ರಮಜಾನಿನ ಸಮಯದಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿರುವ ಭಾಗಗಳಲ್ಲಿನ ವಿದ್ಯುತ್‌ ಪೂರೈಕೆಯಲ್ಲಿ ಕಡಿತವಾಗಬಾರದು !

ರಾಜಸ್ಥಾನದ ಕಾಂಗ್ರೆಸ್ ಸರಕಾರದಿಂದ ವಿದ್ಯುತ್‌ ವಿತರಣಾ ಸಂಸ್ಥೆಗಳಿಗೆ ಆದೇಶ

ಹಿಂದೂಗಳ ಹಬ್ಬಗಳ ಸಮಯದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಕಡಿತ ಮಾಡಬೇಡಿ, ಎಂಬ ಆದೇಶವನ್ನು ಕಾಂಗ್ರೆಸ್ ಸರಕಾರವು ಯಾವಾಗಲಾದರೂ ನೀಡಿರುವುದನ್ನು ಕೇಳಿರುವಿರೇ ?

ಜಯಪುರ (ರಾಜಸ್ಥಾನ) – ರಾಜಸ್ಥಾನ ರಾಜ್ಯದಲ್ಲಿ ರಮಜಾನಿನ ಸಮಯದಲ್ಲಿ ಮುಸಲ್ಮಾನ ಬಹುಲ ಭಾಗಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಕಡಿತವಾಗುವುದಿಲ್ಲ. ಈ ಸಂದರ್ಭದಲ್ಲಿ ವಿದ್ಯುತ್‌ ಪೂರೈಕೆ ಮಾಡುವ ಸಂಸ್ಥೆಗಳಿಗೆ ಕಾಂಗ್ರೆಸ್‌ ಸರಕಾರವು ಆದೇಶ ನೀಡಿದೆ. ರಾಜ್ಯದ ಮಂತ್ರಿ ಜಾಹಿದಾ ಖಾನರವರು ರಾಜ್ಯದ ಇಂಧನ ಮಂತ್ರಿಗಳಾದ ಭಂವರ ಸಿಂಹ ಭಾಟಿರವರಿಗೆ ಈ ಸಂದರ್ಭದಲ್ಲಿ ಪತ್ರ ಬರೆದಿದ್ದರು. ಅನಂತರ ಈ ಆದೇಶವನ್ನು ನೀಡಲಾಗಿದೆ. ಇದರ ಮೇಲೆ ಭಾಜಪವು ಟೀಕಿಸಿದೆ.