ಸುದರ್ಶನ ಟಿವಿಯ ಸಂಪಾದಕ ಸುರೇಶ ಚವ್ಹಾಣಕೆ ಇವರ ಮೇಲೆ ತಥಾಕಥಿತ ಪ್ರಚೋದನಕಾರಿ ಟಿಪ್ಪಣಿ ಮಾಡಿರುವ ಆರೋಪದ ಮೇಲೆ ಅಪರಾಧ ದಾಖಲು

ಜೈಪುರ (ರಾಜಸ್ಥಾನ) ಇಲ್ಲಿ ಭಗವಾ ಧ್ವಜವನ್ನು ಅವಮಾನಿಸಿದ ವಿರುದ್ಧ ಸಮಾಚಾರ ಪ್ರಸಾರ ಮಾಡಿರುವ ಪ್ರಕರಣ

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಪ್ರಸಾರ ಮಾಧ್ಯಮದ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ದೇಶದ ಪ್ರಸಾರ ಮಾಧ್ಯಮಗಳು ಇವರ ವಿರುದ್ಧ ಸಂಘಟಿತರಾಗಿ ಯಾಕೆ ವಿರೋಧ ವ್ಯಕ್ತಪಡಿಸುವುದಿಲ್ಲ ?

ಸುದರ್ಶನ ಟಿವಿಯ ಸಂಪಾದಕ ಸುರೇಶ ಚವ್ಹಾಣಕೆ

ಜೈಪುರ(ರಾಜಸ್ಥಾನ) ರಾಜ್ಯದ ಆಮಾಗಡದಲ್ಲಿ ಕೆಲವು ದಿನದ ಹಿಂದೆ ಮೀಣಾ ಸಮಾಜದ ಜನರು ಭಗವಾಧ್ವಜವನ್ನು ಹರಿದಿರುವ ಪ್ರಕರಣದ ಬಗ್ಗೆ ಸುದರ್ಶನ ಟಿವಿಯ ಸಂಪಾದಕ ಸುರೇಶ ಚವ್ಹಾಣಕೆ ಇವರು ತಮ್ಮ ಟಿವಿ ವಾಹಿನಿಯ ಮುಖಾಂತರ ಪ್ರಚೋದನಕಾರಿ ಟಿಪ್ಪಣಿ ಮಾಡಿದ್ದಾರೆ ಎಂಬ ಆರೋಪ ಹೊರಿಸಿ ಮೇಲೆ ಅವರ ವಿರುದ್ಧ ಜಯಪುರದನ ಟ್ರಾನ್ಸ್ ಪೋರ್ಟ್ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ. ಚವ್ಹಾಣಕೆ ಇವರು ಟ್ವೀಟ್ ಮಾಡಿ ರಾಜಸ್ಥಾನ ಪೊಲೀಸರು ನನ್ನ ಮೇಲೆ ಅನುಸೂಚಿತ ಜಾತಿ ಮತ್ತು ಪಂಗಡದ ಕಾನೂನಿನ ಅಂತರ್ಗತ ಅಪರಾಧವನ್ನು ದಾಖಲಿಸಿದ್ದಾರೆ. ಆ ತಪ್ಪನ್ನು ನಾನು ಮಾಡಲೇ ಇಲ್ಲ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರದ ಆದೇಶದ ಮೇರೆಗೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಭಗವಾಧ್ವಜವನ್ನು ಹರಿದು ಹಾಕುವ ಸಮಯದಲ್ಲಿ ಕಾಂಗ್ರೆಸ್ ಪುರಸ್ಕೃತ ಸಂಸದ ರಾಕೇಶ್ ಮೀಣಾ ಇವರು ಉಪಸ್ಥಿತರಿದ್ದರು. ಅವರ ವಿಚಾರಣೆ ಮಾಡದೆ ನನ್ನ ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.