ಜೈಸಲ್ಮೇರ (ರಾಜಸ್ಥಾನ) ಇಲ್ಲಿ ವಾಯುದಳದ ಮಿಗ-21 ಈ ಯುದ್ಧ ವಿಮಾನ ಪತನಗೊಂಡು ವೈಮಾನಿಕನ ಮೃತ್ಯು

‘ಹಾರಾಡುವ ಶವಪೆಟ್ಟಿಗೆ’ ಅಥವಾ ‘ವಿಧವೆಯರನ್ನಾಗಿಸುವ ವಿಮಾನ’ಗಳು ಎಂಬ ಪ್ರಚಾರ ಇರುವ ಮಿಗ-21 ವಿಮಾನಗಳನ್ನು ಇನ್ನೆಷ್ಟು ವರ್ಷಗಳ ಕಾಲ ಭಾರತೀಯ ವಾಯುದಳದಲ್ಲಿ ಉಪಯೋಗಿಸಲಾಗುವುದು ?- ಸಂಪಾದಕರು 

ಜೈಸಲ್ಮೇರ (ರಾಜಸ್ಥಾನ) – ಇಲ್ಲಿ ಭಾರತೀಯ ವಾಯುದಳದ ಮಿಗ-21 ಯುದ್ಧ ವಿಮಾನ ಪತನಗೊಂಡು ಪೈಲೆಟ್ ವಿಂಗ್ ಕಮಾಂಡರ್ ಹರ್ಷಿತ ಸಿಂಹ ಇವರು ಸಾವನ್ನಪ್ಪಿದ್ದಾರೆಂಬ ಮಾಹಿತಿಯನ್ನು ವಾಯುದಳ ಟ್ವೀಟ್ ಮೂಲಕ ನೀಡಿದೆ. ಈ ಘಟನೆಯು ಇಲ್ಲಿಯ ಪಾಕಿಸ್ತಾನ ಗಡಿಯ ಹತ್ತಿರ ನಡೆದಿದೆ. ಭಾರತೀಯ ವಾಯುದಳವು ಈ ಅಪಘಾತದ ತನಿಖೆಯ ಆದೇಶ ನೀಡಿದೆ.