ತೆಲಂಗಾಣ ರಾಷ್ಟ್ರ ಸಮಿತಿಯ ಮುಖಂಡರಿಂದ ೨೦೦ ಕೋಳಿಗಳು ಮತ್ತು ಮಧ್ಯದ ಬಾಟಲಿಗಳ ವಿತರಣೆ !

ಇಂದು ವಿಜಯದಶಮಿಯ ಮುಹೂರ್ತದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯಿಂದ ರಾಷ್ಟ್ರೀಯ ಪಕ್ಷದ ಘೋಷಣೆ !

ವಾರಂಗಳ (ತೆಲಂಗಾಣ) – ತೆಲಂಗಾಣದ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿಯ ಮುಖಂಡ ಕೆ .ಚಂದ್ರಶೇಖರ್ ರಾವ ಇವರು ವಿಜಯದಶಮಿಯ ಮುಹೂರ್ತದಲ್ಲಿ ರಾಷ್ಟ್ರೀಯ ಪಕ್ಷದ ಘೋಷಣೆ ಮಾಡುವವರಿದ್ದಾರೆ. ಈ ಸಂದರ್ಭದಲ್ಲಿ ವಾರಂಗಳದಲ್ಲಿ ಈ ಪಕ್ಷದ ನಾಯಕ ರಾಜನ್ ಗೆ ಶ್ರೀಹರಿ ಕಾರ್ಮಿಕರಿಗೆ ಕೋಳಿಗಳು ಮತ್ತು ಮಧ್ಯದ ಬಾಟಲಿಗಳು ಹಂಚಿರುವುದು ಕಂಡು ಬಂದಿದೆ. ಇದರಲ್ಲಿ ೨೦೦ ಕಾರ್ಮಿಕರಲ್ಲಿ ಅದನ್ನು ವಿತರಿಸಲಾಗಿದೆ.

ಸಂಪಾದಕೀಯ ನಿಲುವು

ಜನರಿಗೆ ಈ ರೀತಿಯ ತಮೋಗುಣದ ವಸ್ತುಗಳು ಇಲ್ಲಿಯವರೆಗೆ ಮುಚ್ಚು ಮರೆಯಲ್ಲಿ ಹಂಚಲಾಗುತ್ತಿತ್ತು, ಆದರೆ ಈಗ ಬಹಿರಂಗವಾಗಿಯೇ ಹಂಚಲಾಗುತ್ತಿರುವುದು ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ !