ಕಾಂಗ್ರೆಸ್‌ನ ಕಾಲಾವಧಿಯಲ್ಲಿ ಶೇ. ೬೦ ರಷ್ಟು ಮತ್ತು ಭಾಜಪದ ಕಾಲಾವಧಿಯಲ್ಲಿ ಶೇ. ೯೫ ರಷ್ಟು ಮುಖಂಡರ ತನಿಖೆ !

ನವದೆಹಲಿ : ಕಳೆದ ೧೮ ವರ್ಷಗಳಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಭಾಜಪ ಸರಕಾರಗಳ ಕಾಲಾವಧಿಯಲ್ಲಿ ಸುಮಾರು ೨೦೦ ಮುಖಂಡರ ವಿರುದ್ಧ ಸಿಬಿಐಯು ಅಪರಾಧಗಳನ್ನು ದಾಖಲಿಸಿದೆ, ದಾಳಿ ಮಾಡಿದೆ, ಅವರಿಗೆ ಬಂಧಿಸಿದೆ ಅಥವಾ ವಿಚಾರಣೆ ನಡೆಸಿದೆ. ಇವರಲ್ಲಿ ಶೇ. ೮೦ ರಷ್ಟು ಮುಖಂಡರ ವಿರೋಧಿ ಪಕ್ಷದವರಾಗಿದ್ದರು. ಕಾಂಗ್ರೆಸ್‌ನ ಆಡಳಿತಾವಧಿಯಲ್ಲಿ ಶೇ. ೬೦ ರಷ್ಟು ಮತ್ತು ೨೦೧೪ ರಲ್ಲಿ ಭಾಜಪ ನೇತೃತ್ವದ ಸರಕಾರದ ಕಾಲಾವಧಿಯಲ್ಲಿ ವಿರೋಧಿ ಪಕ್ಷಗಳ ಶೇ. ೯೫ ರಷ್ಟು ಜನರನ್ನು ತನಿಖಾ ದಳದಿಂದ ಕ್ರಮ ಕೈಗೊಳ್ಳಲಾಗಿದೆ.

ಕಾಂಗ್ರೆಸ್ ಸರಕಾರದ ೧೦ ವರ್ಷಗಳಲ್ಲಿ (೨೦೦೪ ರಿಂದ ೨೦೧೪) ೭೨ ನಾಯಕರನ್ನು ಸಿಬಿಐ ತನಿಖೆ ನಡೆಸಿತ್ತು ಮತ್ತು ಅವರಲ್ಲಿ ೪೩ (ಶೇ. ೬೦) ವಿರೋಧ ಪಕ್ಷದವರಾಗಿದ್ದರೇ, ಭಾಜಪ ಸರಕಾರದ ಕಳೆದ ಎಂಟು ವರ್ಷಗಳಲ್ಲಿ ೧೨೪ ಪ್ರಮುಖ ನಾಯಕರನ್ನು ಸಿಬಿಐ ತನಿಖೆಯನ್ನು ಎದುರಿಸಬೇಕಾಯಿತು. ಇವರಲ್ಲಿ ೧೧೮ ಮಂದಿ ವಿರೋಧಿ ಪಕ್ಷಗಳ ನಾಯಕರಾಗಿದ್ದು, ಅಂದರೆ ವಿರೋಧ ಪಕ್ಷಗಳ ಶೇ. ೯೫ ರಷ್ಟು ನಾಯಕರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದೆ. ವಿಶೇಷವೆಂದರೆ, ಎರಡೂ ಸರಕಾರಗಳ ಕಾಲಾವಧಿಯಲ್ಲಿ ಸಂಬಂಧಪಟ್ಟ ನಾಯಕರು ಪಕ್ಷವನ್ನು ಬದಲಾಯಿಸಿದನಂತರ ಕಾರ್ಯಾಚರಣೆ ತಣ್ಣಗಾಗಿರುವುದು ಕಂಡು ಬಂದಿತು.