ಬಿಜೆಪಿಯನ್ನು ವಿರೋಧಿಸಿದರೆ ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಇವುಗಳಿಂದ ೧೦೦ ಕೋಟಿ ರೂಪಾಯಿ ನೀಡುವ ಪ್ರಸ್ತಾವನೆ !

ಶ್ರೀ ರಾಮಮಂದಿರಕ್ಕೆ ೨೦ ಕೋಟಿ ರೂಪಾಯಿಯ ಭೂಮಿ ಖರೀದಿಯ ಪ್ರಕರಣದಿಂದ ಬಿಜೆಪಿ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟನ್ನು ವಿರೋಧಿಸಲು ಆಮ್ ಆದಮಿ ಪಕ್ಷ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನಿಂದ ೧೦೦ ಕೋಟಿ ರೂಪಾಯಿಗಳ ಪ್ರಸ್ತಾವನೆ ಬಂದಿತ್ತು

ಸಮಾಜವನ್ನು ದಾರಿ ತಪ್ಪಿಸಲು ರಾಜಕೀಯ ದ್ವೇಷದಿಂದಾದ ಆರೋಪ ! – ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್

‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ದೇವಾಲಯಕ್ಕಾಗಿ ಕನಿಷ್ಠ ಬೆಲೆಗೆ ಭೂಮಿಯನ್ನು ಖರೀದಿಸಿದೆ. ಕೆಲವು ರಾಜಕೀಯ ಪಕ್ಷಗಳ ನಾಯಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಆರೋಪಿಸುವವರು ರಾಜಕೀಯದೊಂದಿಗೆ ನಿಕಟ ಸಂಬಂಧ ಹೊಂದಿದ್ದು ಸಮಾಜವನ್ನು ದಾರಿತಪ್ಪಿಸಲು ರಾಜಕೀಯ ದ್ವೇಷದಿಂದ ಆರೋಪಗಳನ್ನು ಮಾಡುತ್ತಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸ್ಪಷ್ಟೀಕರಣ ನೀಡಿದರು.

ಶ್ರೀ ರಾಮಮಂದಿರಕ್ಕಾಗಿ ೪೪ ಪದರದ ಅಡಿಪಾಯ ರಚನೆಯಾಗುತ್ತಿದೆ !

ಶ್ರೀ ರಾಮಜನ್ಮಭೂಮಿಯಲ್ಲಿ ಭವ್ಯವಾದ ಶ್ರೀ ರಾಮಮಂದಿರದ ಕೆಲಸವು ಭರದಿಂದ ಸಾಗಿದೆ. ಪ್ರಸ್ತುತ ದೇವಾಲಯದ ಅಡಿಪಾಯದ ಕೆಲಸ ನಡೆಯುತ್ತಿದೆ. ದೇವಾಲಯಕ್ಕೆ ೪೪ ಪದರದ ಅಡಿಪಾಯ ಹಾಕಲಾಗುತ್ತಿದೆ. ಈವರೆಗೆ ೬ ಪದರಗಳ ಕೆಲಸ ಪೂರ್ಣಗೊಂಡಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ್ ಅವರು ಮಾಹಿತಿ ನೀಡಿದರು.