ಶ್ರೀ ರಾಮ ಮಂದಿರ ಹೆಸರಿನಲ್ಲಿ ನಕಲಿ ಜಾಲತಾಣವನ್ನು ತಯಾರಿಸಿ ಅದರಿಂದ ಲಕ್ಷಗಟ್ಟಲೆ ದೇಣಿಗೆ(ಚಂದಾ)ಯನ್ನು ಸಂಗ್ರಹಿಸಿದ ಐವರ ಬಂಧನ

ಮೊಘಲರು ಹಿಂದೂಗಳ ದೇವಾಲಯಗಳನ್ನು ಲೂಟಿ ಮಾಡಿದರು, ಅಂತಹದ್ದೇ ಕೃತ್ಯವನ್ನು ಕೆಲವು ಜನ್ಮಹಿಂದೂಗಳು ಮಾಡುತ್ತಿರುವಾಗ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !

ಅಯೋಧ್ಯೆ (ಉತ್ತರಪ್ರದೇಶ) – ಅಯೋಧ್ಯೆಯ ಶ್ರೀ ರಾಮಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ರಾಮ ಮಂದಿರಕ್ಕಾಗಿ ನಕಲಿ ಜಾಲತಾಣವನ್ನು ನಿರ್ಮಿಸಿ ದೇಣಿಗೆಯನ್ನು ಸಂಗ್ರಹಿಸಿದ ಐದು ಜನರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಅವರು ರಾಮಭಕ್ತರಿಂದ ಈ ಜಾಲತಾಣದ ಮಾಧ್ಯಮದಿಂದ ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಅವರು ‘ರಾಮಜನ್ಮಭೂಮಿ ಟ್ರಸ್ಟ್, ಅಯೋಧ್ಯಾ’ ಎಂಬ ನಕಲಿ ಜಾಲತಾಣವನ್ನು ಸ್ಥಾಪಿಸಿದ್ದರು. ದೇಣಿಗೆ ನೀಡಲು ಬಯಸುವವರಿಗೆ ಜಾಲತಾಣದಿಂದ ಬ್ಯಾಂಕ್ ಖಾತೆ ಸಂಖ್ಯೆಯನ್ನು ಸಹ ಅವರು ನೀಡಿದ್ದರು. ಆಶಿಶ್ ಗುಪ್ತಾ, ನವೀನ್ ಕುಮಾರ್ ಸಿಂಗ್, ಸುಮಿತ್ ಕುಮಾರ್, ಅಮಿತ್ ಝಾ ಮತ್ತು ಸೂರಜ್ ಗುಪ್ತಾ ಇವು ಆ ಆರೋಪಿಗಳ ಹೆಸರುಗಳಿವೆ. ಅವರಿಂದ ಐದು ಸಂಚಾರವಾಣಿಗಳು, ೧ ಲ್ಯಾಪ್‍ಟಾಪ್ ಮತ್ತು ಆಧಾರ ಕಾರ್ಡ್‍ನ ೫೦ ಪ್ರತಿಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.