5 ವರ್ಷಗಳಲ್ಲಿ 1 ಸಾವಿರ 676 ಪ್ರಕರಣಗಳು ದಾಖಲು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಕೆಟ್ ಜಪ್ತಿ : Railway Tickets Seized

  • ರೈಲ್ವೆ ಟಿಕೆಟ್ ದಲ್ಲಾಳಿ ಪ್ರಕರಣ

  • ಮಾಹಿತಿ ಹಕ್ಕಿನಡಿ ಮಾಹಿತಿ ಬಹಿರಂಗ

ಮುಂಬಯಿ – ‘ಮಾಹಿತಿ ಹಕ್ಕು ಅಧಿನಿಯಮ, 2005’ ರ ಅಡಿಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಅನಿಲ್ ಗಲ್ಗಲಿ ಅವರಿಗೆ ಮಧ್ಯ ರೈಲ್ವೆ ಪ್ರಧಾನ ಕಚೇರಿ, ಮುಂಬಯಿನ ರೈಲ್ವೆ ರಕ್ಷಣಾ ದಳ ನೀಡಿರುವ ಮಾಹಿತಿಯ ಪ್ರಕಾರ, 2022 ರಿಂದ ಜೂನ್ 2026 ರವರೆಗೆ ರೈಲ್ವೆ ಟಿಕೆಟ್‌ಗಳ ಅಕ್ರಮ ದಲ್ಲಾಳಿ (ಟೌಟಿಂಗ್) ಸಂಬಂಧಿಸಿದಂತೆ 1 ಸಾವಿರ 676 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಇ-ಟಿಕೆಟ್‌ಗಳು ಮತ್ತು ಇತರ ಟಿಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ನೂರಾರು ಮಧ್ಯವರ್ತಿಗಳು ಮತ್ತು ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

1. ಅಕ್ರಮ ಟಿಕೆಟ್ ಬುಕಿಂಗ್ ಮತ್ತು ದಲ್ಲಾಳಿ ಪ್ರಕರಣಗಳಲ್ಲಿ, 2022 ರಲ್ಲಿ 318 ಮಧ್ಯವರ್ತಿಗಳು ಮತ್ತು 52 ದಲ್ಲಾಳಿಗಳು, 2023 ರಲ್ಲಿ 356 ಮಧ್ಯವರ್ತಿಗಳು ಮತ್ತು 141 ದಲ್ಲಾಳಿಗಳು, 2024 ರಲ್ಲಿ 411 ಮಧ್ಯವರ್ತಿಗಳು ಮತ್ತು 204 ದಲ್ಲಾಳಿಗಳು, 2025 ರಲ್ಲಿ 429 ಮಧ್ಯವರ್ತಿಗಳು ಮತ್ತು 13 ದಲ್ಲಾಳಿಗಳು, ಹಾಗೂ ಜುಲೈ 2026 ರವರೆಗೆ 127 ಮಧ್ಯವರ್ತಿಗಳನ್ನು ಬಂಧಿಸಲಾಗಿದೆ. 2026 ರಲ್ಲಿ ಇಲ್ಲಿಯವರೆಗೆ ಯಾವುದೇ ದಲ್ಲಾಳಿಯನ್ನು ಬಂಧಿಸಲಾಗಿಲ್ಲ.

2. ಈ ಅವಧಿಯಲ್ಲಿ ಕೆಲವು ರೈಲ್ವೆ ನೌಕರರ ಮೇಲೂ ಕ್ರಮ ಕೈಗೊಳ್ಳಲಾಗಿದೆ. 2022 ರಲ್ಲಿ 1, 2023 ರಲ್ಲಿ 2 ಮತ್ತು 2024 ರಲ್ಲಿ 4 ರೈಲ್ವೆ ನೌಕರರನ್ನು ಬಂಧಿಸಲಾಯಿತು; ಆದರೆ 2025 ಮತ್ತು 2026 ರಲ್ಲಿ ಯಾವುದೇ ರೈಲ್ವೆ ನೌಕರನನ್ನು ಬಂಧಿಸಲಾಗಿಲ್ಲ.

3. ಅನಿಲ್ ಗಲ್ಗಲಿ ಅವರು ಹೇಳುವಂತೆ, ಲಭ್ಯವಿರುವ ಮಾಹಿತಿಯಿಂದ ರೈಲ್ವೆ ಟಿಕೆಟ್‌ಗಳ ಅಕ್ರಮ ದಲ್ಲಾಳಿ ವಿರುದ್ಧ ರೈಲ್ವೆ ರಕ್ಷಣಾ ದಳವು ನಿರಂತರವಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಪ್ರಯಾಣಿಕರು ಟಿಕೆಟ್‌ಗಳನ್ನು ಕೇವಲ ಅಧಿಕೃತ ಮಾಧ್ಯಮಗಳ ಮೂಲಕವೇ ಖರೀದಿಸಬೇಕು. ದಲ್ಲಾಳಿಗಳಿಂದ ಟಿಕೆಟ್ ಪಡೆಯುವುದನ್ನು ತಪ್ಪಿಸಬೇಕು. ಇದರಿಂದಲೇ ಅಕ್ರಮ ವ್ಯವಹಾರಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.

ಸಂಪಾದಕೀಯ ನಿಲುವು

ಟಿಕೆಟ್ ನ ಕಾಳಸಂತೆ ಮಾಡುವವರಿಂದ ಬಡ್ಡಿ ಸಹಿತ ದಂಡ ವಸೂಲಿ ಮಾಡಿದರೆ ಮಾತ್ರ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ!