ಬಿಹಾರದಲ್ಲಿ ಅಧಿಕಾರದಲ್ಲಿರುವ ಜನತಾ ದಳ (ಸಂಯುಕ್ತ) ಮತ್ತು ಭಾಜಪದ ಮೈತ್ರಿ ಮುಕ್ತಾಯ !

ಮುಖ್ಯಮಂತ್ರಿ ನಿತೀಶ ಕುಮಾರರವರ ರಾಜಿನಾಮೆ

 

ಪಾಟಲೀಪುತ್ರ (ಬಿಹಾರ) – ಬಿಹಾರ ಸರಕಾರದಲ್ಲಿ ಅಧಿಕಾರದಲ್ಲಿರುವ ಜನತಾ ದಳ (ಸಂಯುಕ್ತ) ಹಾಗೂ ಭಾಜಪದ ನಡುವಿನ ಮೈತ್ರಿಯು ಮುಕ್ತಾಯವಾಗಿದೆ. ಈ ಬಗ್ಗೆ ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರವರು ಆಗಸ್ಟ ೯ ರಂದು ಘೋಷಿಸಿದರು. ಅವರು ರಾಜ್ಯಪಾಲರಲ್ಲಿ ತಮ್ಮ ರಾಜಿನಾಮೆಯನ್ನು ನೀಡಿದರು. ಅನಂತರ ಅವರು ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳದ ನೇತಾರರಾದ ರಾಬಡೀ ದೇವಿಯವರ ಮನೆಗೆ ಹೋಗಿ ಪಕ್ಷದ ನೇತಾರರು ಹಾಗೂ ಸಂಸದರಾದ ತೇಜಸ್ವೀ ಯಾದವರವರನ್ನು ಭೇಟಿಯಾದರು. ಈಗ ಈ ಎರಡೂ ಪಕ್ಷಗಳ ನಡುವೆ ಮೈತ್ರಿಯಾಗಿ ಸರಕಾರವನ್ನು ಸ್ಥಾಪಿಸಲಾಗುವುದು ಎಂದು ಹೇಳಲಾಗುತ್ತಿದೆ. ಇದರಲ್ಲಿ ತೇಜಸ್ವೀ ಯಾದವರವರಿಗೆ ಉಪಮುಖ್ಯಮಂತ್ರಿ ಪದವಿ ಲಭಿಸಬಹುದು.

೧. ಕಳೆದ ಕೆಲವು ದಿನಗಳಿಂದ ಭಾಜಪ ಹಾಗೂ ಜನತಾ ದಳ(ಸಂ)ದ ಮೈತ್ರಿಯು ಮುಕ್ತಾಯವಾಗುವುದಾಗಿ ಹೇಳಲಾಗುತ್ತಿತ್ತು. ನಿತೀಶ ಕುಮಾರರವರು ತಮ್ಮ ಪಕ್ಷದಲ್ಲಿನ ಎಲ್ಲ ಶಾಸಕರು ಹಾಗೂ ಸಂಸದರೊಂದಿಗೆ ಸಭೆಯನ್ನು ನಡೆಸಿದರು. ಅನಂತರ ಅವರು ಮೇಲಿನ ಘೋಷಣೆ ಮಾಡಿದರು. ನಿತೀಶ ಕುಮಾರರವರು, ಭಾಜಪವು ನಮಗೆ ಯಾವಾಗಲೂ ಅಪಮಾನ ಮಾಡಿದೆ. ಒಂದು ಷಡ್ಯಂತ್ರದ ಮೂಲಕ ಭಾಜಪವು ನಮ್ಮನ್ನು ನಾಶಗೊಳಿಸಲು ಪ್ರಯತ್ನಿಸಿತ್ತು, ಎಂದು ಹೇಳಿದರು.

೨. ಬಿಹಾರದಲ್ಲಿನ ೨೪೩ ಜಾಗಗಳಿರುವ ವಿಧಾನಸಭೆಯಲ್ಲಿ ರಾಷ್ಟ್ರೀಯ ಜನತಾ ದಳ ಪಕ್ಷವು ಎಲ್ಲಕ್ಕಿಂತ ದೊಡ್ಡದಾಗಿದ್ದು ಅದರಲ್ಲಿ ೭೯ ಸಂಸದರಿದ್ದಾರೆ. ಎರಡನೇ ಕ್ರಮಾಂಕದಲ್ಲಿ ಭಾಜಪ ಇದ್ದು ಅದರಲ್ಲಿ ೭೭ ಸಂಸದರಿದ್ದಾರೆ. ಅನಂತರ ಜನತಾದಳ (ಸಂ) ೪೫, ಕಾಂಗ್ರೆಸ್‌ ೧೯, ಸಾಮ್ಯವಾದಿ ಪಕ್ಷಗಳ ೧೨ ಸಂಸದರು ವಿಧಾನಸಭೆಯಲ್ಲಿದ್ದಾರೆ. ಸರಕಾರವನ್ನು ರಚಿಸಲು ಒಟ್ಟೂ ೧೨೨ ಜಾಗಗಳು ಆವಶ್ಯಕವಾಗಿವೆ.