ರಾಜಕೀಯ ಪಕ್ಷಗಳ ದೇಣಿಗೆಯನ್ನು ಮಿತಿಗೊಳಿಸುವ ಪ್ರಯತ್ನ
ನವದೆಹಲಿ : ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ಅವರು ಕೇಂದ್ರ ಕಾನೂನು ಸಚಿವ ಕಿರಣ ರಿಜಿಜು ಅವರಿಗೆ ಪತ್ರ ಬರೆದು, ಜನಪ್ರತಿನಿಧಿ ಕಾನೂನಿನಲ್ಲಿ ಹಲವಾರು ತಿದ್ದುಪಡಿಗಳನ್ನು ಶಿಫಾರಸು ಮಾಡಿದ್ದಾರೆ. ‘ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆಗೆ ಗರಿಷ್ಠ ಮಿತಿಯನ್ನು ಶೇಕಡಾ ೨೦ ಅಥವಾ ೨೦ ಕೋಟಿ ರೂಪಾಯಿಗಳಿಗಿಂತ ಯಾವುದು ಕಡಿಮೆ ಇರಲಿದೆ ಅದನ್ನು ನಿಗದಿಪಡಿಸಬೇಕು’, ಎಂದು ಅದರಲ್ಲಿ ಹೇಳಿದೆ. ಚುನಾವಣೆಗಳಲ್ಲಿ ಕಪ್ಪುಹಣ ಹರಡುವುದನ್ನು ತಡೆಯಲು ಬೇನಾಮಿ ನಗದು ದೇಣಿಗೆಯ ಮಿತಿಯನ್ನು ೨೦ ಸಾವಿರ ರೂಪಾಯಿಗಳಿಂದ ೨ ಸಾವಿರ ರೂಪಾಯಿಗಳಿಗೆ ಇಳಿಸಲು ಶಿಫಾರಸು ಮಾಡಿದೆ. ಚುನಾವಣಾ ಆಯೋಗದ ಪ್ರಸ್ತುತ ನಿಯಮಗಳ ಪ್ರಕಾರ ದೇಶದ ಎಲ್ಲಾ ರಾಜಕೀಯ ಪಕ್ಷಗಳು ೨೦ ಸಾವಿರ ರೂಪಾಯಿಗಿಂತ ಹೆಚ್ಚಿನ ಎಲ್ಲಾ ದೇಣಿಗೆಗಳನ್ನು ಘೋಷಿಸಬೇಕು. ‘ಚುನಾವಣಾ ಅವಧಿಯಲ್ಲಿ ಅಭ್ಯರ್ಥಿಗಳು ಚುನಾವಣೆಗೆ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಬೇಕು, ಎಂದು ಪತ್ರದಲ್ಲಿ ತಿಳಿಸಲಾಗಿದೆ.
निर्वाचन आयोग ने राजनीतिक दलों को नकद चंदे की सीमा तय करने की अनुशंसा कीhttps://t.co/Tth86A2so3
— रिपब्लिक भारत (@Republic_Bharat) September 20, 2022
ಸಂಪಾದಕೀಯ ನಿಲುವುದೇಣಿಗೆಗಳ ಮೇಲೆ ಅಧಿಕೃತವಾಗಿ ಎಷ್ಟೇ ಮಿತಿಯನ್ನು ವಿಧಿಸಲಾಗಿದ್ದರೂ, ‘ಚುನಾವಣೆಯಲ್ಲಿ ಕಪ್ಪುಹಣವನ್ನು ಹೇಗೆ ಬಳಸಲಾಗುತ್ತದೆ’, ಎಂಬುದು ಹೆಚ್ಚಿನ ನಾಗರಿಕರಿಗೆ ತಿಳಿದಿದೆ. ಇದು ಚುನಾವಣಾ ಆಯೋಗಕ್ಕೆ ಮಾತ್ರ ಎಂದಿಗೂ ಯಾಕೆ ಕಾಣಿಸುವುದಿಲ್ಲ ? |