ಸಾಧನೆಯ ಕುರಿತು ಪರಾತ್ಪರ ಗುರು ಡಾ. ಆಠವಲೆಯವರ  ಮಾರ್ಗದರ್ಶನ !

ಜೀವನದಲ್ಲಿ ಬಂದ ಸಂಕಷ್ಟಗಳು ದೂರವಾಗಬೇಕೆಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡುವುದರಿಂದ ಅದು ದೂರವಾಗಲು ಜಪವು ಖರ್ಚಾಗುತ್ತದೆ ಹಾಗೂ ಆದುದರಿಂದ ಈಶ್ವರಪ್ರಾಪ್ತಿಗಾಗಿ ಜಪ ಮಾಡಿಯೂ ಈಶ್ವರಪ್ರಾಪ್ತಿಯಾಗುವುದಿಲ್ಲ !

ಪರಾತ್ಪರ ಗುರು ಡಾ. ಆಠವಲೆ

ಓರ್ವ ಭಕ್ತನು ೩೦ ವರ್ಷಗಳಲ್ಲಿ ೧೩ ಕೋಟಿ ರಾಮನಾಮದ ಜಪ ಮಾಡಿದರೂ ಅವನಿಗೆ ಶ್ರೀರಾಮನ ದರ್ಶನವಾಗಲಿಲ್ಲ. ಅದಕ್ಕೆ ಮೇಲೆ ಹೇಳಿದ ಕಾರಣವಿದೆ. ಇದರಿಂದ ಸಕಾಮ ಪ್ರಾರ್ಥನೆಯು ಸ್ವೇಚ್ಛೆಯ ಅಂತರ್ಗತ ಬರುತ್ತಿರುವುದರಿಂದ ಹಾಗೆ ಮಾಡಿದಾಗ ಹಾನಿಯಾಗುತ್ತದೆ. ಹಾಗಾಗಿ ಅದನ್ನು ಮಾಡಬಾರದು ಎಂದು ಕಲಿಯಲು ಸಿಗುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ (೬.೧೧.೨೦೨೧)

ಮುಂಬರುವ ಆಪತ್ಕಾಲದಲ್ಲಿ ಮಂದಹಾಸ ಸಹಿತ ಪ್ರಸನ್ನ ಮುಖವೇ ದುಃಖದಲ್ಲಿರುವ ಜನರಿಗೆ ಮೊದಲ ಪ್ರಥಮಚಿಕಿತ್ಸೆಯಾಗಿರುವುದು !

‘ಮುಂಬರುವ ಆಪತ್ಕಾಲದಲ್ಲಿ ಜನರು ತುಂಬಾ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗಲಿದೆ. ಅದರಲ್ಲಿ ಯಾರು ಸಾಧನೆಯನ್ನು ಮಾಡುವುದಿಲ್ಲವೋ, ಅವರು ಮಾನಸಿಕವಾಗಿ ಕುಗ್ಗಿ ಹೋಗುವರು. ಅಂತಹವರಿಗೆ ಬಾಹ್ಯತಃ ಎಷ್ಟೇ ಚಿಕಿತ್ಸೆ ನೀಡಿದರೂ, ಅವರು ಮನಸ್ಸಿಗೆ ಆಧಾರ ಅಥವಾ ಉತ್ಸಾಹ ನೀಡಲು ಸಾಧ್ಯವಿಲ್ಲ. ಆದರೆ ಆ ಸಮಯಕ್ಕೆ ಅವರ ಎದುರಿಗೆ ಬರುವ ವ್ಯಕ್ತಿಯ ಪ್ರಸನ್ನ ಮುಖ ಮತ್ತು ಮಂದಹಾಸವೇ ಅವರ ಮನಸ್ಸಿಗೆ ಆಧಾರ ಮತ್ತು ಉತ್ಸಾಹ ನೀಡುವಂತಿರುವುದು. ಅದು ಅವರ ಮನಸ್ಸಿನ ಪ್ರಥಮಚಿಕಿತ್ಸೆಯಾಗಿದೆ. ಇದಕ್ಕಾಗಿ ಸಾಧಕರೇ, ಇಂದಿನಿಂದಲೇ ಮಂದಹಾಸ ಸಹಿತ ಮುಖವನ್ನು  ಪ್ರಸನ್ನವಾಗಿಡಲು ಪ್ರಯತ್ನಿಸಿ.

– ಪರಾತ್ಪರ ಗುರು ಡಾ. ಆಠವಲೆ (೨೫.೧೧.೨೦೨೧)

ಪಾಲಕರೇ, ಮಕ್ಕಳ ಜೀವನವು ಸಾರ್ಥಕವಾಗಲು ಅವರಿಗೆ ಸಾಧನೆಯನ್ನು ಕಲಿಸಿರಿ

ಪಾಲಕರು ಅವರ ಮಕ್ಕಳಲ್ಲಿ ಬೇರೆ ಬೇರೆ ಕಲೆಗಳು ವಿಕಸಿತವಾಗಲೆಂದು ಅವರ ಅಭಿರುಚಿಗನುಸಾರ ಸಂಗೀತ, ನೃತ್ಯ ಮುಂತಾದ ಕಲೆಗಳ ಶಿಕ್ಷಣವನ್ನು ನೀಡುತ್ತಾರೆ. ಆದರೆ ಬಹಳ ಕಡಿಮೆ ಪಾಲಕರು ಮಕ್ಕಳ ಜನ್ಮ ಸಾರ್ಥಕವಾಗಲಿ ಎಂಬ ಉದ್ದೇಶದಿಂದ ಅವರಿಗೆ ಸಾಧನೆಯನ್ನು ಕಲಿಯಲು ಸಹಾಯ ಮಾಡುತ್ತಾರೆ.

– ಪರಾತ್ಪರ ಗುರು ಡಾ. ಆಠವಲೆ (೧೩.೧೦.೨೦೨೧)