ಆಧ್ಯಾತ್ಮಿಕ ಸ್ತರದ ಉಪಾಯಕ್ಕೆ ಸಂಬಂಧಿಸಿ ಸಾಧಕರಿಗೆ ಸೂಚನೆ !

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

‘ಸನಾನತದ ಸಂತರು, ಶೇ. ೬೦ ಕ್ಕಿಂತ ಹೆಚ್ಚಿನ ಮಟ್ಟದ ಸಾಧಕರು ಮತ್ತು ಇತರ ಸಾಧಕರು ಅವರಿಗಾಗುವ ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ತೊಂದರೆಗಳಿಗೆ ಆಧ್ಯಾತ್ಮಿಕ ಸ್ತರದ ಉಪಾಯವೆಂದು ಪ್ರಾಣ ಶಕ್ತಿವಹನ ಪದ್ಧತಿಗನುಸಾರ ನಾಮ ಜಪವನ್ನು ಹುಡುಕುತ್ತಾರೆ. ಈ ಪದ್ಧತಿಗನುಸಾರ ಕುಂಡಲಿನಿ ಶಕ್ತಿಯ ಪ್ರವಾಹದಲ್ಲಿ ಅಡಚಣೆಯನ್ನು ಕಂಡುಹಿಡಿದು ಪ್ರತ್ಯಕ್ಷ ಉಪಾಯ ಮಾಡುವಾಗ ಕಂಡುಹಿಡಿದ ಸ್ಥಾನದ ಮೇಲೆ ಮುದ್ರೆ ಮಾಡಿ ನ್ಯಾಸ ಮಾಡಬೇಕಾಗುತ್ತದೆ. ಆಗ ಕೆಲವು ಗಂಟೆ ಉಪಾಯ ಮಾಡಲಿಕ್ಕಿದ್ದರೆ ಕೈ ನೋವಾಗಲು ಆರಂಭವಾಗುತ್ತದೆ. ಕಾಯಿಲೆ ಇದ್ದವರು, ವೃದ್ಧರು ಅಥವಾ ಶಾರೀರಿಕ ತೊಂದರೆ ಇರುವ ಸಾಧಕರಿಗೆ ಹೀಗೆ ಕಂಡು ಹಿಡಿದ ಸ್ಥಾನದ ಮೇಲೆ ಮುದ್ರೆ ಮಾಡಿ ನ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಸ್ಥೂಲದಿಂದ ಇಂತಹ ಕೃತಿಯನ್ನು ಮಾಡದೆ ತಾವು ಕಂಡು ಹಿಡಿದ ಸ್ಥಾನದ ಮೇಲೆ ಮಾನಸ ನ್ಯಾಸ ಮತ್ತು ಮುದ್ರೆ ಮಾಡಬೇಕು.

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ ಪನವೇಲ. (೧೦.೧೨.೨೦೨೧)