ಜಗತ್ಪ್ರಸಿದ್ಧ ಭಾರತೀಯ ಸಂಗೀತಕಾರನು ಶ್ರೀರಾಮಜನ್ಮಭೂಮಿಯನ್ನು ಹೊಗಳಿದ್ದರಿಂದ ಮತಾಂಧರಿಗೆ ಉದರಶೂಲೆ !

ಗಂಗಾ-ಜಮುನೀ ತಹಜೀಬ ಅಂದರೆ ಗಂಗಾ ಮತ್ತು ಯಮುನಾ ನದಿಗಳ ತೀರದಲ್ಲಿ ವಾಸಿಸುವ ಹಾಗೂ ಹಿಂದೂ ಮತ್ತು ಮುಸಲ್ಮಾನರ ನಡುವೆ ಕಥಿತ ಐಕ್ಯವನ್ನು ದರ್ಶಿಸುವ ಸಂಸ್ಕೃತಿ !

ಸಂಗೀತಕಾರ ಹಾಗೂ ಪರಿಸರವಾದಿ ರಿಕೀ ಕೇಜರ

ನವದೆಹಲಿ – ಸಂಗೀತ ಕ್ಷೇತ್ರದಲ್ಲಿ ಪ್ರತಿಷ್ಠಿತರು ಎಂದು ಪರಿಗಣಿಸಲಾಗುವ ಜಗತ್ರ್ಪಸಿದ್ಧ, ಎರಡು ಬಾರಿ ‘ಗ್ರಾಮೀ ಪ್ರಶಸ್ತಿ’ಗೆ ಯೋಗ್ಯರೆಂದು ಆಯ್ಕೆಯಾದ ಸಂಗೀತಕಾರ ಹಾಗೂ ಪರಿಸರವಾದಿ ರಿಕೀ ಕೇಜರವರು ಇತ್ತೀಚೆಗೆ ಅಯೋಧ್ಯೆಯಲ್ಲಿನ ರಾಮಜನ್ಮಭೂಮಿಗೆ ಭೇಟಿ ನೀಡಿದರು. ಅವರು ಟ್ವಿಟರನಲ್ಲಿ ವಿಡಿಯೋ ಪ್ರಸಾರ ಮಾಡಿ ಈ ಭವ್ಯ ದೇವಸ್ಥಾನದ ಚಾಲ್ತಿಯಲ್ಲಿರುವ ಕಟ್ಟಡ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು. ಅವರು ಟ್ವಿಟರನಲ್ಲಿ ಹೀಗೆ ಹೇಳಿದರು, ‘ನಾನು ರಾಮಜನ್ಮಭೂಮಿಗೆ ಭೇಟಿ ನೀಡಿದೆ. ಇಲ್ಲಿನ ಕಟ್ಟಡ ಕಾಮಗಾರಿಯನ್ನು ನೋಡಿ ನಾನು ಮರುಳಾದೆನು. ಶ್ರೀರಾಮಮಂದಿರವು ನಿರ್ಮಾಣದ ನಂತರ ೧ ಸಾವಿರ ವರ್ಷ ಇರಲಿದೆ’. ಕೇಜರವರು ಮುಂದುವರಿದು, ರಾಮಮಂದಿರಕ್ಕೆ ಭೇಟಿ ನೀಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯವೇ ಆಗಿದೆ. ಇದು ಅತ್ಯಂತ ಸುಂದರವಾದ ಜಾಗವಾಗಿದೆ. ಇಲ್ಲಿ ನಾಲ್ಕೂ ದಿಕ್ಕಿನಲ್ಲಿ ಕಾಮಗಾರಿ ನಡೆಯುತ್ತಿದೆ. ಜಗತ್ತಿನಾದ್ಯಂತ ಇರುವ ಜನರು ಈ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀರಾಮರ ಆಶೀರ್ವಾದವನ್ನು ಪಡೆಯಬೇಕು.

ಕೇಜರವರ ಈ ಟ್ವಿಟರ್‌ನಲ್ಲಿ ಮತಾಂಧ ಮುಸಲ್ಮಾನರು ವಿರೋಧವನ್ನು ವ್ಯಕ್ತಪಡಿಸುತ್ತ ಕೇಜರವರನ್ನು ನಿಷೇಧಿಸಿದರು. ಖಾನ ಎಂಬ ಹೆಸರಿನ ವ್ಯಕ್ತಿಯು ‘ದೇವಸ್ಥಾನಕ್ಕೆ ಭೂಮಿಯು (ಮುಸಲ್ಮಾನರಿಂದ) ದಾನದ ರೂಪದಲ್ಲಿ ದೊರೆತಿದೆ. ಬಾಬರೀ ಮಸೀದಿಯ ಸಂದರ್ಭದಲ್ಲಿ ಆದ ಅನ್ಯಾಯದ ಇತಿಹಾಸವನ್ನು ನಾವೆಂದಿಗೂ ಮರೆಯುವುದಿಲ್ಲ !’ ಎಂದು ಹೇಳಿದ್ದಾನೆ. ( ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮೇಲೆ ಆಕ್ಷೇಪವೆತ್ತುವವರು ಈ ದೇಶವನ್ನು ಬಿಟ್ಟ ಹೋಗಬೇಕು, ಎಂದು ಯಾರಾದರೂ ಹೇಳಿದರೆ ಅದರಲ್ಲಿ ತಪ್ಪೇನು ? – ಸಂಪಾದಕರು)

ಸಾಮ್ಯವಾದಿಗಳಿಗೂ ಕೇಜರವರ ವಿಡಿಯೋದಿಂದ ಉದರಶೂಲೆ ನಿರ್ಮಾಣವಾಗಿದೆ. ‘ದ ಹಿಂದೂ’ ವಾರ್ತಾಪತ್ರಿಕೆಯ ಮಹಿಳಾ ಪತ್ರಕರ್ತೆಯಾದ ಸುಚಿತ್ರಾ ಕಾರ್ತಿಕೇಯನ್‌ರವರು ‘ಏನಾದರೂ ಬಡಬಡಿಸಬೇಡಿ ! ಗ್ರಾಮೀ ಪ್ರಶಸ್ತಿಯು ಒಂದಕ್ಕಿಂತ ಹೆಚ್ಚಿನ ಬಾರಿ ಗೆದ್ದ ಏಕೈಕ ಭಾರತೀಯನು ಒಮ್ಮಿಂದೊಮ್ಮೆಯೇ ಭಕ್ತನಾಗಿದ್ದು ಹೇಗೆ ?’ ಎಂದು ಹೇಳಿದ್ದಾರೆ. (ಹಿಂದೂದ್ವೇಷಿಗಳಿಂದ ರಾ.ಸ್ವ.ಸಂಘ ಹಾಗೂ ಹಿಂದುತ್ವದ ಸಮರ್ಥಕರಾದ ಹಿಂದೂಗಳನ್ನು ‘ಭಕ್ತ’ ಎಂಬ ಶಬ್ದದ ಮೂಲಕ ಟೀಕಿಸಲಾಗುತ್ತದೆ.)

ಸಂಪಾದಕೀಯ ನಿಲುವು

  • ‘ಗಂಗಾ ಜಮುನೀ ತಹಜೀಬ’ ಎಂಬ ಮುದ್ದಾದ ಹೆಸರಿನಡಿಯಲ್ಲಿ ಹಿಂದೂಗಳಿಗೆ ಸಾಮರಸ್ಯದ ದೋಸೆಗಳನ್ನು ತಿನ್ನಿಸುವ ಕಥಿತ ಜಾತ್ಯಾತೀತವಾದಿಗಳು ಈಗ ಮುಸಲ್ಮಾನರಿಗೆ ಉಪದೇಶವನ್ನು ಏಕೆ ನೀಡುತ್ತಿಲ್ಲ ?
  • ಬಹುಸಂಖ್ಯಾತ ಹಿಂದೂಗಳ ಶ್ರದ್ಧೆಯನ್ನು ಗೌರವಿಸಲಾಗದವರು ಪ್ರಜಾಪ್ರಭುತ್ವವಿರುವ ಭಾರತದಲ್ಲಿ ಭಾರತದಲ್ಲಿ ವಾಸಿಸಲು ಯೋಗ್ಯರೇ ?