
ತೆಹ್ರಾನ್ (ಇರಾನ್) – ಇರಾನ್‌ನಲ್ಲಿ ವಾಸಿಸುತ್ತಿರುವ ಭಾರತೀಯರು ಆದಷ್ಟು ಬೇಗ ತಮ್ಮ ತಾಯ್ನಾಡಿಗೆ ಮರಳಬೇಕು ಎಂದು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಜುಲೈ 20 ರಂದು ಸಾಮಾಜಿಕ ಮಾಧ್ಯಮಗಳ ಮೂಲಕ ಕರೆ ನೀಡಿದೆ. ಇದರೊಂದಿಗೆ, ‘ಯಾವುದೇ ಕಾರಣಕ್ಕಾಗಿ ಇರಾನ್‌ಗೆ ಭೇಟಿ ನೀಡಲು ಯೋಜಿಸುತ್ತಿರುವ ಭಾರತೀಯರು, ಇರಾನ್‌ನಲ್ಲಿನ ಭದ್ರತಾ ಪರಿಸ್ಥಿತಿ ಸುಧಾರಿಸುವವರೆಗೆ ಅಲ್ಲಿಗೆ ಹೋಗುವ ಆಲೋಚನೆಯನ್ನು ಮುಂದೂಡಬೇಕು’ ಎಂದೂ ಮನವಿ ಮಾಡಲಾಗಿದೆ. ಇದರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಸಂಘರ್ಷದ ಕಿಚ್ಚು ಹೊತ್ತಿಕೊಳ್ಳುವ ಸಾಧ್ಯತೆ ವ್ಯಕ್ತಪಡಿಸಲಾಗುತ್ತಿದೆ.
ಭಾರತೀಯ ರಾಯಭಾರ ಕಚೇರಿಯು, ‘‘ಕಾಲಕಾಲಕ್ಕೆ ಸದ್ಯದ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಸುದ್ದಿಗಳ ಮೇಲೆ ಸೂಕ್ಷ್ಮವಾಗಿ ನಿಗಾ ಇಡಬೇಕು ಮತ್ತು ದೇಶದ ದಕ್ಷಿಣ ಕರಾವಳಿಯಂತಹ ಮಿಲಿಟರಿ ಚಟುವಟಿಕೆಗಳು ಹೆಚ್ಚಾಗಿರುವ ಪ್ರದೇಶಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು. ಇರಾನ್‌ನಲ್ಲಿರುವ ಯಾವ ಭಾರತೀಯ ನಾಗರಿಕರು ಇನ್ನು ರಾಯಭಾರ ಕಚೇರಿಯಲ್ಲಿ ತಮ್ಮ ಮಾಹಿತಿಯನ್ನು ನೋಂದಾಯಿಸಿಕೊಂಡಿಲ್ಲವೋ, ಅವರು ತಕ್ಷಣವೇ ಅದನ್ನು ನೋಂದಾಯಿಸಬೇಕು ಮತ್ತು ಮುಂದಿನ ನವೀಕೃತ ಮಾಹಿತಿಗಾಗಿ ರಾಯಭಾರ ಕಚೇರಿಯ ವೆಬ್‌ಸೈಟ್ ಹಾಗೂ ಸಾಮಾಜಿಕ ಮಾಧ್ಯಮಗಳನ್ನು ನಿಯಮಿತವಾಗಿ ಗಮನಿಸುತ್ತಿರಬೇಕು. ಸ್ಥಳೀಯ ಆಡಳಿತವು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.’ ಈ ಕರೆಯ ನಂತರ ಇರಾನ್‌ನಲ್ಲಿರುವ ಭಾರತೀಯ ನಾಗರಿಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಅನೇಕ ಭಾರತೀಯರು ತಾಯ್ನಾಡಿಗೆ ಮರಳಲು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Advisory as on 19 July 2026. pic.twitter.com/6vYWY5esa2
— India in Iran (@India_in_Iran) July 19, 2026
ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಯುದ್ಧ ಪ್ರಾರಂಭವಾಗಿರುವ ಮತ್ತು ಅಮೆರಿಕದಿಂದ ಇರಾನ್‌ನ ಹಲವು ಭಾಗಗಳ ಮೇಲೆ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕರೆ ನೀಡಲಾಗಿದೆ ಎಂದು ಹೇಳಲಾಗಿದೆ. ಇದಕ್ಕೂ ಮುನ್ನ, ಏಪ್ರಿಲ್ 8 ರಂದೂ ಸಹ ರಾಯಭಾರ ಕಚೇರಿಯು ಇರಾನ್‌ನಲ್ಲಿರುವ ಭಾರತೀಯರಿಗಾಗಿ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ಪಾಕ್ ಸೈನ್ಯವು ಕಾರ್ಗಿಲ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಮೃತದೇಹಗಳನ್ನು ಹಿಂದೂಗಳ ವಶಕ್ಕೆ ನೀಡಿತು !
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War
‘ಕಳೆದ ವರ್ಷ ನಡೆದ ಸಂಘರ್ಷವು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಒಳಸಂಚಾಗಿತ್ತು!’ (ಅಂತೆ) : Imran Khan Sister’s Claim
ಪಿಒಕೆ ಪ್ರತಿಭಟನಾಕಾರರ ದಬ್ಬಾಳಿಕೆ; ವಿಶ್ವಸಂಸ್ಥೆ ಕಳವಳ : UN Concern PoK