ಬಂಗಾಳದಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ಸರಕಾರಿ ಕಲಾಪಗಳು ಬಂಗಾಳಿ ಭಾಷೆಯಲ್ಲೇ ನಡೆಯಲಿವೆ! – ಮುಖ್ಯಮಂತ್ರಿ : Only Bengali in Bengal

ಕೋಲಕಾತಾ (ಬಂಗಾಳ) – ಬಂಗಾಳದಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ಸರಕಾರಿ ಕಲಾಪಗಳನ್ನು ಬಂಗಾಳಿ ಭಾಷೆಯಲ್ಲೇ ನಡೆಸಲಾಗುವುದು ಎಂದು ಬಂಗಾಳದ ಮುಖ್ಯಮಂತ್ರಿ ಶುವೇಂದು ಅಧಿಕಾರಿ ಇತ್ತೀಚೆಗೆ ವಿಧಾನಸಭೆಯಲ್ಲಿ ಘೋಷಿಸಿದರು. ಸೆಪ್ಟೆಂಬರ್ 1, 2026 ರಿಂದ ರಾಜ್ಯ ಸರಕಾರದ ಪ್ರತಿಯೊಂದು ಹಂತದಲ್ಲೂ ಬಂಗಾಳಿ ಭಾಷೆಯ ಬಳಕೆ ಕಡ್ಡಾಯವಾಗಿರುತ್ತದೆ. ಕೇಂದ್ರ ಸರಕಾರ ಮತ್ತು ಇತರ ರಾಜ್ಯಗಳೊಂದಿಗೆ ನಡೆಸಲಾಗುವ ಎಲ್ಲಾ ಪತ್ರವ್ಯವಹಾರಗಳಲ್ಲಿ ಬಂಗಾಳಿ ಭಾಷೆಯನ್ನೇ ಬಳಸಲಾಗುವುದು. ಹಾಗೆಯೇ ಕೇಂದ್ರ ಸರಕಾರದೊಂದಿಗಿನ ಸಂಪರ್ಕಕ್ಕಾಗಿ ಬಂಗಾಳಿಯೊಂದಿಗೆ ಹಿಂದಿ ಭಾಷೆಯನ್ನೂ ಬಳಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.