ನಟಿ ಸನಿ ಲಿಯೋನ ಇವರ `ಮಧುಬನ’ ಈ ಹಾಡಿನ ಮೇಲೆ ನಿರ್ಬಂಧ ಹೇರಿ ! – ಮಥುರಾದ ಸಂತರ ಆಗ್ರಹ

ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗುತ್ತದೆ ? ಸರಕಾರವು ತಾನಾಗಿ ಗಮನವಹಿಸಿ ಹಿಂದೂಗಳನ್ನು ಅವಮಾನಿಸುವ ಪ್ರತಿಯೊಂದು ಘಟನೆಯನ್ನು ಕೂಡಲೇ ನಿಷೇಧಿಸಬೇಕು !- ಸಂಪಾದಕರು 

ಮಥುರಾ (ಉತ್ತರಪ್ರದೇಶ) – ನಟಿ ಸನಿ ಲಿಯೋನ ಇವರ ಇತ್ತೀಚೆಗೆ ಪ್ರದರ್ಶನಗೊಂಡಿರುವ `ಮಧುಬನ ಮೆ ರಾಧಿಕಾ ನಾಚೆ’ ಈ ವಿಡಿಯೋ ಹಾಡಿನಲ್ಲಿ ಶ್ರೀಕೃಷ್ಣನ ಪರಮಭಕ್ತ ರಾಧೆಯನ್ನು ಅವಮಾನಿಸಲಾಗಿದೆ. ಹಾಡಿನಿಂದ ಅಶ್ಲೀಲತೆ ಹರಡಲಾಗಿದೆ. ಇದನ್ನು ಎಲ್ಲಾ ಮಟ್ಟದಲ್ಲೂ ವಿರೋಧಿಸಲಾಗುತ್ತಿದೆ. ಈಗ ಮಥುರಾದಲ್ಲಿ ಕೆಲವು ಸಂತರು ವಿರೋಧಿಸುತ್ತಾ ಈ ಹಾಡಿನ ಮೇಲೆ ನಿಷೇಧ ಹೇರುವಂತೆ ಆಗ್ರಹಿಸಿದ್ದಾರೆ. ಹೀಗೆ ಮಾಡದಿದ್ದರೆ ಸನಿ ಇವರ ವಿರುದ್ದ ಮೊಕದ್ದಮೆ ದಾಖಲಿಸಲಾಗುವುದು, ಎಂದು ಅವರಿಂದ ಎಚ್ಚರಿಕೆಯನ್ನು ನೀಡಲಾಗಿದೆ.