದ ಮತ್ತು ಮಾರ್ಗದರ್ಶನದಿಂದ ಅಧ್ಯಾತ್ಮದಲ್ಲಿ ಸಾಧಕತ್ವದ ತನಕದ ಮಾರ್ಗಕ್ರಮಣವನ್ನು ಹೇಗೆ ಮಾಡಬೇಕು ? ಎಂಬುದು ಗಮನಕ್ಕೆ ಬರುತ್ತದೆ. ಜ್ಞಾನಯೋಗ ಮತ್ತು ಕರ್ಮಯೋಗ ಇವುಗಳನ್ನು ಹೇಗೆ ಆಚರಣೆಯಲ್ಲಿ ತರಬೇಕು ? ಭಕ್ತಿಮಾರ್ಗದಿಂದ ಹೇಗೆ ಹೋಗಬೇಕು ? ಎಂಬುದನ್ನು ಕಲಿಸುವ ಮಾರ್ಗವೆಂದರೆ ಗುರುಕೃಪಾಯೋಗ ! ಈ ಯೋಗವು ‘ಸನಾತನ ಪ್ರಭಾತ’ದಿಂದ ಕಲಿಯಲು ಸಿಗುತ್ತದೆ. ಇದು ಏನನ್ನು ಕಲಿಸುತ್ತದೆಯೋ ಅವುಗಳನ್ನು ಕೃತಿಯಲ್ಲಿ ತಂದರೆ, ಆನಂದ ಸಿಗುತ್ತದೆ.

೬. ಅಧ್ಯಾತ್ಮದಲ್ಲಿನ ಹಂತಗಳಂತೆ ಸಾಧನೆಯನ್ನು ಮಾಡಲು ‘ಸನಾತನ ಪ್ರಭಾತ’ ಉಪಯುಕ್ತವಾಗಿದೆ

ವಿಜ್ಞಾನಕ್ಕೆ ಮಿತಿಗಳಿವೆ. ಎಲ್ಲಿ ವಿಜ್ಞಾನ ಮುಗಿಯುತ್ತದೆಯೋ, ಅಲ್ಲಿ ಅಧ್ಯಾತ್ಮ ಆರಂಭವಾಗುತ್ತದೆ. ಹಾಗೆಯೇ ಎಲ್ಲಿ ‘ಅಲೋಪಥಿ’ ಮುಗಿಯುತ್ತದೆಯೋ, ಅಲ್ಲಿ ಆಯುರ್ವೇದ ಆರಂಭವಾಗುತ್ತದೆ. ಉತ್ತಮ ಸಾಧಕನಾಗಲು ಏನು ಮಾಡಬೇಕು ? ಇದರ ಮಾರ್ಗದರ್ಶನ ‘ಸನಾತನ ಪ್ರಭಾತ’ದಲ್ಲಿ ಸಿಗುತ್ತದೆ. ನಾನು ಸಾಮಾನ್ಯ ಜೀವವೆಂದು ಜನ್ಮಕ್ಕೆ ಬಂದಿದ್ದೆ. ಅದರಿಂದ ಮಾನವತ್ವದ ಕಡೆಗೆ, ಮಾನವತ್ವದಿಂದ ಸಾಧಕತ್ವದ ಕಡೆಗೆ, ಸಾಧಕತ್ವದಿಂದ ಸಂತತ್ವದ ಕಡೆಗೆ. ಅಲ್ಲಿಂದ ದೇವತ್ವದ ಕಡೆಗೆ ಹಾಗೂ ಮುಂದೆ ಮೋಕ್ಷದ ಮಾರ್ಗ ನಮಗಾಗಿ ತೆರೆದಿದೆ. ಸಾಧನೆಯ ಈ ಮಾರ್ಗದಿಂದ ಹೇಗೆ ಹೋಗಬೇಕು ? ಅಧ್ಯಾತ್ಮದಲ್ಲಿ ನಾವು ಎಲ್ಲಿದ್ದೇವೆ ? ನಮಗೆ ಎಲ್ಲಿ ಹೋಗಬೇಕಾಗಿದೆ ಮತ್ತು ಏನು ಮಾಡುವುದಿದೆ ? ಇದನ್ನು ತಿಳಿದುಕೊಳ್ಳಲೂ ‘ಸನಾತನ ಪ್ರಭಾತ’ ತುಂಬ ಉಪಯುಕ್ತವಾಗಿದೆ. ಉಚ್ಚ-ನೀಚ, ಧರ್ಮ-ಜಾತಿ, ಬಡವ-ಶ್ರೀಮಂತ ಹೀಗೆ ಯಾವುದೇ ಭೇದ ಇಲ್ಲದಿರುವ ಒಂದು ಸಂಸ್ಥೆ ಅಂದರೆ ಸನಾತನ ಸಂಸ್ಥೆ. ‘ಸನಾತನ ಪ್ರಭಾತ’ವನ್ನು ನಾನು ನಿಯಮಿತವಾಗಿ ಓದುತ್ತೇನೆ. ನನ್ನಲ್ಲಿ ಆಗಿರುವ ಬದಲಾವಣೆಗೆ ‘ಸನಾತನ ಪ್ರಭಾತ’ದ ಬಹುದೊಡ್ಡ ಪಾಲಿದೆ. ಹೇಗೆ ವ್ಯಕ್ತಿ ೧೦೦ ವರ್ಷ ಕಾಲ ಬಾಳಲು ಏನೇನು ಮಾಡಬೇಕು ? ಎಂಬುದನ್ನು ಆಯುರ್ವೇದ ಹೇಳುತ್ತದೆಯೋ, ಹಾಗೆ ಸನಾತನ ಪ್ರಭಾತ ೧೦೦ ವರ್ಷ ಆನಂದದಿಂದ ಹೇಗಿರಬೇಕು ? ಎಂಬುದನ್ನು ಕಲಿಸುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಪ್ರತಿಯೊಂದು ಸೂಚನೆಯನ್ನು ಗೌರವಿಸಿ ನಮ್ಮ ಜೀವನವನ್ನು ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕಾಗಿ ಮುಡಿಪಾಗಿಟ್ಟರೆ, ಖಂಡಿತವಾಗಿಯೂ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿದೆ.

– ವೈದ್ಯ ಸುವಿನಯ ದಾಮಲೆ, ರಾಷ್ಟ್ರೀಯ ಗುರು, ಆಯುಷ ಸಚಿವಾಲಯ.

‘ಸನಾತನ ಪ್ರಭಾತ’ದಿಂದ ನನ್ನಲ್ಲಿ ಅನೇಕ ಬದಲಾವಣೆಗಳು ಆಗಿವೆ ! – ವೈದ್ಯ ಸುವಿನಯ ದಾಮಲೆ

ನನ್ನ ಮನಸ್ಸಿನಲ್ಲಿ ‘ದೇವಸ್ಥಾನಕ್ಕೆ ಏಕೆ ಹೋಗಬೇಕು ?’, ‘ಪೂಜೆಯನ್ನು ಏಕೆ ಮಾಡಬೇಕು ?’, ‘ದೇವರ ಪೂಜೆ ಮಾಡಿ ಏನು ಉಪಯೋಗ ?’ ಇತ್ಯಾದಿ ಪ್ರಶ್ನೆಗಳು ಬರುತ್ತಿದ್ದವು. ಈ ಪ್ರಶ್ನೆಗಳು ವಿಜ್ಞಾನವಾದಿ ದೃಷ್ಟಿಕೋನದಿಂದ ಆಗಿದ್ದ ಬುದ್ಧಿಭೇದದಿಂದ ನನ್ನ ಮನಸ್ಸಿನಲ್ಲಿ ಉದ್ಭವಿಸುತ್ತಿದ್ದವು; ಆದರೆ ‘ಸನಾತನ ಪ್ರಭಾತ’ವನ್ನು ಓದಿ ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದಂತೆ ಕೃತಿಗಳನ್ನು ಮಾಡಿದ್ದರಿಂದ ನನ್ನಲ್ಲಿ ಅನೇಕ ಬದಲಾವಣೆಗಳಾದವು. ಈ ಬದಲಾವಣೆಗಳು ನನಗೂ ಅರಿವಾಗತೊಡಗಿದವು. ನಾನು ಭಕ್ತಿ ಮಾರ್ಗದ ಕಡೆಗೆ ಮಾರ್ಗಕ್ರಮಣ ಮಾಡಿದೆ. ನಾಮಸಾಧನೆಯನ್ನು ಆರಂಭಿಸಿದೆ. ನನ್ನ ಬಳಿ ಬರುವ ರೋಗಿಗಳಿಗೂ ನಾನು ಸಾಧನೆಯನ್ನು ಹೇಳಲು ಆರಂಭಿಸಿದೆ.

ಇಂದು ಅನೇಕ ವ್ಯಕ್ತಿಗಳು ಸಾಧನೆಯಲ್ಲಿನ ಆನಂದವನ್ನು ಪಡೆದುಕೊಳ್ಳುತ್ತಿದ್ದಾರೆ. ಮೋಜು-ಮಜಾ ಮಾಡುವುದು ಪಾಶ್ಚಾತ್ಯ ಸಂಸ್ಕೃತಿಯ ಭಾಗವಾಗಿದ್ದರೆ, ಆನಂದವನ್ನು ಪಡೆದುಕೊಳ್ಳುವುದು ಭಾರತೀಯ ಸಂಸ್ಕೃತಿಯಾಗಿದೆ. ಆನಂದದಲ್ಲಿರಲು ಭೂತಕಾಲ, ಭವಿಷ್ಯತ್ಕಾಲದಲ್ಲಿ ಅಲ್ಲ; ವರ್ತಮಾನಕಾಲದಲ್ಲಿ ಇರಬೇಕು. ವರ್ತಮಾನಕಾಲದಲ್ಲಿದ್ದು ಆನಂದವನ್ನು ಹೇಗೆ ಪಡೆಯಬೇಕು, ಎಂಬುದನ್ನು ತಿಳಿದುಕೊಳ್ಳಲು ‘ಸನಾತನ ಪ್ರಭಾತ’ವನ್ನು ಓದಬೇಕು.

ಅನೇಕ ರೋಗಗಳ ತವರುಮನೆಯಾಗಿರುವ ಚಾಕಲೇಟ್

ನಮ್ಮ ಸಂಸ್ಕೃತಿಯಲ್ಲಿ ಇಲ್ಲದಿರುವ ಚಾಕಲೇಟ್ ಪದಾರ್ಥವು ಅನೇಕ ರೋಗಗಳ ವಿಶೇಷವಾಗಿ ಹಲ್ಲುಗಳ ಅನೇಕ ರೋಗಗಳ ತವರುಮನೆಯಾಗಿದೆ. ಅದಕ್ಕಿಂತಲೂ ಶರೀರದ ಮೇಲೆ ಮಹಾಭಯಂಕರ ಪರಿಣಾಮವಾಗುತ್ತದೆ, ಅದು ಅದರಲ್ಲಿ ಬಳಸಲಾದ ಸ್ಯಾಕ್ರೀನದಿಂದ ! ‘ಜಾಗತಿಕ ಆರೋಗ್ಯ ಸಂಘಟನೆ’ಯೂ ಸ್ಯಾಕ್ರೀನ್ ಪದಾರ್ಥವು ಆರೋಗ್ಯಕ್ಕೆ ಅಪಾಯಕಾರಿ ಮತ್ತು ಘಾತಕವಾಗಿದೆ ಎಂದು ಹೇಳಿದೆ. ಸ್ಯಾಕ್ರೀನ್‌ದಿಂದಾಗಿ ಅರ್ಬುದರೋಗವಾಗುವ ಸಾಧ್ಯತೆಯೂ ಇದೆ. ಆರೋಗ್ಯವು ಉತ್ತಮವಾಗಿರಬೇಕಿದ್ದರೆ, ಸ್ಯಾಕ್ರೀನ್‌ದಂತಹ ಪದಾರ್ಥಗಳಿಂದ ಸಿದ್ಧಪಡಿಸಿದ ಚಾಕಲೇಟ್‌ನಿಂದ ದೂರವಿರುವುದೇ ಉತ್ತಮ.

– ವೈದ್ಯ ಸುವಿನಯ ದಾಮಲೆ