ಹಿಂದೂಗಳ ಕ್ಷಮೆಯನ್ನು ಯಾಚಿಸದೆ ಕೇವಲ ಭಾವನೆಗೆ ಗೌರವ ನೀಡುತ್ತಿರುವುದಾಗಿ ಹೇಳಿ ‘ಮಧುವನ ಮೇ ರಾಧಿಕಾ ನಾಚೆ’ ಹಾಡು ಹಿಂಪಡೆಯುವ ಘೋಷಣೆ

ಸಾರೆಗಾಮ ಮ್ಯೂಸಿಕ್ ನಿಂದ ಟ್ವೀಟ್ ಮೂಲಕ ಮಾಹಿತಿ ನೀಡಿಕೆ

* ಸಾರೆಗಾಮ ಮ್ಯೂಸಿಕ್ ಎಂದಾದರೂ ಅಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವಂತಹ ಗೀತೆಗಳನ್ನು ರಚಿಸಿದೆಯೇನು ? – ಸಂಪಾದಕರು

* ಮೊದಲು ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ಮತ್ತು ಅದರ ನಂತರ ಅದರ ತೀವ್ರ ವಿರೋಧವಾದ ನಂತರ ಹಿಂಪಡೆಯುವುದು, ಇದು  ಎಂದಿನಂತೆ ನಡೆಯುತ್ತದೆ. ಹಿಂದೂಗಳ ಕಡೆಗೆ ಯಾರಾದರೂ ವಕ್ರ ದೃಷ್ಟಿಯಿಂದ ನೋಡಲು ಹಿಂಜರಿಯಬೇಕು ಅಂತಹ ವರ್ಚಸ್ಸನ್ನು ಹಿಂದುಗಳು ಯಾವಾಗ ನಿರ್ಮಾಣ ಮಾಡುವರು ? – ಸಂಪಾದಕರು

ನವದೆಹಲಿ – ಮಧುಬನ ಮೇ ರಾಧಿಕಾ ನಾಚೇ ರೆ, ಈ ಹಾಡಿನಲ್ಲಿ ಅಶ್ಲೀಲ ನೃತ್ಯ ಮಾಡುವುದು ತೋರಿಸಲಾಗಿದೆ, ಶ್ರೀಕೃಷ್ಣನ ಪರಮಭಕ್ತ ರಾಧೆಗೆ ಅವಮಾನ ಮಾಡಲಾಗಿದೆ. ಭಾರತಾದ್ಯಂತ ಹಿಂದೂಗಳು ಇದನ್ನು ವ್ಯಾಪಕ ಸ್ತರದಲ್ಲಿ ವಿರೋಧಿಸಿ ಆಂದೋಲನವೇ ಸೃಷ್ಟಿಸಿದರು ಮತ್ತು ಈ ಗೀತೆಯನ್ನು ನಿಷೇಧಿಸುವ ಬೇಡಿಕೆ ಮಾಡಿದ್ದರು. ಪ್ರಚಂಡ ವಿರೋಧದ ಮುಂದೆ ಈ ಗೀತೆಯ ನಿರ್ಮಾಪಕರಾದ ಸಾರೆಗಾಮ ಮ್ಯೂಸಿಕ್, ನವರು ಮಂಡಿ ಉರಿ ಈ ಹಾಡನ್ನು ಮುಂದಿನ ಮೂರು ದಿನಗಳಲ್ಲಿ ಒಳಗೆ ಎಲ್ಲಾ ಮಾಧ್ಯಮದಿಂದ ತೆಗೆಯುವುದಾಗಿ ತಿಳಿಸಿದೆ. ಅವರು ಒಂದು ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. ಟ್ವೀಟ್ ನಲ್ಲಿ ಮುಂದಿನಂತೆ ಹೇಳಲಾಗಿದೆ, ದೇಶವಾಸಿಗಳ ಭಾವನೆಗಳ ಬಗ್ಗೆ ನಮಗೆ ಗೌರವ ಇರುವುದರಿಂದ ಈ ಹಾಡನ್ನು ನಾವು ಹಿಂಪಡೆಯುತ್ತೇವೆ. ಆದರೂ ಸರೆಗಾಮ ಮ್ಯುಸಿಕ್ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ ಬಗ್ಗೆ ಹಿಂದೂಗಳಲ್ಲಿ ಕ್ಷಮೆ ಮಾತ್ರ ಕೇಳಲಿಲ್ಲ. ಈ ವಿಷಯವಾಗಿ ಹಿಂದೂಗಳಲ್ಲಿ ಕೋಪವಿದೆ.

ಈ ಹಾಡಿಗೆ ಮಥುರೆಯ ಸಂತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಧ್ಯಪ್ರದೇಶದ ಗೃಹಮಂತ್ರಿ ನರೋತ್ತಮ ಮಿಶ್ರ ಇವರು ಈ ಹಾಡನ್ನು ತೆರವುಗೊಳಿಸದಿದ್ದರೆ ನಿರ್ದೇಶಕ ಶಾಕಿಬ ತೋಶಿ ಮತ್ತು ನಾಯಕಿ ಸನಿ ಲಿಯೋನ ಇವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನುಡಿದಿದ್ದರು.