ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾರ ಸರಕಾರ ಇರುವಾಗ ಅವರು ಹಿಂದೂಗಳನ್ನು ಪಲಾಯನ ಮಾಡಿಸಿದದವರ ಪೈಕಿ ಎಷ್ಟು ಜನರ ವಿರುದ್ಧ ಕ್ರಮಕೈಗೊಂಡು ಶಿಕ್ಷೆ ನೀಡಲು ಪ್ರಯತ್ನಿಸಿದರು ? ಪಲಾಯನ ಗೈದಿರುವ ಎಷ್ಟು ಹಿಂದೂಗಳಿಗೆ ಕಾಶ್ಮೀರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ ? ಕಾಶ್ಮೀರದಲ್ಲಿ ಮತಾಂಧರು `ಜಾತ್ಯತೀತ’ರಾಗಿರದೆ ಅವರು ಮತಾಂಧ ವೃತ್ತಿಯವರಾಗಿರುವುದರಿಂದ ಈಗಲೂ ಹಿಂದೂಗಳು ಕಾಶ್ಮೀರದಲ್ಲಿ ವಾಸವಾಗಲು ಸಾಧ್ಯವಿಲ್ಲ. ಈ ವಿಷಯವಾಗಿ ಅಬ್ದುಲ್ಲಾ ಏಕೆ ಮಾತನಾಡುವುದಿಲ್ಲ ? ಸಂಪಾದಕರು
ಶ್ರೀನಗರ(ಜಮ್ಮು-ಕಾಶ್ಮೀರ) – ಭಾರತವು ಮತಾಂಧವಾಗುತ್ತಿದೆಯೇ ? ಇದು ಪ್ರಶ್ನೆಯಾಗಿದೆ. ಮೊದಲು ದೇಶ ಜಾತ್ಯತೀತವಾಗಿತ್ತು. ಪ್ರಸ್ತುತ ಸರಕಾರ ದೇಶಕ್ಕೆ ಕೋಮುವಾದಿ ಆಗಿಸುತ್ತಿದ್ದು ಜನರಲ್ಲಿ ಬಿರುಕು ಮೂಡಿಸುತ್ತದೆ, ಎಂಬ ನುಡಿಮುತ್ತು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಶನಲ್ ಕಾನ್ಫರೆನ್ಸ್‍ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಇವರು `ದ ವಾಯರ’ ಈ ವಾರ್ತಾ ಜಾಲತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. `ಕಾಶ್ಮೀರದ ಸ್ಥಿತಿ ಜ್ವಾಲಾಮುಖಿಯಂತ್ತಿದ್ದು ಅದು ಯಾವಾಗಲಾದರೂ ಸ್ಫೋಟಗೊಳ್ಳಬಹುದು. ಈ ಸ್ಫೋಟದ ಪರಿಣಾಮ ಇಡೀ ದೇಶದ ಮೇಲೆ ಆಗಬಹುದು ಅದರಿಂದ ಯಾರು ಪಾರಾಗಲು ಸಾಧ್ಯವಿಲ್ಲ’, ಎಂದು ಅವರು ಈ ಸಮಯದಲ್ಲಿ ಹೇಳಿದರು.