ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಡ್ರೋನ್‍ಗಳನ್ನು ಉರುಳಿಸಿದ ಭಾರತೀಯ ಸೇನೆ : ೫ ಕೆಜಿ ಸ್ಫೋಟಕ ಸ್ವಾಧೀನ !

ಜಿಹಾದಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅವರು ಅಖನೂರ ಬಳಿ ಡ್ರೋನ್‍ನಿಂದ ದಾಳಿ ನಡೆಸಲು ಸಂಚು ಮಾಡಿದೆ ಎಂಬ ಮಾಹಿತಿ ಸಿಕ್ಕಿದ ನಂತರ ಸೈನ್ಯವು ವ್ಯೂಹವನ್ನು ರಚಿಸಿತು. ಅದರಂತೆ ಮಧ್ಯರಾತ್ರಿ ೧ ಗಂಟೆಗೆ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ.

ಮುರಾದಾಬಾದ್ (ಉತ್ತರಪ್ರದೇಶ)ನಲ್ಲಿ ಪರಾರಿಯಾಗಿದ್ದ ಆರೋಪಿಯು ಚುನಾವಣೆಯಲ್ಲಿ ಸ್ಪರ್ಧಿಸಿ, ಆಯ್ಕೆಯಾಗಿ ಗ್ರಾಮದ ಸರಪಂಚನೂ ಆದ !

ನಾವು ಯಾರನ್ನು ಆರಿಸುತ್ತೇವೆ, ಆತನ ಅಪರಾಧಿ ಹಿನ್ನೆಲೆಯನ್ನು ನೋಡದಿರುವ ಜನರು. ಇದರಿಂದ ಜನರು ನಿದ್ರಾವಸ್ಥೆಯಲ್ಲಿದ್ದಾರೆ ಎಂಬುದು ಕಂಡು ಬರುತ್ತದೆ. ಇಂತಹವರಿಗೆ ನಂತರ ಅಪರಾಧಿಗಳು ತೊಂದರೆ ನೀಡುತ್ತಾರೆ. ಇದರಲ್ಲಿ ಆಶ್ಚರ್ಯವೇನಿಲ್ಲ ?

ಕಾಸಗಂಜ್ (ಉತ್ತರ ಪ್ರದೇಶ) ದಲ್ಲಿ ಹಿಂದೂಗಳನ್ನು ಮತಾಂತರಿಸಲು ಯತ್ನಿಸಿದ ೬ ಕ್ರೈಸ್ತರ ಬಂಧನ

ಕಾಸಗಂಜ ಜಿಲ್ಲೆಯ ಗಂಗಪುರದ ಹಿಂದೂ ಪ್ರದೇಶದಲ್ಲಿ ಕ್ರೈಸ್ತ ಧರ್ಮದ ಪ್ರಸಾರ ಮಾಡುತ್ತಿರುವವರ ವಿರುದ್ಧ ಹಿಂದೂ ಜಾಗರಣ ವೇದಿಕೆಯಿಂದ ದೂರು ನೀಡಿದ ನಂತರ ಆರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಂಗಾಲ ಹಿಂಸಾಚಾರದ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು ನೀಡಿದ ಸಮಾಧಾನಕರ ತೀರ್ಪು !

ಭಯಂಕರ ಪ್ರಮಾಣದಲ್ಲಿ ಹಿಂಸಾಚಾರವಾಗುತ್ತಿರುವಾಗ ಅದನ್ನು ತಡೆಯಲು ಪೊಲೀಸರು ಅಥವಾ ಆಡಳಿತ ಪಕ್ಷದವರು ಯಾವುದೇ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಿಲ್ಲ. ನೊಂದವರ ದೂರನ್ನು ಕೂಡ ದಾಖಲಿಸಿಕೊಳ್ಳಲಿಲ್ಲ.

‘ರಾತ್ರಿ ೯ ಗಂಟೆಯ ನಂತರ ಹೊರಬರುವ ಮಹಿಳೆಯರು ವೇಶ್ಯೆರಾಗಿದ್ದಾರೆ ಹಾಗಾಗಿ ಅವರನ್ನು ಕೊಲ್ಲಬೇಕು !'(ಅಂತೆ) – ಕೇರಳದ ‘ಇಸ್ಲಾಮಿಕ್ ವಿದ್ವಾಂಸರ’ ಫತ್ವಾ

ಇಂತಹ ಸಮಾಜ ವಿರೋಧಿ ಮತ್ತು ಹಿಂಸಾತ್ಮಕ ಹೇಳಿಕೆಗಳನ್ನು ನೀಡುವವರ ವಿರುದ್ಧ ಪೊಲೀಸರು ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ? ಅವರ ಮೇಲಧಿಕಾರಿಗಳು ಸಹ ಅಂತಹ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು !

ಪಾಕಿಸ್ತಾನಕ್ಕಾಗಿ ಬೇಹುಗರಿಕೆ ಮಾಡುತ್ತಿದ್ದ ಪೊಲೀಸ್ ಪೇದೆಯ ಬಂಧನ

ಸೈನ್ಯದಿಂದ ನಿವೃತ್ತನಾದ ನಂತರ ಪೊಲೀಸ್ ದಳದಲ್ಲಿ ಭರ್ತಿಯಾದ ಸುರೇಂದ್ರ ಎಂಬ ಪೊಲೀಸ್ ಪೇದೆಯನ್ನು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಆತ ಪಲವಲನಲ್ಲಿ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ನೇಮಕಗೊಂಡಿದ್ದ.

ಗಾಂಜಾ ಮಾಫಿಯಾರಿಂದ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್‍ನಿಂದ ದಾಳಿ : ಓರ್ವ ಪೊಲೀಸ್ ಅಧಿಕಾರಿ ಗಾಯಾಳು

ಕುಟ್ಟಿಚಾಲದ ಬಳಿಯ ನೆಲ್ಲಿಕ್ಕುನ್ನುನಲ್ಲಿ ಗಾಂಜಾ ಮಾಫಿಯಾದಿಂದ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್‍ನಿಂದ ದಾಳಿ ಮಾಡಲಾಯಿತು. ಇದರಲ್ಲಿ ಟಿನೊ ಜೊಸೇಫ್ ಹೆಸರಿನ ಓರ್ವ ಪೊಲೀಸ ಅಧಿಕಾರಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಜಿಯಾಬಾದ್(ಉತ್ತರಪ್ರದೇಶ)ನಲ್ಲಿ ನಡೆದ ಬಿಜೆಪಿಯ ಸಭೆಯಲ್ಲಿ ೨ ನಾಯಕರ ಹೊಡೆದಾಟ !

ಜನಾಂಗೀಯ ಅವಹೇಳನ ಮಾಡಿದರೆಂದು ಬಿಜೆಪಿಯ ಕಾರ್ಯಕಾರಣಿ ಸಭೆಯಲ್ಲಿ ೨ ನಾಯಕರ ನಡುವೆ ಜೋರಾಗಿ ಹೊಡೆದಾಟ ನಡೆಯಿತು. ಅವರು ಪರಸ್ಪರರಿಗೆ ಕಾಲುಗಳಿಂದ ಒದ್ದರು. ಈ ಪ್ರಕರಣದಲ್ಲಿ ಓರ್ವ ಕಾರ್ಯಕರ್ತನ ಮೇಲೆಯೂ ಹಲ್ಲೆ ಮಾಡಿದ್ದರಿಂದ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಕನ್ಯಾಕುಮಾರಿ (ತಮಿಳನಾಡು)ಯ ಚರ್ಚ್‍ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಬಹಿರಂಗ !

ತಮಿಳುನಾಡಿನ ಪೊಲೀಸರು ಕನ್ಯಾಕುಮಾರಿ ಜಿಲ್ಲೆಯ ಜ್ಯೋತಿನಗರದಲ್ಲಿನ ‘ಡ್ಯೂಸಿಸ್ ಆಫ್ ಕ್ರೈಸ್ಟ ಆಂಗ್ಲಿಕನ ಚರ್ಚ್ ಆಫ್ ಇಂಡಿಯಾ’ಗೆ ಸಂಬಂಧಿಸಿದ ‘ಫೆಡರಲ ಚರ್ಚ್ ಆಫ್ ಇಂಡಿಯಾ’ದ ಮೇಲೆ ದಾಳಿ ನಡೆಸಿದರು. ಇಲ್ಲಿ ಚರ್ಚ್‍ನ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಬಹಿರಂಗಗೊಂಡಿದೆ.

‘ರಾಜ್ಯದಲ್ಲಿ ನಮ್ಮ ಸರಕಾರವು ಬಂದನಂತರ ಪೊಲೀಸರಿಗೆ ಮತ್ತು ಆಡಳಿತಾಧಿಕಾರಿಗಳಿಗೆ ಮೂತ್ರ ಕುಡಿಸುವೆವು !’(ಅಂತೆ)

ಇಲ್ಲಿಯ ಸಮಾಜವಾದಿ ಪಕ್ಷದ ಮಾಜಿ ಶಾಸಕ ವಿಜಯಪಾಲ ಸಿಂಗ್ ಇವರ ಪತ್ನಿಯು ಸ್ಥಳಿಯ ಚುನಾವಣೆಯಲ್ಲಿ ಸೋತರು. ತದನಂತರ ಸಿಂಗ್‌ರು ಆಡಳಿತಾಧಿಕಾರಿ ಮತ್ತು ಪೊಲೀಸರನ್ನು ಉದ್ದೇಶಿಸಿ, ‘ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಸರಕಾರ ಬಂದರೆ ನಿಮಗೆ ಮೂತ್ರ ಕುಡಿಸಲಾಗುವುದು’, ಎಂದು ಬೆದರಿಕೆಯನ್ನು ನೀಡಿದರು.