ರಝಾ ಅಕಾಡೆಮಿ ಮೇಲೆ ಏಕೆ ನಿರ್ಬಂಧ ಹೇರುತ್ತಿಲ್ಲ ?

  • ಮಹಾರಾಷ್ಟ್ರ ವಿಧಾನಸಭೆಯಲ್ಲಿ ಭಾಜಪದ ಶಾಸಕರಾದ ಮಂಗಲಪ್ರಭಾತ ಲೋಢಾ ಅವರ ಖಂಡತುಂಡ ಪ್ರಶ್ನೆ !

  • ‘ಜೊ ಹಿಂದೂ ಹಿತ ಕಿ ಬಾತ ಕರೇಗಾ, ವಹೀ ದೇಶಪರ ರಾಜ ಕರೇಗಾ !’ – ಶಾಸಕ ಮಂಗಲಪ್ರಭಾತ ಲೋಢಾ ಇವರ ವಿಧಾನಸಭೆಯಲ್ಲಿ ಘೋಷಣೆ

  • ಸನಾತನದ ಮೇಲೆ ನಿರ್ಬಂಧದ ಬಗ್ಗೆ ಆಗ್ರಹಿಸುವವರಿಗೆ ಖಂಡತುಂಡಾಗಿ ಖಂಡಿಸುವ ಶಾಸಕ ಮಂಗಲಪ್ರಭಾತ ಲೋಢಾ ಇವರಿಗೆ ಧನ್ಯವಾದ ! – ಶ್ರೀ. ಚೇತನ ರಾಜಹಂಸ, ವಕ್ತಾರರು, ಸನಾತನ ಸಂಸ್ಥೆ

ಮುಂಬಯಿ, ೨೪ ಡಿಸೆಂಬರ (ವಾರ್ತಾ.) – ಮಹಾರಾಷ್ಟ್ರ ವಿಧಾನಸಭೆಯ ಸಭಾಗೃಹದಲ್ಲಿ ಡಿಸೆಂಬರ್ ೨೩ ರಂದು ಕೆಲವು ಸದಸ್ಯರು ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರುವ ಬೇಡಿಕೆ ಮಾಡಿದರು. ಭಯೋತ್ಪಾದಕ ಚಟುವಟಿಕೆಗಳು ಮಾಡುವ ಉಗ್ರರಿಗೆ ವಿಧಿಸಿದ್ದ ಶಿಕ್ಷೆ ಕ್ಷಮಿಸಬೇಕು ಎಂದು ರಾಷ್ಟ್ರಪತಿಗಳಿಗೆ ಮನವಿ ಪತ್ರ ಕಳುಹಿಸುವ ವಿಧಾನಮಂಡಳದ ಕೆಲವು ಸದಸ್ಯರೇ ಇಂದು ಸನಾತನ ಸಂಸ್ಥೆಯನ್ನು ನಿರ್ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ, ಇದು ದುರದೃಷ್ಟಕರವಾಗಿದೆ. ಮಹಾರಾಷ್ಟ್ರದಲ್ಲಿ ರಝಾ ಅಕಾಡೆಮಿ ಸಂಘಟನೆಯು ಮೆರವಣಿಗೆ ಮಾಡಿದಾಗ ಇವರೆಲ್ಲ ರಝಾ ಅಕಾಡಮಿಯನ್ನು ನಿಷೇಧಿಸುವ ಆಗ್ರಹಿಸುವುದಿಲ್ಲ. ಆದ್ದರಿಂದ ಸನಾತನ ಸಂಸ್ಥೆಯನ್ನು ನಿರ್ಬಂಧಿಸುವ ಬದಲು ರಝಾ ಅಕಾಡೆಮಿಯನ್ನು ಮೊದಲು ಏಕೆ ನಿಷೇಧಿಸುವುದಿಲ್ಲ ? ಹೀಗೆಂದು ಭಾಜಪದ ಶಾಸಕ ಮಂಗಲಪ್ರಭಾತ ಲೋಢಾ ಇವರು ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ೨೦೨೧ – ೨೨ ರ ಪುರವಣಿ ಬೇಡಿಕೆಯ ಚರ್ಚೆಯ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಆ ಸಮಯದಲ್ಲಿ ಶ್ರೀ. ಮಂಗಲಪ್ರಭಾತ ಲೋಢಾ ಇವರು ಸನಾತನ ಸಂಸ್ಥೆಯನ್ನು ನಿರ್ಬಂಧಿಸುವ ಬೇಡಿಕೆಯ ಮೇಲೆ ಬಲವಾಗಿ ವಿರೋಧಿಸಿದರು ಹಾಗೂ ‘ಜೊ ಹಿಂದೂ ಹಿತ ಕಿ ಬಾತ ಕರೇಗಾ, ವಹಿ ದೇಶಪರ ರಾಜ ಕರೇಗಾ’, ಎಂದು ಸಭಾಗೃಹದಲ್ಲಿ ಘಂಟಾಘೋಷವಾಗಿ ಘೋಷಣೆ ನೀಡಿದರು.

ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ‘ಸನಾತನ ಸಂಸ್ಥೆ ಮೇಲೆ ನಿರ್ಬಂಧ ಬೇಡಿಕೆ ಮಾಡುವವರನ್ನು ಖಂಡತುಂಡವಾಗಿ ಖಂಡಿಸುವ ಶಾಸಕ ಮಂಗಲಪ್ರಭಾತ ಲೋಢಾ ಇವರರಿಗೆ ಧನ್ಯವಾದ ವ್ಯಕ್ತಪಡಿಸಿದರು.

ಶ್ರೀ. ಮಂಗಲಪ್ರಭಾತ ಲೋಢಾ ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಸನಾತನ ಸಂಸ್ಥೆಯನ್ನು ನಿರ್ಬಂಧಿಸುವಂತೆ ಹೇಳುವವರಿಗೆ ಎಂದಾದರೂ ರಝಾ ಅಕಾಡಮಿಯ ನೆನಪಾಗುತ್ತದೆಯೇ ? ಸನಾತನ ಸಂಸ್ಥೆಯ ಮೇಲೆ ನಿರ್ಬಂಧಿಸುವಂತೆ ಬೇಡಿಕೆ ಮಾಡುವವರಿಗೆ ಎಂದಾದರೂ, ಬಂಗಾಲದಲ್ಲಿ ಒಂದು ಘಟನೆ ನಡೆದಾಗ ದೇಶದಲ್ಲಿ ಏನು ನಡೆಯದೇ ಮಹಾರಾಷ್ಟ್ರದಲ್ಲಿ ಅಲ್ಲಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಈ ಮೆರವಣಿಗೆ ನಡೆಸುವವರು ರಝಾ ಅಕೇಡಮಿ ಮತ್ತು ಜಮತಿಯ ಜನರಾಗಿದ್ದಾರೆ ಎಂಬುದು ನೆನಪಗುತ್ತದೆಯೇ ?

೨. ಮೊದಲು ಜಮಾತ ಮತ್ತು ರಝಾ ಅಕಾಡೆಮಿಗಳನ್ನು ನಿಷೇಧಿಸಬೇಕು.

೩. ‘ಗೂಗಲ’ನಲ್ಲಿ ‘ಸನಾತನ ಸಂಸ್ಥೆ’ ಎಂದು ಸರ್ಚ್ ಮಾಡಿದರೆ ಮೊದಲು ‘ಆರತಿ’ಯ ಚಿತ್ರ ಬರುತ್ತದೆ; ಆದರೆ ರಝಾ ಅಕಾಡೆಮಿಯನ್ನು ಜಾಲತಾಣದಲ್ಲಿ ಸರ್ಚ್ ಮಾಡಿದರೆ ಹುತಾತ್ಮರ ಸ್ಮಾರಕಕ್ಕೆ ಒದೆಯುವ ಚಿತ್ರ ಕಾಣುತ್ತದೆ. (ಆ ಸಮಯದಲ್ಲಿ ವಿಧಾನಸಭೆಯ ಸದಸ್ಯರು ‘ಶೇಮ್ ಶೇಮ್’ ಎಂದು ಕೂಗಿದರು.) ರಾಝಾ ಆಕಾಡಮಿ ಜನರಿಗೆ ರಕ್ಷಣೆ ನೀಡುವ ಕೆಲಸ ಯಾರು ಮಾಡುತ್ತಿದ್ದಾರೆ ? ರಝಾ ಅಕಾಡಮಿಯ ಮೇಲೆ ನಿರ್ಬಂಧ ಹೇರಲು ಆಗುತ್ತಿಲ್ಲ; ಆದರೆ ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರಲು ಆಗ್ರಹಿಸುತ್ತಾರೆ.

೪. ೧೯೯೩ ರಲ್ಲಿ ಮುಂಬಯಿನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಹತ್ತು ಸಾವಿರ ಜನರು ಸಾವನ್ನಪ್ಪಿದರು. ಆ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯ ಬಾಂಬ್ ಸ್ಫೋಟ ನಡೆಸಿದವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಆ ನಿರ್ಣಯದಿಂದ ಸಂತೋಷವಾಗುವ ಬದಲು ಕೆಲವರು ರಾಷ್ಟ್ರಪತಿಯವರಿಗೆ ಪತ್ರ ಬರೆದು, ‘ಬಾಂಬ್ ಸ್ಫೋಟದ ಆರೋಪಿ ಮತ್ತು ದಾವೂದ್ ಸಹಚರನಿಗೆ ಕ್ಷಮಾದಾನ ನೀಡಬೇಕು’, ಎಂದು ಮನವಿ ಸಲ್ಲಿಸಿದರು ಎಂದು ಹೇಳಲು ನಾಚಿಕೆಯಾಗುತ್ತದೆ. ಆ ಸಮಯದಲ್ಲಿ ೧೨ ಜನರು ಈ ಬೇಡಿಕೆಯ ಮೇಲೆ ಸಹಿ ಮಾಡಿದ್ದರು. ಆ ಹನ್ನೆರಡು ಜನರು ಇಂದು ವಿಧಾನಸಭೆಯ ಸದಸ್ಯರಾಗಿ ಕುಳಿತಿದ್ದಾರೆ. ಅವರನ್ನು ಮೊದಲು ವಿಧಾನಸಭೆಯಿಂದ ಹೊರಗಟ್ಟಿ ಮತ್ತು ನಂತರವೇ ‘ಸನಾತನ ಸಂಸ್ಥೆಯ ಬಗ್ಗೆ ಮಾತನಾಡಿ.’ (ಆ ಸಮಯದಲ್ಲಿ ಕೆಲವು ಸದಸ್ಯರು ಹನ್ನೆರಡು ಜನರ ಹೆಸರನ್ನು ಕೇಳಿದರು, ಆಗ ಲೋಢಾ ಅವರು ‘ಈ ಹೆಸರುಗಳು ನಿಮಗೆ ತಿಳಿದಿದೆ, ನೀವೇ ಹುಡುಕಿ’, ಎಂದು ಹೇಳಿದರು.)

೫. ನಾನೇನು ಮಾತನಾಡುತ್ತಿದ್ದೇನೆ, ಅದು ವಿಚಾರ ಪೂರ್ವಕವಾಗಿಯೇ ಮಾತನಾಡುತ್ತಿದ್ದೇನೆ, ಅದೆಲ್ಲವೂ ‘ರೆಕಾರ್ಡ್’ ಅಲ್ಲಿ ಬರುವುದು. (ಕೆಲವು ಸದಸ್ಯರು ದೊಡ್ಡ ಧ್ವನಿಯಲ್ಲಿ ಮಾತನಾಡಲು ಆರಂಭಿಸಿದಾಗ ಲೋಢಾ ಇವರು ಮನವಿ ಮಾಡುತ್ತಾ) ‘ವಿಧಾನಸಭಾ ಅಧ್ಯಕ್ಷರು ನನಗೆ ರಕ್ಷಣೆ ನೀಡಬೇಕು.’

೬. ನಾನು ಜೋರಾಗಿ ಮಾತನಾಡುವೆನು ಮತ್ತು ಅದನ್ನು ನೀವು ಕೇಳಿಸಿಕೊಳ್ಳಲೇ ಬೇಕಾಗುತ್ತದೆ. ಜೊ ಹಿಂದೂ ಹಿತಕಿ ಬಾತ ಕರೇಗಾ ವಹಿ ದೇಶಪರ ರಾಜ ಕರೇಗಾ | ಮಹಾರಾಷ್ಟ್ರ ಮತ್ತು ಮುಂಬಯಿಯಲ್ಲಿ ವಾಸಿಸುವ ಜನರು ಮತ್ತು ಸಂಸ್ಕೃತಿ ಇದರ ರಕ್ಷಣೆ ಮತ್ತು ಅದರ ಗೌರವ ಕಾಪಾಡುವ ಜವಾಬ್ದಾರಿ ನನ್ನದಾಗಿದೆ. ಈ ವಿಷಯವಾಗಿ ಸದನದಲ್ಲಿ ಚರ್ಚೆ ನಡೆಸಬೇಕು.

೭. ಗಣೇಶೋತ್ಸವ ಮತ್ತು ನವರಾತ್ರಿ ಉತ್ಸವ ಆ ಸಮಯದಲ್ಲಿ ಜನರ ಸಂಖ್ಯೆಯ ಮೇಲೆ ನಿರ್ಬಂಧ ಹೇರಲಾಗುತ್ತದೆ. ಈ ಹಬ್ಬಗಳು ವರ್ಷದಲ್ಲಿ ಒಂದೇ ಸಲ ಬರುತ್ತವೆ; ಆದರೆ ಪ್ರತಿ ಶುಕ್ರವಾರ ಇಡೀ ರಸ್ತೆಯಲ್ಲಿ ನಮಾಜು ಪಠಣ ಮಾಡುವುದರ ಮೇಲೆ ನಿಷೇಧ ಹೇರಲಾಗುವುದಿಲ್ಲ. ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯದ ಆದೇಶ ಇರುವಾಗಲೂ ಅದರ ಪಾಲನೆ ಮಾಡುವುದಿಲ್ಲ.

೮. ದೇಶದ ಸಂಸ್ಕೃತಿ ಉಳಿದರೆ, ದೇಶ ಉಳಿಯುವುದು, ಮತ್ತು ದೇಶ ಉಳಿದರೆ, ನಾವು ಉಳಿಯುವುದು. ಕಾಶ್ಮೀರ ಮತ್ತು ಬಂಗಾಲದಲ್ಲಿ ಏನು ನಡೆಯುತ್ತಿದೆ, ಅದು ಮಹಾರಾಷ್ಟ್ರದಲ್ಲಿ ನಡೆಯಲು ಸಮಯ ಬೇಕಾಗುವುದಿಲ್ಲ. ಗೃಹಸಚಿವರು ಈ ಸೂಕ್ಷ್ಮ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸಣ್ಣ ಸಣ್ಣ ವಿಷಯವಿದ್ದರೂ ಅದರ ಒಳಗೆ ಬಾಂಬ್ ಬಚ್ಚಿಡಲಾಗಿದೆ.

೯. ಮುಂಬಯಿಯಲ್ಲಿ ಮೀನುಗಾರ ಸಮಾಜದ ಮೀನು ಮಾರುವ ಶೇ. ೯೦ ರಷ್ಟು ಜನರ ಮುಖ್ಯ ವ್ಯವಸಾಯವಾಗಿತ್ತು. ಈಗ ಈ ಸಮಾಜಕ್ಕೆ ಹೊರ ಹೋಗುವ ಪರಿಸ್ಥಿತಿ ಒದಗಿದೆ. ಅವರ ಹತ್ತಿರ ಈ ವ್ಯವಸಾಯ ಉಳಿದಿಲ್ಲ. ಮುಂಬಯಿಯಲ್ಲಿನ ೧೫ ವ್ಯವಸಾಯ ‘ಒಂದು ಜಾತಿ’ಯ ಜನರು (ಮತಾಂಧರು) ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮುಂಬರುವ ಸಮಯದಲ್ಲಿ ಮುಂಬಯಿ ಮತ್ತು ಸಂಸ್ಕೃತಿಯ ಸಂರಕ್ಷಣೆ ಹೇಗೆ ಮಾಡಬೇಕು, ಈ ವಿಷಯವಾಗಿ ಸರಕಾರ ಯೋಚನೆ ಮಾಡುವ ಅವಶ್ಯಕತೆ ಇದೆ.

೧೦. ದೇವಸ್ಥಾನ ಮತ್ತು ವಕ್ಫ ಮಂಡಲದ ಭೂಮಿಯನ್ನು ದೋಚಲಾಗಿದೆ. ವಕ್ಫ ಮಂಡಲದ ಹೆಚ್ಚುಕಡಿಮೆ ಹತ್ತು ಸಾವಿರ ಎಕರೆ ಭೂಮಿಯನ್ನು ದೋಚಲಾಗಿದೆ. ಆದ್ದರಿಂದ ಸಮಿತಿಯನ್ನು ನೇಮಿಸಿ ೧೫ ವರ್ಷದ ಹಗರಣದ ವಿಚಾರಣೆ ನಡೆಸಬೇಕು. ಪ್ರತಿಯೊಂದು ದೇವಸ್ಥಾನದ ಮೇಲೆ ದತ್ತಿ ಇಲಾಖೆಯಿಂದ ೫೦ ನಿರ್ಬಂಧ ಹೇರಲಾಗುತ್ತದೆ. ಪ್ರತಿಯೊಂದು ಸಮಯದಲ್ಲಿ ಸಣ್ಣ ಸಣ್ಣ ಕೆಲಸಕ್ಕಾಗಿ ದೇವಸ್ಥಾನದ ವಿಶ್ವಸ್ಥ ಮಂಡಳಿಗೆ ೫ ಸಲ ಕರೆಸಲಾಗುತ್ತದೆ; ಆದರೆ ವಕ್ಫ ಮಂಡಳದ ಮೇಲೆ ಯಾರ ನಿಯಂತ್ರಣವಿದೆಯೆ ? ಎಂದು ಪ್ರಶ್ನಿಸಿದರು.