ಉತ್ತರಾಖಂಡದ ಜಾಗೇಶ್ವರ ಧಾಮ ದೇವಾಲಯದಲ್ಲಿನ ಅರ್ಚಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಭಾಜಪದ ಸಾಂಸದ !

ಭಾಜಪದ ಸಾಂಸದರಿಂದ ಈ ರೀತಿಯ ಕೃತ್ಯಗಳು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಧಮೇಂದ್ರ ಕಶ್ಯಪ್

ಡೆಹರಾಡೂನ್ (ಉತ್ತರಾಖಂಡ) – ಉತ್ತರಾಖಂಡದ ಜೋಗೇಶ್ವರ ಧಾಮದಲ್ಲಿನ ತೀರ್ಥಕ್ಷೇತ್ರದ ದರ್ಶನಕ್ಕಾಗಿ ಹೋದ ಉತ್ತರಪ್ರದೇಶದ ಭಾಜಪದ ಸಾಂಸದರಾದ ಧಮೇಂದ್ರ ಕಶ್ಯಪರು ಪೂಜಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ಘಟನೆಯ ಬಗ್ಗೆ ದೇವಾಲಯದ ಆಡಳಿತವು ಪೊಲೀಸರಲ್ಲಿ ತಕರಾರು ನೀಡಿದೆ. ಪೊಲೀಸರು ಈ ಪ್ರಕರಣದ ಬಗ್ಗೆ ಅನ್ವೇಷಣೆ ನಡೆಸುತ್ತಿದ್ದಾರೆ. ಧರ್ಮೇಂದ್ರ ಕಶ್ಯಪರು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಸಾಂಸದ ಧರ್ಮೇದ್ರ ಕಶ್ಯಪ ಹಾಗೂ 3 ಜನರು ಮಧ್ಯಾಹ್ನ 3.30ರ ಸಮಯದಲ್ಲಿ ದೇವಾಲಯಕ್ಕೆ ಹೋಗಿದ್ದರು. ಅನಂತರ ಸಾಯಂಕಾರ 6.30 ರವರೆಗೂ ದೇವಾಲಯದಲ್ಲಿಯೇ ಕುಳಿತುಕೊಂಡಿದ್ದರು. ಕೊರೊನಾದ ನಿರ್ಬಂಧಗಳಿಂದ ದೇವಾಲಯವನ್ನು 6.00 ಗಂಟೆಗೆ ಮುಚ್ಚಲಾಗುತ್ತದೆ. ಅರ್ಚಕರು ಸಾಂಸದರನ್ನು ದೇವಾಲಯದಿಂದ ಹೊರಡಲು ವಿನಂತಿಸಿದರು; ಆದರೆ ಅವರು ದುರ್ವರ್ತನೆ ತೋರಿಸುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿದರು.

ಉತ್ತರಾಖಂಡದಲ್ಲಿನ ಕಾಂಗ್ರೆಸ್ಸಿನ ಮುಖಂಡರಾದ ಗೋವಿಂದಸಿಂಹ ಕುಂಜವಾಲರವರು ಭಾಜಪದ ಸಾಂಸದರಾದ ಕಶ್ಯಪರವರ ದುರ್ವರ್ತನೆಯ ಬಳಿಕ ಸಭೆ ಆಂದೋಲನ ನಡೆಸಿದರು. ಅವರೊಂದಿಗೆ ದೇವಾಲಯ ಸಮಿತಿಯ ಜನರು ಕೂಡ ಆಂದೋಲನ ನಡೆಸಿದರು.