ಯುವಕರಿಗೆ ಕಡ್ಡಾಯವಾಗಿ ೩ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಲು ಕೆಂದ್ರ ಸರಕಾರ ಯೋಜಿಸುತ್ತಿದೆ !

ರಾಷ್ಟ್ರಪ್ರೀತಿ ಮತ್ತು ರಾಷ್ಟ್ರದ ಸೇವೆ ಮಾಡಲು ಇಸ್ರೇಲನ ಎಲ್ಲಾ ನಾಗರಿಕರನ್ನು ಒಮ್ಮೆಯಾದರೂ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ಅದೇ ಮಾದರಿಯಲ್ಲಿ ಭಾರತದಲ್ಲಿ ೩ ವರ್ಷಗಳ ಕಾಲ ಸೇನೆಯಲ್ಲಿ ಸೇವೆಸಲ್ಲಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ.

ಹಿಜಾಬ್ ಪ್ರಕರಣದ ವಿದ್ಯಾರ್ಥಿನಿ ಮುಸ್ಕಾನ ಖಾನ ಇವಳನ್ನು ‘ಅಲ್ ಕಾಯದಾ’ ಮುಖಂಡ ಅಲ್ ಜವಾಹಿರಿಯಿಂದ ಪ್ರಶಂಸೆ

ಕರ್ನಾಟಕದ ಹಿಜಾಬ ಪ್ರಕರಣದ ಸಮಯದಲ್ಲಿ ಶಿವಮೊಗ್ಗದಲ್ಲಿ ಒಂದು ಶಾಲೆಯ ಪರಿಸರದಲ್ಲಿ ಮುಸ್ಕಾನ ಖಾನ ಹೆಸರಿನ ವಿದ್ಯಾರ್ಥಿನಿಯು ಹಿಜಾಬನ್ನು ವಿರೋಧಿಸುವ ವಿದ್ಯಾರ್ಥಿಗಳ ಎದುರಿಗೆ ‘ಅಲ್ಲಾಹು ಅಕ್ಬರ್’ನ (‘ಅಲ್ಲಾ ಮಹಾನ್ ಆಗಿದ್ದಾನೆ’) ಘೋಷಿಸಿದ್ದಳು.

ದಮೋಹ (ಮಧ್ಯಪ್ರದೇಶ)ದಲ್ಲಿ ಮತಾಂಧ ಮಾವನಿಂದ ಸೊಸೆಯ ಮೇಲೆ ಅತ್ಯಾಚಾರ

ಇಲ್ಲಿ ಓರ್ವ ಸೊಸೆ ತನ್ನ ಮಾವ ರಶೀದ ಖಾನ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಮಾವನ ವಿರುದ್ಧ ದೂರು ದಾಖಲಿಸಿ, ಅವನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪತಿಯ ವಿರುದ್ಧವೂ ದೂರು ದಾಖಲಿಸಲಾಗಿದ್ದು, ಸದ್ಯ ಅವನು ಪರಾರಿಯಾಗಿದ್ದಾನೆ.

ಮ. ಗಾಂಧಿಯವರ ಬಗ್ಗೆ ನೀಡಿದ್ದ ಹೇಳಿಕೆಯ ಬಗ್ಗೆ ಪಶ್ಚಾತ್ತಾಪವಿಲ್ಲ ! – ಕಾಲಿಚರಣ ಮಹಾರಾಜ

ಮೋಹನದಾಸ ಗಾಂಧಿಯವರ ವಿಷಯದಲ್ಲಿ ನಾನು ನೀಡಿರುವ ಹೇಳಿಕೆಯ ವಿಷಯದಲ್ಲಿ ನನಗೆ ಯಾವುದೇ ರೀತಿಯ ಪಶ್ಚಾತ್ತಾಪ ಆಗುತ್ತಿಲ್ಲ. ಕಲಿಯುಗದಲ್ಲಿ ಸತ್ಯ ಮಾತನಾಡಿದ್ದರಿಂದ ನನಗೆ ಶಿಕ್ಷೆಯಾಗಿದೆ, ಎಂದು ಕಾಲಿಚರಣ ಮಹಾರಾಜರು ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಹೇಳಿದರು.

ಕೇವಲ ಭಾರತದಲ್ಲಿಯಷ್ಟೇ ಧ್ವನಿವರ್ಧಕದ ಮೇಲೆ ಅಜಾನ್ ಕೂಗು ಏಕೆ ಕೇಳಿಸುತ್ತದೆ ? – ಜನಪ್ರಿಯ ಗಾಯಕಿ ಅನುರಾಧಾ ಪೌಡವಾಲ

ನಾನು ಜಗತ್ತಿನ ಅನೇಕ ಸ್ಥಳಗಳಿಗೆ ಹೋಗಿದ್ದೇನೆ. ಕೊಲ್ಲೀ ರಾಷ್ಟ್ರಗಳಿಗೂ ಹೋಗಿದ್ದೇನೆ. ಅಲ್ಲಿ ಧ್ವನಿವರ್ಧಕ ನಿಷೇಧವಿದೆ. ಮುಸಲ್ಮಾನ ದೇಶಗಳಲ್ಲಿ ಧ್ವನಿವರ್ಧಕದ ಮೂಲಕ ಅಜಾನ್‌ನ ಕೂಗು ಕೇಳಿಸುವುದಿಲ್ಲ. ಹೀಗಿರುವಾಗ ಕೇವಲ ಭಾರತದಲ್ಲಿಯಷ್ಟೇ ಅದು ಏಕೆ ಕೇಳಿಸುತ್ತದೆ ?, ಎಂದು ಸುಪ್ರಸಿದ್ಧ ಗಾಯಕಿ ಅನುರಾಧಾ ಪೌಡವಾಲ ಇವರು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಊರ್ದು ಮಾತನಾಡದಿರುವುದರಿಂದ ಮತಾಂಧರಿಂದ ಯುವಕನ ಹತ್ಯೆ !

ಚಂದ್ರು ಎಂಬ ಹೆಸರಿನ ೨೨ ವರ್ಷದ ಕ್ರೈಸ್ತ ತರುಣನು ಉರ್ದು ಭಾಷೆ ಮಾತನಾಡದಿರುವುದರಿಂದ ಮೂವರು ಮತಾಂಧರು ಚಾಕುವಿನಿಂದ ಹತ್ಯೆ ಮಾಡಿದ್ದಾರೆ. ಈ ಘಟನೆಯು ಏಪ್ರಿಲ್‌ ೫ರಂದು ಹಳೇಗುಡ್ಡದಹಳ್ಳಿಯಲ್ಲಿ ನಡೆದಿದೆ.

ಭೇದಭಾವ ಹಾಗೂ ಭ್ರಷ್ಟಾಚಾರವು ಮತಪೆಟ್ಟಿಗೆಯ ರಾಜಕಾರಣದ ದುಷ್ಪರಿಣಾಮಗಳಾಗಿವೆ ! – ಪ್ರಧಾನಮಂತ್ರಿ

ಕೆಲವು ಪಕ್ಷಗಳು ದೇಶದಲ್ಲಿ ಅನೇಕ ದಶಕಗಳವರೆಗೆ ಮತಪೆಟ್ಟಿಗೆಯ ರಾಜಕಾರಣವನ್ನು ಮಾಡಿದವು. ಭೇದಭಾವ ಮತ್ತು ಭ್ರಷ್ಟಾಚಾರಗಳು ಮತಪೆಟ್ಟಿಗೆಯ ರಾಜಕಾರಣದ ದುಷ್ಪರಿಣಾಮಗಳಾಗಿವೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರತಿಪಾದಿಸಿದ್ದಾರೆ.

ರಾಜ್ಯಗಳು ಪ್ರಾಣವಾಯುವಿನ ಕೊರತೆಯಿಂದಾಗಿ ಘಟಿಸಿದ ಸಾವುಗಳ ಸಂಖ್ಯೆಯನ್ನು ನೀಡಿಲ್ಲ ! – ಕೇಂದ್ರ ಸರಕಾರ

ಕೊರೋನಾದ ಸಮಯದಲ್ಲಿ ಯಾವುದೇ ರಾಜ್ಯ ಸರಕಾರ ಅಥವಾ ಕೇಂದ್ರಾಡಳಿತ ಪ್ರದೇಶ ಪ್ರಾಣವಾಯುವಿನ (ಆಕ್ಸಿಜನಿನ) ಕೊರತೆಯಿಂದಾಗಿ ಸಂಭವಿಸಿರುವ ಸಾವಿನ ಮಾಹಿತಿಯನ್ನು ಇಂದಿಗೂ ನೀಡಿಲ್ಲ, ಎಂಬ ಮಾಹಿತಿಯನ್ನು ಕೇಂದ್ರೀಯ ಆರೋಗ್ಯ ಮತ್ತು ಕುಟುಂಬಕಲ್ಯಾಣ ರಾಜ್ಯ ಮಂತ್ರಿಗಳಾದ ಭಾರತೀ ಪವಾರರವರು ಏಪ್ರಿಲ್‌ ೫ರಂದು ಸಂಸತ್ತಿನ ಪ್ರಶ್ನೋತ್ತರದ ಅವಧಿಯಲ್ಲಿ ನೀಡಿದರು.

ರಮಜಾನಿನ ಸಮಯದಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿರುವ ಭಾಗಗಳಲ್ಲಿನ ವಿದ್ಯುತ್‌ ಪೂರೈಕೆಯಲ್ಲಿ ಕಡಿತವಾಗಬಾರದು !

ರಾಜಸ್ಥಾನ ರಾಜ್ಯದಲ್ಲಿ ರಮಜಾನಿನ ಸಮಯದಲ್ಲಿ ಮುಸಲ್ಮಾನ ಬಹುಲ ಭಾಗಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಕಡಿತವಾಗುವುದಿಲ್ಲ. ಈ ಸಂದರ್ಭದಲ್ಲಿ ವಿದ್ಯುತ್‌ ಪೂರೈಕೆ ಮಾಡುವ ಸಂಸ್ಥೆಗಳಿಗೆ ಕಾಂಗ್ರೆಸ್‌ ಸರಕಾರವು ಆದೇಶ ನೀಡಿದೆ.

ಝಾರಖಂಡನಲ್ಲಿ ಹಿಂದೂ ಹೊಸವರ್ಷ ಸಮಾರಂಭದ ಸಮಯದಲ್ಲಿ ‘ಜಯ ಶ್ರೀರಾಮ’ ಘೋಷಣೆ ಕೂಗಿದ ಇಬ್ಬರು ವಿದ್ಯಾರ್ಥಿಗಳ ಅಮಾನತ್ತು !

ಝಾರಖಂಡನ ಜಗನ್ನಾಥಪುರಿ ಸರಕಾರಿ ‘ಪಾಲಿಟೆಕ್ನಿಕ್ ವಿಶ್ವವಿದ್ಯಾಲಯ’ದ ಪರಿಸರದಲ್ಲಿ ಹಿಂದೂ ಹೊಸವರ್ಷದ ಸಮಾರಂಭದ ಸಮಯದಲ್ಲಿ ‘ಜಯ ಶ್ರೀರಾಮ’ ಮತ್ತು ‘ಭಾರತ ಮಾತಾ ಕಿ ಜೈ’ ಎಂದು ಘೋಷಣೆ ಮಾಡುವ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತ್ತುಗೊಳಿಸಲಾಯಿತು.