ಹಿಂದೂಗಳ ಕ್ಷಮೆಯನ್ನು ಯಾಚಿಸದೆ ಕೇವಲ ಭಾವನೆಗೆ ಗೌರವ ನೀಡುತ್ತಿರುವುದಾಗಿ ಹೇಳಿ ‘ಮಧುವನ ಮೇ ರಾಧಿಕಾ ನಾಚೆ’ ಹಾಡು ಹಿಂಪಡೆಯುವ ಘೋಷಣೆ

ಮೊದಲು ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ಮತ್ತು ಅದರ ನಂತರ ಅದರ ತೀವ್ರ ವಿರೋಧವಾದ ನಂತರ ಹಿಂಪಡೆಯುವುದು, ಇದು  ಎಂದಿನಂತೆ ನಡೆಯುತ್ತದೆ. ಹಿಂದೂಗಳ ಕಡೆಗೆ ಯಾರಾದರೂ ವಕ್ರ ದೃಷ್ಟಿಯಿಂದ ನೋಡಲು ಹಿಂಜರಿಯಬೇಕು ಅಂತಹ ವರ್ಚಸ್ಸನ್ನು ಹಿಂದುಗಳು ಯಾವಾಗ ನಿರ್ಮಾಣ ಮಾಡುವರು ?

ಮಧ್ಯಪ್ರದೇಶದಲ್ಲಿ ಖಾಸಗಿ ಶಾಲೆಯ ಪ್ರಶ್ನೆಪತ್ರಿಕೆಯಲ್ಲಿ `ಕರೀನಾ ಸೈಫ್ ಅಲಿಖಾನ್ ಇವರ ಮಗನ ಪೂರ್ಣ ಹೆಸರು ಏನು ?’ ಪ್ರಶ್ನೆ ವಿಚಾರಿಸಿದ್ದರಿಂದ ಶಾಲೆಗೆ ನೋಟಿಸ್

ಖಾಂಡವಾ ನಗರದಲ್ಲಿನ `ಅಕೆಡಮಿಕ್ ಹೈಟ್ಸ್ ಪಬ್ಲಿಕ್ ಸ್ಕೂಲ್’ನ ಪ್ರಶ್ನೆಪತ್ರಿಕೆಯಲ್ಲಿ ‘ಕರೀನಾ ಕಪೂರ ಮತ್ತು ಸೈಫ್ ಅಲಿ ಖಾನ್ ಇವರ ಮಗನ ಹೆಸರೇನು ?’ ಎಂದು ಪ್ರಶ್ನೆ ಕೇಳಲಾಗಿತ್ತು. ಈ ಬಗ್ಗೆ ಟೀಕೆ ವ್ಯಕ್ತವಾದಾಗ ಶಾಲೆಗೆ ಕಾರಣ ತೋರಿಸಿ ಎಂಬ ನೋಟಿಸ್ ಜಾರಿ ಮಾಡಲಾಗಿದೆ.

ದೆಹಲಿಯಲ್ಲಿ ಮತಾಂಧರ ಗುಂಪಿನಿಂದಾದ ಹೊಡೆತದಲ್ಲಿ ಓರ್ವ ಹಿಂದೂ ತರುಣನ ಮೃತ್ಯು

ಹಿಂದೂಗಳಿಂದ ಕಥಿತ ರೂಪದಲ್ಲಿ ಯಾವುದೇ ಮತಾಂಧನನ್ನು ಹೊಡೆದು, ಅದರಲ್ಲಿ ಆತನ ಮೃತ್ಯುವಾದರೆ ಆಕಾಶಪಾತಾಳ ಒಂದು ಮಾಡಿ ‘ಭಾರತದಲ್ಲಿನ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’ಎಂದು ಬೊಬ್ಬೆ ಹಾಕುವ ಜನರು ಈಗ ಏಕೆ ಸುಮ್ಮನಿದ್ದಾರೆ ? ಅವರ ಲೆಕ್ಕದಲ್ಲಿ ಹಿಂದೂಗಳ ಪ್ರಾಣಕ್ಕೆ ಬೆಲೆ ಇಲ್ಲವೇ ?

ಜೈಸಲ್ಮೇರ (ರಾಜಸ್ಥಾನ) ಇಲ್ಲಿ ವಾಯುದಳದ ಮಿಗ-21 ಈ ಯುದ್ಧ ವಿಮಾನ ಪತನಗೊಂಡು ವೈಮಾನಿಕನ ಮೃತ್ಯು

‘ಹಾರಾಡುವ ಶವಪೆಟ್ಟಿಗೆ’ ಅಥವಾ `ವಿಧವೆಯರನ್ನಾಗಿಸುವ ವಿಮಾನ’ಗಳು ಎಂಬ ಪ್ರಚಾರ ಇರುವ ಮಿಗ-21 ವಿಮಾನಗಳನ್ನು ಇನ್ನೆಷ್ಟು ವರ್ಷಗಳ ಕಾಲ ಭಾರತೀಯ ವಾಯುದಳದಲ್ಲಿ ಉಪಯೋಗಿಸಲಾಗುವುದು ?

ಅಸ್ಸಾಂನಲ್ಲಿ ಗೋವುಗಳ ಕಳ್ಳಸಾಗಾಣಿಕೆ ಮಾಡುವವರ ಆಸ್ತಿ ವಶಪಡಿಸಿಕೊಳ್ಳುವ ಮಸೂದೆಗೆ ಅಂಗೀಕಾರ

ಗೋಹತ್ಯೆ ಮತ್ತು ಗೋವುಗಳ ಕಳ್ಳಸಾಗಾಣಿಕೆಯ ಸಂದರ್ಭದಲ್ಲಿ ಕೇಂದ್ರ ಸರಕಾರ ಕಠಿಣ ಕಾನೂನು ಜಾರಿ ಮಾಡಿದರೆ, ದೇಶದಲ್ಲಿನ ರಾಜ್ಯಗಳಿಗೆ ಬೇರೆಬೇರೆ ಕಾನೂನು ಮಾಡುವ ಅವಶ್ಯಕತೆ ಇರುವುದಿಲ್ಲ ! ಕೇಂದ್ರ ಸರಕಾರವು ಇಂತಹ ಕಾನೂನನ್ನು ಆದಷ್ಟು ಬೇಗನೆ ಜಾರಿ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ನಟಿ ಸನಿ ಲಿಯೋನ ಇವರ `ಮಧುಬನ’ ಈ ಹಾಡಿನ ಮೇಲೆ ನಿರ್ಬಂಧ ಹೇರಿ ! – ಮಥುರಾದ ಸಂತರ ಆಗ್ರಹ

ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗುತ್ತದೆ ? ಸರಕಾರವು ತಾನಾಗಿ ಗಮನವಹಿಸಿ ಹಿಂದೂಗಳನ್ನು ಅವಮಾನಿಸುವ ಪ್ರತಿಯೊಂದು ಘಟನೆಯನ್ನು ಕೂಡಲೇ ನಿಷೇಧಿಸಬೇಕು !

ರಝಾ ಅಕಾಡೆಮಿ ಮೇಲೆ ಏಕೆ ನಿರ್ಬಂಧ ಹೇರುತ್ತಿಲ್ಲ ?

ಮಹಾರಾಷ್ಟ್ರ ವಿಧಾನಸಭೆಯ ಸಭಾಗೃಹದಲ್ಲಿ ಡಿಸೆಂಬರ್ ೨೩ ರಂದು ಕೆಲವು ಸದಸ್ಯರು ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರುವ ಬೇಡಿಕೆ ಮಾಡಿದರು. ಭಯೋತ್ಪಾದಕ ಚಟುವಟಿಕೆಗಳು ಮಾಡುವ ಉಗ್ರರಿಗೆ ವಿಧಿಸಿದ್ದ ಶಿಕ್ಷೆ ಕ್ಷಮಿಸಬೇಕು

‘ಪ್ರಸ್ತುತ ಸರಕಾರ ದೇಶವನ್ನು ಕೋಮುವಾದಿ ಮಾಡುತ್ತಿದ್ದೂ ಜನರಲ್ಲಿ ಬಿರುಕುಂಟು ಮಾಡುತ್ತಿದೆ ! (ಯಂತೆ) – ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ

ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾರ ಸರಕಾರ ಇರುವಾಗ ಅವರು ಹಿಂದೂಗಳನ್ನು ಪಲಾಯನ ಮಾಡಿಸಿದದವರ ಪೈಕಿ ಎಷ್ಟು ಜನರ ವಿರುದ್ಧ ಕ್ರಮಕೈಗೊಂಡು ಶಿಕ್ಷೆ ನೀಡಲು ಪ್ರಯತ್ನಿಸಿದರು ? ಪಲಾಯನ ಗೈದಿರುವ ಎಷ್ಟು ಹಿಂದೂಗಳಿಗೆ ಕಾಶ್ಮೀರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ ?

ಉತ್ತರಾಖಂಡದಲ್ಲಿ ಕಾಂಗ್ರೆಸ್‍ನ ನಾಯಕ ಮತ್ತು ಮಾಜಿ ಮುಖ್ಯಮಂತ್ರಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಗೆ ರಾವತ್ ಬೆಂಬಲಿಗರಿಂದ ಥಳಿತ !

ಉತ್ತರಾಖಂಡದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಕಾಂಗ್ರೆಸ್ ಬಗ್ಗೆ ಅಸಾಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ರಾವತ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟವಾಗಿದೆ.

ಲುಧಿಯಾನಾದಲ್ಲಿ ನಡೆದಿರುವ ಬಾಂಬ್‍ಸ್ಫೋಟದಲ್ಲಿ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಬಬ್ಬರ್ ಖಾಲಸಾದ ಕೈವಾಡವಿರುವ ಸಾಧ್ಯತೆ

ನಿಷೇಧಿಸಲಾಗಿದ್ದರೂ ಖಲಿಸ್ತಾನಿ ಸಂಘಟನೆಯು ತನ್ನ ಚಟುವಟಿಕೆಗಳು ಹೇಗೆ ನಡೆಸುತ್ತಿದೆ ? ಕಾಂಗ್ರೆಸ್‍ನ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇಲ್ಲವೇ ?