ನಿತೀಶ ಕುಮಾರ ಇವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ

  • ಬಿಹಾರದ ಯುತಿ ಸರಕಾರ

  • ತೇಜಸ್ವಿ ಯಾದವ ಉಪಮುಖ್ಯಮಂತ್ರಿ

ಪಾಟಲಿಪುತ್ರ (ಬಿಹಾರ) – ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಇವರು ಭಾಜಪ ಜೊತೆಯ ಯುತಿಯನ್ನು ಮುರಿದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಮರುದಿನ ರಾಷ್ಟ್ರೀಯ ಜನತಾದಳ ಮತ್ತು ಇತರ ಮಿತ್ರ ಪಕ್ಷಗಳ ಜೊತೆ ಸೇರಿ ಯುತಿ ಮಾಡಿಕೊಂಡರು. ನಿತೀಶ ಕುಮಾರ ಇವರು ಆಗಸ್ಟ್ ೧೦ ರಂದು ಮತ್ತೆ ಮುಖ್ಯಮಂತ್ರಿ ಸ್ಥಾನವನ್ನು ಸ್ವೀಕರಿಸಿದರು. ಈ ಸಮಯದಲ್ಲಿ ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ ಇವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಈ ಯುತಿಯಲ್ಲಿ ಒಟ್ಟು ೭ ಪಕ್ಷಗಳಿವೆ. ಯುತಿಯಲ್ಲಿ ಎಲ್ಲಾ ಪಕ್ಷದ ಒಟ್ಟು ೧೬೪ ಶಾಸಕರು ಇದ್ದೂ, ಈ ಶಾಸಕರ ಬೆಂಬಲದ ಪತ್ರವನ್ನು ಅವರು ಆಗಸ್ಟ್ ೯ ರಂದು ರಾಜ್ಯಪಾಲರಿಗೆ ಒಪ್ಪಿಸಿದ್ದರು. ಅದರ ನಂತರ ಆಗಸ್ಟ್ ೧೦ ರಂದು ರಾಜ್ಯಪಾಲರು ಅವರಿಗೆ ಪ್ರಮಾಣವಚನಕ್ಕಾಗಿ ಆಮಂತ್ರಣ ನೀಡಿದ್ದರು.