81 ಹಿಂದೂ ಕುಟುಂಬಗಳಿಂದ ಪಲಾಯನ ಮಾಡುವುದಾಗಿ ಎಚ್ಚರಿಕೆ !ಮನೆಯ ಮೇಲೆ ‘ಮನೆ ಮಾರಾಟಕ್ಕಿದೆ’ ಎಂಬ ಫಲಕವನ್ನು ಹಾಕಲಾಗಿದೆ !ಪೊಲೀಸರಿಂದ ತನಿಖೆ ಆರಂಭ |
* ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರವಿರುವಾಗ ಇಂತಹ ಘಟನೆಗಳು ನಡೆಯಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ ! * ಹಿಂದುಗಳು ಬಹುಸಂಖ್ಯಾತರಾಗಿದ್ದರೂ, ಅಲ್ಪಸಂಖ್ಯಾತರು ಅವರನ್ನು ಹಿಂಸಿಸುತ್ತಾರೆ, ಇದು ಹಿಂದೂಗಳಿಗೆ ನಾಚಿಕೆಯ ಸಂಗತಿಯಾಗಿದೆ! * ಒಂದುವೇಳೆ ಮತಾಂಧರು ಅಲ್ಪಸಂಖ್ಯಾತರಾಗಿದ್ದರೂ ಬಹುಸಂಖ್ಯಾತರಾಗಿರುವ ಹಿಂದೂಗಳನ್ನು ಹಿಂಸಿಸುತ್ತಾರೆ, ನಾಳೆ ಅವರು ಬಹುಸಂಖ್ಯಾತರಾದರೆ ಹಿಂದೂಗಳ ಅಸ್ತಿತ್ವವೇ ಇರುವುದಿಲ್ಲ ಎಂಬುದನ್ನು ಹಿಂದೂಗಳು ಅರಿತುಕೊಳ್ಳುತ್ತಾರೆಯೇ ? |
ಮುರಾದಾಬಾದ್ (ಉತ್ತರಪ್ರದೇಶ) – ಇಲ್ಲಿಯ ಲಾಜಪತನಗರದ ಶಿವವಿಹಾರ ವಸತಿ ಸಮುಚ್ಛಯದಲ್ಲಿ, ಮತಾಂಧರ ಕಿರುಕುಳದಿಂದ 81 ಹಿಂದೂ ಕುಟುಂಬಗಳು ‘ಮನೆಗಳು ಮಾರಾಟಕ್ಕಿವೆ’, ಎಂಬ ಫಲಕಗಳನ್ನು ಹಾಕಿದ್ದಾರೆ. ಈ ಈ ಸಮುಚ್ಛಯದ ಎರಡೂ ಮುಖ್ಯದ್ವಾರಗಳ ಸುತ್ತಮುತ್ತಲಿನ ಮನೆಗಳನ್ನು ಮತಾಂಧರು ಖರೀದಿಸಿದ್ದಾರೆ. ಅವರು ಮನೆ ಖರೀದಿಸುವಾಗ ಮಾರುಕಟ್ಟೆ ಮೌಲ್ಯಕ್ಕಿಂತ ಮೂರು ಪಟ್ಟು ಹೆಚ್ಚು ಹಣ ಪಾವತಿಸಿದ್ದಾರೆ. ಈ ಮನೆಯಲ್ಲಿ ವಾಸಿಸುವ ಮತಾಂಧರು ಮಾಂಸವನ್ನು ತಿನ್ನುತ್ತಾರೆ ಮತ್ತು ಅದರ ಅವಶೇಷಗಳನ್ನು ಸಮುಚ್ಛಯದಲ್ಲಿ ವಾಸಿಸುವ ಹಿಂದೂಗಳ ಮನೆಯ ಮುಂದೆ ಎಸೆಯುತ್ತಾರೆ, ಎಂದು ಹಿಂದೂಗಳು ಆರೋಪಿಸಿದ್ದಾರೆ. ಇದರಿಂದ ಇಲ್ಲಿ ಅಸ್ವಚ್ಛತೆ ನಿರ್ಮಾಣವಾಗುತ್ತಿದೆ. ಇಲ್ಲಿ ವಾಸಿಸುವ ಬಹುತೇಕ ಹಿಂದೂಗಳು ಸಸ್ಯಾಹಾರಿಗಳಾಗಿದ್ದಾರೆ. ಮತಾಂಧರು ಖರೀದಿಸಿದ ಮನೆಗಳ ನೋಂದಣಿ ರದ್ದುಗೊಳಿಸುವಂತೆ ಹಿಂದೂಗಳು ಸರಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಹೀಗೆ ಮಾಡದಿದ್ದರೆ, ಎಲ್ಲಾ 81 ಹಿಂದೂ ಕುಟುಂಬಗಳು ಪಲಾಯನ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
Moradabad witnessing ‘exodus’? Here’s why 81 families have put up ‘house for sale’ posters https://t.co/2g5SWsAtMK
— Republic (@republic) August 3, 2021
1. ಹಿಂದೂಗಳ ಪ್ರಕಾರ, ಈ ಪ್ರದೇಶದಲ್ಲಿ 50 ಲಕ್ಷ ರೂಪಾಯಿ ಮೌಲ್ಯದ ಮನೆಗಳನ್ನು ಮುಸಲ್ಮಾನರು 3 ಕೋಟಿಗೆ ಖರೀದಿಸುತ್ತಿದ್ದಾರೆ. ಮನೆಗಳನ್ನು ಖರೀದಿಸಲು ‘ಇಷ್ಟು ಹಣ ಎಲ್ಲಿಂದ ಬಂದಿದೆ’ ಎಂಬುದನ್ನು ಸರಕಾರವು ವಿಚಾರಣೆ ನಡೆಸಬೇಕು ಎಂದು ಹಿಂದೂಗಳು ಒತ್ತಾಯಿಸಿದ್ದಾರೆ. (ಹಿಂದೂಗಳು ಮತಾಂಧರಿಂದ ಹೆಚ್ಚು ಹಣ ಪಡೆದು ಮನೆಗಳನ್ನು ಮಾರುತ್ತಾರೆ ಮತ್ತು ಇತರ ಹಿಂದೂಗಳನ್ನು ತೊಂದರೆಗೆ ಸಿಲುಕಿಸುತ್ತಾರೆ. ಇದರಿಂದ ಅವರ ಧಾರ್ಮಿಕ ಭಾವನೆಗಳು ಎಷ್ಟು ಕಡಿಮೆ ಇದೆ ಎಂಬುದು ಸ್ಪಷ್ಟವಾಗುತ್ತದೆ ! ಇಂತಹ ಹಿಂದೂಗಳನ್ನು ದೇವರು ಆಪತ್ಕಾಲದಲ್ಲಿ ಏಕೆ ರಕ್ಷಿಸಬೇಕು ? – ಸಂಪಾದಕರು)
2. ಮತಾಂಧರು ಪಿತೂರಿ ಮಾಡುತ್ತಿದ್ದಾರೆ ಮತ್ತು ಅವರನ್ನು ಇಲ್ಲಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಹಿಂದೂಗಳು ಆರೋಪಿಸಿದ್ದಾರೆ. ಬಕ್ರೀದ್ ದಿನದಂದು ಮಾಂಸ ಮತ್ತು ಅವುಗಳ ಅವಶೇಷಗಳನ್ನು ಮನೆಯ ಬಳಿ ಎಸೆಯಲಾಯಿತು. (ಮತಾಂಧರು ಮನೆಯ ಮುಂದೆ ಮಾಂಸವನ್ನು ಎಸೆದರೆ, ಕಾನೂನಾತ್ಮಕ ರೀತಿಯಲ್ಲಿ ಉತ್ತರಿಸುವಂತೆ ಕೇಳುವ ಮೂಲಕ ಅದನ್ನು ಮತ್ತೆ ಮಾಡದಂತೆ ಎಚ್ಚರಿಕೆ ನೀಡಲು ಹಿಂದೂಗಳಿಗೆ ಧೈರ್ಯ ತೋರಿಸಲು ಸಾಧ್ಯವಿಲ್ಲವೇ ? – ಸಂಪಾದಕರು)
3. ಹಿಂದೂಗಳು, ‘ನಾವೂ ಪಲಾಯನ ಮಾಡಬೇಕೇ ಅಥವಾ ಮತಾಂತರ ಮಾಡಬೇಕೇ ?’ ಎಂದು ಆಕ್ರೋಶದಿಂದ ವಿಚಾರಿಸಿದ್ದಾರೆ. (2-3 ಮತಾಂಧರ ಮನೆಗಳಿಂದ, ಬಹುಸಂಖ್ಯಾತ ಹಿಂದೂಗಳು ಭಯದಿಂದ ಮತಾಂತರ ಮತ್ತು ಪಲಾಯನ ಮಾಡುತ್ತಿದ್ದರೆ, ಇಸ್ಲಾಮಿಕ್ ದೇಶಗಳಲ್ಲಿ ಹಿಂದೂಗಳ ಪರಿಸ್ಥಿತಿ ಹೇಗಿರಬಹುದು ! – ಸಂಪಾದಕ)
4. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ‘ಈ ಬಗ್ಗೆ ಮುರಾದಾಬಾದ್ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ’, ಎಂದು ಹೇಳಿದರು.
5. ಇಲ್ಲಿಯ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ರಾಜೇಶ ಕುಮಾರ ಇವರು ಸಂಕುಲಕ್ಕೆ (ಸಮುಚ್ಛಯಕ್ಕೆ) ಭೇಟಿ ನೀಡಿ ಹಿಂದೂಗಳೊಂದಿಗೆ ಚರ್ಚೆ ನಡೆಸಿದರು. ಅವರು ‘ಹಿಂದೂಗಳ ಭಾವನೆಗಳನ್ನು ತಿಳಿದ ನಂತರ, ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು’, ಎಂದು ಹೇಳಿದರು.
6. ಈ ಬಗ್ಗೆ ಜಿಲ್ಲಾಧಿಕಾರಿಯವರು, ನಾವು ಮಾಹಿತಿ ಪಡೆಯಲು ಅಧಿಕಾರಿಗಳನ್ನು ಸಂಕುಲಕ್ಕೆ ಕಳುಹಿಸಿದ್ದೇವೆ. ಇಲ್ಲಿ 3 ಮನೆಗಳನ್ನು ಅಲ್ಪಸಂಖ್ಯಾತರು ಖರೀದಿಸಿದ್ದರೂ, ಉಳಿದ ಬಹುಸಂಖ್ಯಾತರು ಅಲ್ಲಿ ವಾಸಿಸುತ್ತಿದ್ದಾರೆ. ಪಲಾಯನದ ಪ್ರಕರಣಗಳು ಇಲ್ಲಿಯ ತನಕ ಸಂಭವಿಸಿಲ್ಲ ಎಂದು ಹೇಳಿದ್ದಾರೆ.