ಬೆಳಗಾವಿಯಲ್ಲಿ ಮತಾಂಧನ ಒಮ್ಮುಖ ಪ್ರೀತಿಯಿಂದ ಅಪ್ರಾಪ್ತ ಹಿಂದೂ ಬಾಲಕಿಯ ಬರ್ಬರ ಹತ್ಯೆ !

ಇಂತಹವರ ಮೇಲೆ ರಾಜ್ಯದ ಬಿಜೆಪಿ ಸರಕಾರವು ಶೀಘ್ರನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಅವರನ್ನು ಗಲ್ಲಿಗೇರಿಸಲು ಪ್ರಯತ್ನಿಸಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ !

ಅಮೀರ್ ಜಮಾದಾರ್

ಬೆಳಗಾವಿ – ಇಲ್ಲಿನ ಹಾರುಗೇರಿ ಗ್ರಾಮದ ತೆರೆದಾಳ-ಹಾರುಗೇರಿ ರಸ್ತೆಯಲ್ಲಿ ಅಮೀರ್ ಜಮಾದಾರ್ ಎಂಬ 20 ವರ್ಷದ ಯುವಕನು ಅಪ್ರಾಪ್ತ ಹಿಂದೂ ಬಾಲಕಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಅಮೀರನು ಈ ಯುವತಿಯನ್ನು ಒಮ್ಮುಖವಾಗಿ ಪ್ರೀತಿಸುತ್ತಿದ್ದ. ಪೊಲೀಸರು ಅಮೀರನನ್ನು ಬಂಧಿಸಿ ಆತನ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ. ವಿಶ್ವ ಹಿಂದೂ ಪರಿಷತ್ತು, ರಾ.ಸ್ವ.ಸಂ, ಬಜರಂಗದಳ, ಶ್ರೀರಾಮ ಸೇನೆ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳು ಬಾಲಕಿಯ ಮನೆಯಿಂದ ಪೊಲೀಸ್ ಠಾಣೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವಂತೆ ಒತ್ತಾಯಿಸಿ ಪೊಲೀಸರಿಗೆ ಮನವಿಯನ್ನು ನೀಡಿದರು. ವಿಶ್ವ ಹಿಂದೂ ಪರಿಷತ್ತಿನ ನೇತಾರ ವಿಠ್ಠಲ ಮಾಳಿಯವರು ಮಾತನಾಡಿ, ಆರೋಪಿಗೆ ಗಲ್ಲು ಶಿಕ್ಷೆಯಾಗುವವರೆಗೂ ಆಂದೋಲನ ಮುಂದುವರಿಯಲಿದೆ ಎಂದು ಹೇಳಿದ್ದಾರೆ.