ಕೊಲಕಾತಾ ಪ್ರವಾಸದ ಕುರಿತು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರಿಂದ ಕಮ್ಯುನಿಸ್ಟ್ ಪಕ್ಷಗಳ ಮೇಲೆ ಟೀಕೆ

ಕೊಲಕಾತಾ (ಬಂಗಾಳ) – ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಹಾಕಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ ಎಂದು ನಿರಾಶ್ರಿತರಾಗಿರುವ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರು ‘ಎಕ್ಸ್’ ಮೂಲಕ ಕಮ್ಯುನಿಸ್ಟ್ ಪಕ್ಷಗಳ ವಿರುದ್ಧ ಟೀಕೆ ಮಾಡಿದ್ದಾರೆ. ‘ಈಗ ನಾನು ಬಂಗಾಳದಲ್ಲಿ ಕೇವಲ ಕಾಲಿಟ್ಟ ಮಾತ್ರಕ್ಕೆ ಹಿಂದುತ್ವ ಬೆಂಬಲಿಸುವವಳು, ಭಾಜಪ ಅಥವಾ ಸಂಘವನ್ನು ಬೆಂಬಲಿಸುತ್ತೇನೆ ಎಂಬುದು ಈ ಪಕ್ಷಗಳ ವಾದವಾಗಿದೆ’ ಎಂದೂ ನಸ್ರೀನ್ ಹೇಳಿದ್ದಾರೆ. ಸುಮಾರು ೧೯ ವರ್ಷಗಳ ನಂತರ ಕೊಲಕಾತಾದಲ್ಲಿ ನಸ್ರೀನ್ ಅವರ ಭೇಟಿಯನ್ನು ಆಯೋಜಿಸಲಾಗಿದೆ.
ತಸ್ಲೀಮಾ ನಸ್ರೀನ್ ಅವರು ಮಾತು ಮುಂದುವರೆಸುತ್ತಾ,
೧. ಒಂದು ಜಾತ್ಯತೀತ ಸಂಸ್ಥೆ ನೀಡಿದ ಆಹ್ವಾನದ ಮೇರೆಗೆ ನನ್ನ ಕೊಲಕಾತಾ ಭೇಟಿಯನ್ನು ಆಯೋಜಿಸಲಾಗಿದೆ. ಈ ಸಂಸ್ಥೆಯು ಉಸ್ಮಾನ್ ಗನಿ ಮಲಿಕ್ ಎಂಬ ಪ್ರಗತಿಪರ ಮುಸ್ಲಿಂ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.
೨. ಬಂಗಾಳ ಸರಕಾರದ ಪಾತ್ರ ಕೇವಲ ಭದ್ರತೆ ಒದಗಿಸುವುದಕ್ಕಷ್ಟೇ ಸೀಮಿತವಾಗಿದೆ. ನನ್ನ ಕೊಲಕಾತಾ ಭೇಟಿಯ ಹಿಂದೆ ಭಾಜಪ ಅಥವಾ ಸರಕಾರದ ಕೈವಾಡವಿಲ್ಲ. ಯಾವುದೇ ರಾಜ್ಯದಲ್ಲಿ ನನ್ನ ಭದ್ರತೆಯ ಹೊಣೆಗಾರಿಕೆ ಆಯಾ ರಾಜ್ಯ ಸರಕಾರದ್ದೇ ಆಗಿರುತ್ತದೆ.
೩. ಕೇರಳಮ್‌ದಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರವಿದ್ದಾಗ ನಾನು ಹಲವು ಬಾರಿ ‘ಝೆಡ್-ಪ್ಲಸ್’ ಭದ್ರತೆಯೊಂದಿಗೆ ಪ್ರವಾಸ ಮಾಡಿದ್ದೆ, ಆಗ ಇದೇ ಕಮ್ಯುನಿಸ್ಟ್ ನಾಯಕರು ಯಾವುದೇ ಆಕ್ಷೇಪ ಎತ್ತಿರಲಿಲ್ಲ. ಆ ಸಮಯದಲ್ಲಿ ಕೊಲಕಾತಾದ ಈ ಕಮ್ಯುನಿಸ್ಟ್ ನಾಯಕರು ನನ್ನನ್ನು ಎಡಪಂಥೀಯ ಸಿದ್ಧಾಂತದವಳು ಎಂದು ನಿಂದಿಸಿದ್ದರೇ? ಅವರು ನನ್ನ ಪ್ರವಾಸಗಳನ್ನು ಸ್ವಾಗತಿಸಿದ್ದರೇ?
೪. ಇಸ್ಲಾಮಿಕ್ ಕಟ್ಟರವಾದಿಗಳನ್ನು ಓಲೈಸಲು ಕಮ್ಯುನಿಸ್ಟ್ ಪಕ್ಷಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ಮೌನ ವಹಿಸಿದವು.
ಬಂಗಾಳದಲ್ಲಿ ೨೦೦೭ರಲ್ಲಿ ನಸ್ರೀನ್ ಅವರ ‘ದ್ವಿಖಂಡಿತಾ’ ಎಂಬ ಆತ್ಮಕಥನದ ಕುರಿತು ನಡೆದ ಹಿಂಸಾತ್ಮಕ ಪ್ರತಿಭಟನೆಯ ನಂತರ, ಬಂಗಾಳದಲ್ಲಿದ್ದ ಅಂದಿನ ಕಮ್ಯುನಿಸ್ಟ್ ಒಕ್ಕೂಟದ ಸರಕಾರವು ಅವರನ್ನು ಕೊಲಕಾತಾವನ್ನು ತೊರೆಯುವಂತೆ ಮಾಡಿತ್ತು. ತದನಂತರ ಅಧಿಕಾರಕ್ಕೆ ಬಂದ ತೃಣಮೂಲ ಕಾಂಗ್ರೆಸ್ ಸರಕಾರವೂ ಅವರು ರಾಜ್ಯ ಪ್ರವೇಶಿಸುವುದಕ್ಕೆ ಹಾಗೂ ಅವರ ಕೆಲವು ಸಾಹಿತ್ಯಿಕ ಮತ್ತು ಕಿರುತೆರೆ ಪ್ರಸಾರಗಳ ಮೇಲೆ ನಿರ್ಬಂಧ ಹೇರಿತು.
ತಮಿಳುನಾಡು – ಗೋಹತ್ಯೆ ಮಾಡುವವರನ್ನು ಬೆಂಬಲಿಸುವ ಮುಸ್ಲಿಂ ಸಂಘಟನೆಗಳ ವಿರುದ್ಧ ಹಿಂದುತ್ವನಿಷ್ಠರ ಆಕ್ರೋಶ!
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ಪಾಕ್ ಸೈನ್ಯವು ಕಾರ್ಗಿಲ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಮೃತದೇಹಗಳನ್ನು ಹಿಂದೂಗಳ ವಶಕ್ಕೆ ನೀಡಿತು !
ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ರಷ್ಯಾದಿಂದ ದಾಳಿ : 6 ಜನರ ಸಾವು : Russia Ukraine War
ಇರಾನ್ನಲ್ಲಿರುವ ಭಾರತೀಯರು ಆದಷ್ಟು ಬೇಗ ಭಾರತಕ್ಕೆ ಮರಳಬೇಕು! – ಭಾರತ : US Iran War
‘ಕಳೆದ ವರ್ಷ ನಡೆದ ಸಂಘರ್ಷವು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಒಳಸಂಚಾಗಿತ್ತು!’ (ಅಂತೆ) : Imran Khan Sister’s Claim