ಇದಕ್ಕೆ ಕಾರಣಕರ್ತರಿಗೆ ಶಿಕ್ಷೆ ಆಗಬೇಕು !- ಸಂಪಾದಕರು
ನಿಮಾರ (ಮಧ್ಯಪ್ರದೇಶ) – ಖಾಂಡವಾ ನಗರದಲ್ಲಿನ ‘ಅಕೆಡಮಿಕ್ ಹೈಟ್ಸ್ ಪಬ್ಲಿಕ್ ಸ್ಕೂಲ್’ನ ಪ್ರಶ್ನೆಪತ್ರಿಕೆಯಲ್ಲಿ ‘ಕರೀನಾ ಕಪೂರ ಮತ್ತು ಸೈಫ್ ಅಲಿ ಖಾನ್ ಇವರ ಮಗನ ಹೆಸರೇನು ?’ ಎಂದು ಪ್ರಶ್ನೆ ಕೇಳಲಾಗಿತ್ತು. ಈ ಬಗ್ಗೆ ಟೀಕೆ ವ್ಯಕ್ತವಾದಾಗ ಶಾಲೆಗೆ ಕಾರಣ ತೋರಿಸಿ ಎಂಬ ನೋಟಿಸ್ ಜಾರಿ ಮಾಡಲಾಗಿದೆ. ಜೊತೆಗೆ ಶಾಲೆಯ ಶಿಕ್ಷಣ ವಿಭಾಗವು ಕ್ರಮ ಕೈಗೊಂಡಿರುವುದಾಗಿ ಹೇಳಲಾಗಿದೆ.
MP school served notice for asking the name of Saif and Kareena’s son in exam, school defends saying it enhances knowledge of studentshttps://t.co/Qpeb28SwHO
— OpIndia.com (@OpIndia_com) December 25, 2021
ಅಕೆಡಮಿಕ್ ಹೈಟ್ಸ್ ಪಬ್ಲಿಕ್ ಸ್ಕೂಲ್ ಆರನೇ ತರಗತಿಯ ಮಕ್ಕಳಿಗೆ ಪರೀಕ್ಷೆಯಲ್ಲಿ ಈ ಪ್ರಶ್ನೆ ವಿಚಾರಿಸಿತ್ತು. ಶಾಲೆಯ ಈ ಪ್ರಶ್ನೆಗೆ ಪಾಲಕ ಶಿಕ್ಷಕ ಸಂಘವು ತೀವ್ರ ಪ್ರತಿಕ್ರಿಯೆ ನೀಡಿದೆ, ‘ಶಾಲೆಗೆ ಪ್ರಶ್ನೆ ಕೇಳುವುದಿದ್ದರೆ, ಮಹಾಪುರುಷರ ವಿಷಯವಾಗಿ ಕೇಳಬಹುದಾಗಿತ್ತು’, ಎಂದು ಹೇಳಿದೆ.