ವಾರಣಾಸಿಯಲ್ಲಿ ಮತಾಂಧ ಪ್ರೇಮಿಯಿಂದ ಹಿಂದೂ ಹುಡುಗಿಯ ತಂದೆಯ ಕೊಲೆ !

‘ಲವ್ ಜಿಹಾದ್’ನ ಆಘಾತಕಾರಿ ಪ್ರಕರಣ

ಮದುವೆಗೆ ವಿರೋಧಿಸಿದ್ದರಿಂದ ಯುವತಿಯ ಸಹಾಯದಿಂದ ಮಾಡಿದ ಕೃತ್ಯ !

* ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸುವುದು, ಇಷ್ಟಕ್ಕೆ ಯೋಗಿ ಸರಕಾರವು ಸಮಾಧಾನಗೊಳ್ಳದೇ ಅದರೊಂದಿಗೆ ಹಿಂದೂ ಯುವಕ-ಯುವತಿಯರಲ್ಲಿ ಧರ್ಮಾಭಿಮಾನ ನಿರ್ಮಿಸುವ ಸಲುವಾಗಿ ಅವರಿಗೆ ಧರ್ಮಶಿಕ್ಷಣವನ್ನು ನೀಡುವ ವ್ಯವಸ್ಥೆ ಮಾಡಬೇಕು, ಎಂದು ಧರ್ಮಾಭಿಮಾನಿ ಹಿಂದುಗಳಿಗೆ ಅನಿಸುತ್ತದೆ !

* ವಾಸ್ತವವಾಗಿ, ಕೇಂದ್ರ ಸರಕಾರವೇ ಇಂತಹ ಗಂಭೀರ ಘಟನೆಗಳನ್ನು ದಾಖಲಿಸಿ ಪರಿಸ್ಥಿತಿಯು ಕೈ ಮೀರುವ ಮುನ್ನ ರಾಷ್ಟ್ರೀಯ ಮಟ್ಟದಲ್ಲಿ ‘ಲವ್ ಜಿಹಾದ್’ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಬೇಕು, ಜೊತೆಗೆ ಹಿಂದೂಗಳಿಗೆ ಧರ್ಮದ ಶಿಕ್ಷಣವನ್ನು ಕಲಿಸುವ ವ್ಯವಸ್ಥೆ ಮಾಡುವ ಅವಶ್ಯಕತೆಯಿದೆ.

* ಮತಾಂಧರು ಹಿಂದೂ ಹುಡುಗಿಯನ್ನು ಮದುವೆಯಾಗಲು ಯಾವುದೇ ಹಂತಕ್ಕೆ ಹೋಗಬಹುದು; ಇಂತಹ ಅನೇಕ ಉದಾಹರಣೆಗಳು ಪ್ರತಿದಿನ ಬೆಳಕಿಗೆ ಬರುತ್ತಿದೆ. ಇಂದಿಗೂ ಕೆಲವು ಹಿಂದೂಗಳು ಸರ್ವಧರ್ಮ ಸಮಭಾವದ ಆತ್ಮಘಾತಕ ಸಾಮರಸ್ಯದ ಬಲೆಯಿಂದ ಹೊರಬರಲು ಸಿದ್ಧರಿಲ್ಲದಿರುವುದು ದುರದೃಷ್ಟಕರವಾಗಿದೆ !

ವಾರಣಾಸಿ (ಉತ್ತರಪ್ರದೇಶ) – ಮತಾಂಧ ಯುವಕನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಹುಡುಗಿಯು ತನ್ನ ಸ್ವಂತ ತಂದೆಯ ಕೊಲೆಗೆ ಸಹಾಯ ಮಾಡಿದ ಆಘಾತಕಾರಿ ಘಟನೆಯು ವಾರಣಾಸಿಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಯುವತಿ, ಆಕೆಯ ಗೆಳೆಯ ಜಾವೇದ ಅಹ್ಮದ ಮತ್ತು ಆತನ ಸ್ನೇಹಿತ ಅಕೀಬ್ ಅನ್ಸಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಬಂದೂಕು, ಮೋಟಾರ್ ಸೈಕಲ್ ಮತ್ತು ಮೊಬೈಲ್‍ಅನ್ನು ವಶಪಡಿಸಿಕೊಳ್ಳಲಾಗಿದೆ.

1. ಮಿರ್ಜಾಮುರದ್ ಪೊಲೀಸ್ ಠಾಣೆ ವ್ಯಾಪ್ತಿಯ ತಮಾಚಾಬಾದನ ಕಿರಾಣಿ ವ್ಯಾಪಾರಿ ರಾಜೇಶ ಜೈಸ್ವಾಲರಿಗೆ (ವಯಸ್ಸು 46) ತಮ್ಮ ಮಗಳು ಅದೇ ಊರಿನ ಜಾವೇದ್ ಅಹ್ಮದ್ ಜೊತೆ ಪ್ರೇಮ ಸಂಬಂಧ ಹೊಂದಿರುವುದು ಗಮನಕ್ಕೆ ಬಂದಿತ್ತು. ಒಂದು ವರ್ಷದ ಹಿಂದೆ, ಇಬ್ಬರೂ ಮದುವೆ ಮಾಡಿಸುವಂತೆ ಜೈಸ್ವಾಲರ ಮೇಲೆ ಒತ್ತಡ ಹೇರಿದ್ದರು. ಮದುವೆ ಮಾಡಿಸಿಕೊಡಲು ಜೈಸ್ವಾಲರು ಸಿದ್ಧರಿರಲಿಲ್ಲ. ಆದ್ದರಿಂದ ಆತನ ಮಗಳು, ಪ್ರಿಯಕರ ಜಾವೇದ್ ಮತ್ತು ಅವನ ಸ್ನೇಹಿತ ಅಕೀಬ್ ಇವರು ಸೇರಿ ಜೈಸ್ವಾಲ್ ಅವರನ್ನು ಮಾರ್ಗದಿಂದ ದೂರ ಸರಿಸಲು ಸಂಚು ರೂಪಿಸಿದರು.

2. ಜುಲೈ 29 ರಂದು ಜೈಸ್ವಾಲ್‍ರು ತನ್ನ ಅತ್ತೆಗಾಗಿ ಊಟದ ಡಬ್ಬವನ್ನು ತೆಗೆದುಕೊಂಡು ಆಸ್ಪತ್ರೆಗೆ ತೆರಳುತ್ತಿದ್ದರು. ಈ ಬಗ್ಗೆ ಆತನ ಮಗಳೇ ಆರೋಪಿಗೆ ಮಾಹಿತಿ ನೀಡಿದ್ದಾಳೆ. ನಂತರ ಆರೋಪಿ ಜಾವೇದ ಮತ್ತು ಆತನ ಸ್ನೇಹಿತ ಅಕೀಬರು ಬೆಂಬೆತ್ತಿದರು. ರೊಹಾನಿಯಾದ ಕರನಾಡಾಡಿ ಹೆದ್ದಾರಿಯಲ್ಲಿರುವ ಫ್ಲೈಓವರ್ ಹತ್ತಿರ ಬರುತ್ತಿದ್ದಂತೆ, ಆರೋಪಿಗಳು ಆತನ ಮೇಲೆ ಗುಂಡು ಹಾರಿಸಿದರು. ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಬಗ್ಗೆ ಪೊಲೀಸರು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

3. ಈ ಹಿಂದೆ, ಆಸ್ತಿ ವಿವಾದದಿಂದ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದ್ದರಿಂದ ಅವರು ಮೃತನ ಸಹೋದರ ಮತ್ತು ಇಬ್ಬರು ಸೋದರಳಿಯರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪೊಲೀಸರು ಈ ವಿಚಾರವನ್ನು ಆಳವಾಗಿ ಪರಿಶೀಲಿಸಿದರು. ಆ ಸಮಯದಲ್ಲಿ, ಅವರು ಕೊಲೆಯ ಹಿಂದಿನ ನೈಜ ಸೂತ್ರಧಾರರನ್ನು ತಲುಪಲು ಸಾಧ್ಯವಾಯಿತು ಮತ್ತು ಅಲ್ಲಿಂದ ಪೊಲೀಸರು ಜೈಸ್ವಾಲ್ ಮಗಳು, ಆಕೆಯ ಮತಾಂಧ ಪ್ರಿಯಕರ ಜಾವೇದ್ ಮತ್ತು ಆತನ ಸ್ನೇಹಿತ ಅಕೀಬ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.