‘ಭಾರತ ರಾಷ್ಟ್ರ ಸಮಿತಿ’ ಪಕ್ಷದ ಫಲಕದ ಮೇಲಿನ ಭಾರತದ ನಕ್ಷೆಯಲ್ಲಿ, ಜಮ್ಮು-ಕಾಶ್ಮೀರದ ಭಾಗವನ್ನು ಬೇರ್ಪಡಿಸಲಾಯಿತು !

ಇಂತಹ ಪಕ್ಷವನ್ನು ನಿಷೇಧಿಸಬೇಕು!

ಭಾಗ್ಯನಗರ (ತೆಲಂಗಾಣ) – ತೆಲಂಗಾಣದ ನಿಜಾಮಾಬಾದ್‌ನ ಭಾಜಪದ ಸಂಸದ ಅರವಿಂದ ಧರ್ಮಪುರಿ ಅವರು ‘ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ‘ಭಾರತ ರಾಷ್ಟ್ರ ಸಮಿತಿ’ ಈ ಹೊಸ ರಾಷ್ಟ್ರೀಯ ಪಕ್ಷದ ಫಲಕದ ಮೇಲಿನ ಭಾರತದ ನಕ್ಷೆಯಲ್ಲಿ ಕಾಶ್ಮೀರವನ್ನು ಬೇರ್ಪಡಿಸಲಾಗಿದೆ ಎಂದು ತೋರಿಸಲಾಗಿದೆ’, ಎಂದು ಆರೋಪಿಸಿದ್ದಾರೆ.

ಸಂಸದ ಅರವಿಂದ ಧರ್ಮಪುರಿ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, “ಭಾರತೀಯ ಸಂವಿಧಾನದ ೧ ನೇ ವಿಧಿಯ ಪ್ರಕಾರ, ಜಮ್ಮು-ಕಾಶ್ಮೀರವು ಭಾರತದ ಒಂದು ಭಾಗವಾಗಿದೆ; ಆದರೆ ಈ ಫಲಕದ ಮೇಲೆ ಕಾಶ್ಮೀರದ ಅರ್ಧದಷ್ಟು ಭಾಗವನ್ನು ಬೇರ್ಪಡಿಸಲಾಗಿದೆ. ಇದರಿಂದ ಪಾಕಿಸ್ತಾನವನ್ನು ಬೆಂಬಲಿಸಲಾಗುತ್ತಿದೆ. ಭಾರತ ರಾಷ್ಟ್ರ ಸಮಿತಿಯು ನಿಜಾಮನನ್ನು ಅನುಸರಿಸುತ್ತಿದೆ. ಈ ನಿಜಾಮನು ಆಗಿನ ಭಾಗ್ಯನಗರ ಸಂಸ್ಥಾನವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸಲು ಪ್ರಯತ್ನಿಸುವವನಿದ್ದನು. ಈಗ ಚಂದ್ರಶೇಖರ ರಾವ್ ಅವರು ಇದೇ ಉದ್ದೇಶದಿಂದ ರಾಷ್ಟ್ರೀಯ ಪಕ್ಷವನ್ನು ಘೋಷಿಸಿದ್ದಾರೆಯೇ ?” ಎಂದು ಪ್ರಶ್ನಿಸಿದ್ದಾರೆ.