ನವ ದೆಹಲಿ – ಒಂದು ವೇಳೆ ನಾನು ಜನರನ್ನು ಸಿಂಗಾಪೂರಕ್ಕೆ ಕರೆದುಕೊಂಡು ಹೋಗುವುದಾಗಿ ಘೋಷಿಸಿದರೆ, ನನ್ನನ್ನು ಯಾರು ತಡೆಯಬಲ್ಲರು ? ಹಾಗೆಯೇ ಘೋಷಣೆಗಳನ್ನು ಚುನಾವಣೆಯಲ್ಲಿ ಮಾಡಲಾಗುತ್ತದೆ. ಚುನಾವಣಾ ಆಯೋಗ ಜನತೆಗೆ ಆಶ್ವಾಸನೆ ನೀಡುವ ರಾಜಕೀಯ ಪಕ್ಷಗಳನ್ನು ಹೇಗೆ ತಡೆಯಬಹುದು ?, ಎಂದು ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸಿತು. ಚುನಾವಣೆಯ ಸಮಯದಲ್ಲಿ ಜನತೆಗೆ ಉಚಿತವಾಗಿ ನೀಡುವ ವಿಷಯಗಳ ವಿರುದ್ಧ ದಾಖಲಿಸಲಾಗಿರುವ ದೂರಿನ ಆಲಿಕೆಯ ಸಂದರ್ಭದಲ್ಲಿ ನ್ಯಾಯಾಲಯವು ಮೇಲಿನಂತೆ ಪ್ರಶ್ನಿಸಿತು. ಈ ಬಗ್ಗೆ ನಾಳೆ ಆಲಿಕೆ ನಡೆಯಲಿದೆ.
‘रेवड़ी कल्चर’ दायर याचिकाओं पर सुनवाई करते हुए सुप्रीम कोर्ट ने मंगलवार को कहा कि मुफ्त योजनाएं एक अहम मुद्दा हैं और इस पर बहस की जरूरत है.#SupremeCourt #Freebies @SinghArvind03 https://t.co/6KCVUcfnlP
— Zee News (@ZeeNews) August 23, 2022
ಮುಖ್ಯನ್ಯಾಯಮೂರ್ತಿ ಎನ್. ವಿ. ರಮಣಾ ಇವರು,
೧. ‘ರೇವಡಿ ಕಲ್ಚರ’ ಮೇಲೆ (ಎಲ್ಲವನ್ನೂ ಉಚಿತವಾಗಿ ನೀಡುವ ಸಂಸ್ಕೃತಿಯ ಮೇಲೆ) ಎಲ್ಲ ಪಕ್ಷಗಳೂ ಅಂದರೆ ಭಾಜಪ ಮತ್ತು ಇತರೆ ಪಕ್ಷಗಳ ಅಭಿಪ್ರಾಯ ಒಂದೇ ಆಗಿದೆ. ಎಲ್ಲರೂ ಉಚಿತವಾಗಿ ನೀಡುವ ವಿಷಯಗಳ ಘೋಷಣೆಯ ಪರವಾಗಿ ಇದೆ. ಈ ವಿಷಯಗಳ ಅಂಶಗಳನ್ನು ಸಮಾಜ ಮತ್ತು ಅರ್ಥವ್ಯವಸ್ಥೆಯ ಅಭಿವೃದ್ಧಿಗಾಗಿ ಎತ್ತಲಾಗಿದೆ.
೨. ನಾಳೆ ಯಾವುದಾದರೂ ರಾಜ್ಯವು ವಿಶಿಷ್ಟ ಯೋಜನೆಯನ್ನು ಘೋಷಿಸಿದರೆ, ಅದರ ಲಾಭವು ನಮಗೆಲ್ಲರಿಗೂ ಸಿಗುತ್ತದೆ. ಆದ್ದರಿಂದ ಸರಕಾರದ ಈ ವಿಶೇಷಾಧಿಕಾರವಿದೆ ಮತ್ತು ನ್ಯಾಯಾಲಯ ಅದರಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲವೆಂದು ನಾವು ಹೇಗೆ ಹೇಳಬಲ್ಲೆವು ? ಈ ಪ್ರಕರಣದಲ್ಲಿ ಯುಕ್ತಿವಾದ ಆವಶ್ಯಕವಿದೆ. ‘ರಾಜ್ಯಗಳಿಗೆ ಉಚಿತ ವಿಷಯಗಳನ್ನು ನೀಡುವ ಘೋಷಣೆ ಮಾಡಲು ಸಾಧ್ಯವಿಲ್ಲ’, ಎನ್ನುವ ಸಂಬಂಧದಲ್ಲಿ ಕೇಂದ್ರವು ಕಾನೂನು ಮಾಡಿದರೆ ಏನಾಗವುದು ? ಎನ್ನುವ ವಿಚಾರ ಮಾಡಿ.
೩. ನಾವು ಸಮಾಜ ಮತ್ತು ಅರ್ಥವ್ಯವಸ್ಥೆಯ ಕಲ್ಯಾಣವಾಗಬೇಕು ಎನ್ನುವ ಅಂಶಗಳ ಮೇಲೆ ಆಲಿಕೆ ಮಾಡುತ್ತಿದ್ದೇವೆ. ನಾವು ಮತ್ತೇನನ್ನೂ ಮಾಡುತ್ತಿಲ್ಲ. ಸಾಲಿಸಿಟರ ಜನರಲ್ ಇವರು ಒಂದು ಸಮಿತಿಯನ್ನು ಸ್ಥಾಪನೆ ಮಾಡುವ ಪ್ರಸ್ತಾವನೆಯನ್ನು ನೀಡಿದ್ದಾರೆ. ‘ಈಗ ಈ ಸಮಿತಿಯ ನೇತೃತ್ವವನ್ನು ಯಾರು ಮಾಡುವರು ?’, ಎನ್ನುವುದನ್ನು ನೋಡಬೇಕಾಗಿದೆ.
೪. ನೀಮ್ಮೆಲ್ಲರ ಚುನಾವಣೆಯ ಘೋಷಣಾ ಪತ್ರವನ್ನು ನಿಯಂತ್ರಿಸಲು ಮತ್ತು ಇಂತಹ ಘೋಷಣೆಯಗಳನ್ನು ನಿರ್ಬಂಧಿಸುವ ಇಚ್ಛೆಯಿದೆಯೇ ? ಇಂತಹ ಘೋಷಣೆ ಚುನಾವಣೆಯ ಸಂದರ್ಭದಲ್ಲಿ ಆಗುತ್ತದೆ. ಚುನಾವಣೆ ಆಯೋಗ ಪಕ್ಷಗಳಿಗೆ ಇಂತಹ ಘೋಷಣೆ ಕೊಡುವುದರಿಂದ ಹೇಗೆ ತಡೆಯಬಹುದು ? ಎಂದು ಹೇಳಿದರು.