ಲುಧಿಯಾನಾದಲ್ಲಿ ನಡೆದಿರುವ ಬಾಂಬ್‍ಸ್ಫೋಟದಲ್ಲಿ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಬಬ್ಬರ್ ಖಾಲಸಾದ ಕೈವಾಡವಿರುವ ಸಾಧ್ಯತೆ

ನಿಷೇಧಿಸಲಾಗಿದ್ದರೂ ಖಲಿಸ್ತಾನಿ ಸಂಘಟನೆಯು ತನ್ನ ಚಟುವಟಿಕೆಗಳು ಹೇಗೆ ನಡೆಸುತ್ತಿದೆ ? ಕಾಂಗ್ರೆಸ್‍ನ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇಲ್ಲವೇ ?- ಸಂಪಾದಕರು

ಲುಧಿಯಾನ (ಪಂಜಾಬ) – ಇಲ್ಲಿಯ ನ್ಯಾಯಾಲಯದಲ್ಲಿ ನಡೆದ ಸ್ಫೋಟವು ಬಾಂಬ್ ಸ್ಫೋಟವಾಗಿತ್ತು ಮತ್ತು ಆದರಲ್ಲಿ ಆರ್.ಡಿ.ಎಕ್ಸ್.ಅನ್ನು ಉಪಯೋಗಿಸಲಾಗಿತ್ತು, ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಈ ಬಾಂಬ್ ಸ್ಫೋಟದ ಹಿಂದೆ ನಿಷೇಧಿತ ಖಲಿಸ್ತಾನಿ ಉಗ್ರರ ಸಂಘಟನೆಯಾದ `ಬಬ್ಬರ ಖಾಲಸಾ’ದ ಕೈವಾಡವಿರುವ ಅನುಮಾನ ವ್ಯಕ್ತಪಡಿಸಲಾಗಿದೆ. ನ್ಯಾಯಾಲಯದಲ್ಲಿನ ಶೌಚಾಲಯದಲ್ಲಿ ಬಾಂಬ್ ಜೋಡಿಸುತ್ತಿರುವಾಗ ಸ್ಫೋಟ ಸಂಭವಿಸಿತು ಮತ್ತು ಅದರಲ್ಲಿ ಬಾಂಬ್ ಜೋಡಿಸಲು ಪ್ರಯತ್ನ ಮಾಡುವ ಉಗ್ರ ಸಾವನ್ನಪ್ಪಿದ್ದಾನೆಂದು ಹೇಳಲಾಗುತ್ತಿದೆ. ಬಬ್ಬರ ಖಾಲಾಸಾ ಸಂಘಟನೆಗೆ ಪಾಕಿಸ್ತಾನದಿಂದ ಸಹಾಯ ಸಿಕ್ಕಿರುವ ಮಾಹಿತಿ ಬೆಳಕಿಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಲೂಧಿಯಾನದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಈ ಬಾಂಬ್ ಸ್ಫೋಟ ವಿಷಯವಾಗಿ ಕೇಂದ್ರದ ಗೃಹ ಸಚಿವಾಲಯವು ರಾಜ್ಯ ಸರಕಾರದಿಂದ ವರದಿಯನ್ನು ಕೇಳಿದೆ. ನ್ಯಾಶನಲ್ ಸೆಕ್ಯೂರಿಟಿ ಗಾರ್ಡ್ ಮತ್ತು ರಾಷ್ಟ್ರೀಯ ತನಿಖಾ ದಳ ಇದರ ಪಡೆಯು ಪಂಜಾಬ್‍ಗೆ ಹೊರಟಿದೆ. ಇದು ಉಗ್ರವಾದಿ ದಾಳಿಯಾಗಿರುವುದರಿಂದ ರಾಷ್ಟ್ರೀಯ ತನಿಖಾ ದಳ ಸ್ವತಂತ್ರವಾಗಿ ಇದರ ತನಿಖೆ ನಡೆಸಲಿದೆ.