ಕೇವಲ ಶೇ. ೧೫ರಷ್ಟು ಕಲ್ಲುಗಳು ಲಭ್ಯ
ಜಯಪುರ (ರಾಜಸ್ಥಾನ) – ಅಯೊಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯವಾದ ಶ್ರೀರಾಮ ಮಂದಿರಕ್ಕೆ ಗುಲಾಬಿ ಕಲ್ಲಿನ ಕೊರತೆಯುಂಟಾಗಿದೆ.
೧. ಈ ಕುರಿತು ಮಾಹಿತಿ ನೀಡಿದ ‘ಶ್ರೀರಾಮ ಜನ್ಮಭೂಮಿ ತಿರ್ಥಕ್ಷೇತ್ರ ಟ್ರಸ್ಟ’ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ ಅವರು, ಮಂದಿರಕ್ಕೆ ೪ ಲಕ್ಷ ೭೦ ಸಾವಿರ ಘನ ಅಡಿ ಗುಲಾಬಿ ಕಲ್ಲುಗಳು ಬೇಕಾಗಿವೆ. ಇಲ್ಲಿಯವರೆಗೆ ೭೦ ಸಾವಿರ ಘನ ಅಡಿ ಅಂದರೆ ಕೇವಲ ಶೇ. ೧೫ ರಷ್ಟು ಕಲ್ಲುಗಳು ಅಯೋಧ್ಯೆಯನ್ನು ತಲುಪಿವೆ. ಗಣಿ ಇಲಾಖೆ ಗುತ್ತಿಗೆ ಪಡೆದಿರುವ ೪೧ ಗಣಿಗಳ ಪೈಕಿ ೧೪ ಗಣಿಗಳಲ್ಲಿ ಮಾತ್ರ ಗುಲಾಬಿ ಕಲ್ಲುಗಳಿವೆ ಎಂದು ಹೇಳಿದರು.
೨. ಕೊರತೆಗೆ ವಿವಿಧ ಕಾರಣಗಳನ್ನು ಹೇಳಲಾಗಿದೆ. ಅದರಲ್ಲಿ ಹರಾಜಾಗಿರುವ ೪೧ ಗಣಿಗಳಲ್ಲಿ ಜೂನ ೧೫ರ ಮೊದಲು ಅಗೆಯುವುದು ಕಷ್ಟಕರವಾಗಿದೆ. ಗಣಿ ಗುತ್ತಿಗೆ ಪಡೆದವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಮೇ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ನಂತರ ೧೦ ರಿಂದ ೧೫ ದಿನಗಳು ಸಿದ್ಧತೆಗಾಗಿ ತಗಲುತ್ತದೆ. ೧೫ ದಿನಗಳ ಅಗೆದ ನಂತರ ಮಳೆ ಪ್ರಾರಂಭವಾಗುತ್ತದೆ. ಹೀಗಾಗಿ ದೀಪಾವಳಿಯ ನಂತರವೇ ಈ ಕಾಮಗಾರಿ ಆರಂಭವಾಗಲಿದೆ. ೧೪ ಗಣಿಗಳಲ್ಲಿ ಮಾತ್ರ ‘ಎ’ ದರ್ಜೆಯ ಗುಲಾಬಿ ಕಲ್ಲುಗಳಿವೆ. ಹಗಲು ರಾತ್ರಿ ಅಗೆದರೂ ಕಲ್ಲುಗಳನ್ನು ಪೂರೈಸಲು ೨ ವರ್ಷ ಬೇಕಾಗಬಹುದು. ಕಲ್ಲು ನಿರ್ಮಿಸಲು ಬೇರೆ ಸಮಯ ತಗಲುತ್ತದೆ ಎಂದು ಹೇಳಿದರು.