‘ಸ್ವೀಡನ್ ಡೆಮೋಕ್ರಟ್ಸ್’ ಈ ಕಟ್ಟರ್ ಮುಸಲ್ಮಾನವಿರೋಧಿ ರಾಜಕೀಯ ಪಕ್ಷವು ಸ್ವೀಡನ್‌ನ ಎರಡನೆಯ ದೊಡ್ಡ ಪಕ್ಷ !

‘ಸ್ವೀಡನ್ ಡೆಮೋಕ್ರಟ್ಸ್’ ಬೆಂಬಲದಿಂದ ಉಲ್ಫ ಕ್ರಿಸ್ಟರ‍್ಸನ್ ಸ್ವೀಡನ್‌ನ ಹೊಸ ಪ್ರಧಾನಮಂತ್ರಿಯೆಂದು ನೇಮಕ !

ಸ್ಟಾಕ್‌ಹೋಮ್ (ಸ್ವೀಡನ್)– ಸ್ವೀಡನ್ ಸಂಸತ್ತು ಉಲ್ಫ ಕ್ರಿಸ್ಟರ್‌ಸನ್ ಇವರನ್ನು ಸ್ವೀಡನ್‌ನ ಪ್ರಧಾನಮಂತ್ರಿಯೆಂದು ಆರಿಸಿದೆ. ಕ್ರಿಸ್ಟರಸನ್ ಇವರಿಗೆ ‘ಕ್ರಿಶ್ಚಿಯನ್ ಮೊಡರೆಟ್ಸ್’ ಪಕ್ಷಕ್ಕೆ ‘ಲಿಬರಲ್ಸ್’ ಪಕ್ಷವು ಬೆಂಬಲಿಸಿದ್ದರೂ ಅಲ್ಲಿನ ಕಟ್ಟರ್ ರಾಷ್ಟ್ರವಾದಿ ಹಾಗೂ ಮುಸಲ್ಮಾನವಿರೋಧಿ ಪಕ್ಷ ಸ್ವೀಡನ್ ಡೆಮೋಕ್ರಟ್ಸ್’ನ ಬೆಂಬಲವನ್ನೂ ಪಡೆಯಬೇಕಾಗುತ್ತಿದೆ.

೧. ಸಪ್ಟೆಂಬರ ೧೧ ರಂದು ಸ್ವೀಡನ್‌ನಲ್ಲಿ ನಡೆದಿರುವ ಚುನಾವಣೆಯ ಪಲಿತಾಂಶವು ಇತ್ತೀಚೆಗಷ್ಟೆ ಬಂದಿದೆ. ೮ ವರ್ಷ ಅಧಿಕಾರದಲ್ಲಿದ್ದ ಎಡಪಂಥಿಯ ವಿಚಾರ ಸರಣಿಯ ಸೋಶಲ್ ಡೆಮೊಕ್ರೆಟ್ಸ್ ಪಕ್ಷದ ಮಾಗದಾಲೆನೆ ಅಂಡರಸನ್ ಇವರು ಕೆಳಗಿಳಿಯಬೇಕಾಗಿದೆ.

೨.  ಸೋಶಲ್ ಡೆಮೋಕ್ರಟ್ಸ್’ ಇದು ಎಲ್ಲಕ್ಕಿಂತ ದೊಡ್ಡ ಪಕ್ಷವಾಗಿದ್ದರೂ ಅದಕ್ಕೆ ಬಹುಮತ ಸಿಗಲಿಲ್ಲ.

೩. ೩೪೯ ಸ್ಥಾನಗಳಿರುವ ಸ್ವೀಡಿಶ್ ಸಂಸತ್ತಿನಲ್ಲಿ ‘ಸೋಶಲ್ಡೆಮೋಕ್ರಟ್ಸ್’ನ ೧೦೭ ಸಂಸದರು ಆರಿಸಿ ಬಂದಿದ್ದಾರೆ ಹಾಗೂ ‘ಸ್ವೀಡನ್ ಡೆಮೋಕ್ರಟ್ಸ್’ನ ೭೩ ‘ಕ್ರಿಶ್ಚನ್ಮಾಡರೇಟ್ಸ್’ ಪಕ್ಷದ ೬೮ ಅಭ್ಯರ್ಥಿಗಳು ಆರಿಸಿ ಬಂದಿದ್ದಾರೆ.

೪. ಕ್ರಿಸ್ಟರ್‌ಸನ್ ಇವರಿಗೆ ‘ಸ್ವೀಡನ್ ಡೆಮೋಕ್ರಟ್ಸ್’ನ ಮುಸಲ್ಮಾನ ಶರಣಾರ್ಥಿಗಳನ್ನು ಸ್ವೀಕರಿಸುವ ವಿಷಯದಲ್ಲಿ ಕಠೋರವಾದ ಧೋರಣೆಯನ್ನು ಅವಲಂಬಿಸುವ ಜೊತೆಗೆ ಪೊಲೀಸರಿಗೆ ಹೆಚ್ಚು ಅಧಿಕಾರ ಸಿಗಬೇಕೆಂಬ ಬೇಡಿಕೆಯನ್ನು ಮನ್ನಿಸಬೇಕಾಗಿದೆ.

೫. ಸ್ವೀಡನ್ ಡೆಮೋಕ್ರಟ್ಸ್’ನ ನೇತಾರ ಜಿಮೀ ಎಕೆಸನ್ ಇವರು ಹೇಳಿದ್ದಾರೇನೆಂದರೆ, ಹೊಸ ಸರಕಾರವು ಶರಣಾರ್ಥಿಗಳ ವಿಷಯದ ಧೋರಣೆಯಲ್ಲಿ ಅಮೂಲ್ಯವಾದ ಬದಲಾವಣೆಯನ್ನು ಮಾಡಲಿಕ್ಕಿದ್ದು ಆ ಸರಕಾರವು’ ‘ತರ್ಕ’ ಮತ್ತು ‘ಸಾಮಾನ್ಯ ಜ್ಞಾನ’ದ ಆಧಾರದಲ್ಲಿ ಇರಲಿದೆ.

೬. ಸ್ವೀಡನ್‌ನಲ್ಲಿ ನಡೆದಿರುವ ಚುನಾವಣೆಯ ಪ್ರಚಾರದಲ್ಲಿ ‘ಸ್ವೀಡನ್ ಡೆಮೋಕ್ರಟ್ಸ್’ನ ಮುಸಲ್ಮಾನವಿರೋಧಿ ಶರಣಾರ್ಥಿ ಧೋರಣೆಗೆ ಮೊದಲ ಬಾರಿಗೆ ವಿಶೇಷ ಮಹತ್ವ ಪ್ರಾಪ್ತಿಯಾಗಿದೆ. ಬಂದೂಕಿನ ಮೂಲಕ ಹಿಂಸೆ ಮತ್ತು ಗುಂಡಾಗಳ ಗುಂಪುಗಳಿಂದಾಗುವ ಹಿಂಸಾಚಾರದಲ್ಲಿ ಪ್ರಚಂಡ ಹೆಚ್ಚಳವಾಗಿರುವುದರಿಂದಲೂ ‘ಸ್ವೀಡನ್ ಡೆಮೋಕ್ರಟ್ಸ್’ಗೆ ವಿಶೇಷ ಮಹತ್ವ ಪ್ರಾಪ್ತಿಯಾಗಿದೆ.