ಭಾಜಪದ ೪೨ನೇ ಸ್ಥಾಪನೆಯ ದಿನದ ನಿಮಿತ್ತ ಕಾರ್ಯಕ್ರಮದ ಆಯೋಜನೆ
ನವದೆಹಲಿ – ಕೆಲವು ಪಕ್ಷಗಳು ದೇಶದಲ್ಲಿ ಅನೇಕ ದಶಕಗಳವರೆಗೆ ಮತಪೆಟ್ಟಿಗೆಯ ರಾಜಕಾರಣವನ್ನು ಮಾಡಿದವು. ಭೇದಭಾವ ಮತ್ತು ಭ್ರಷ್ಟಾಚಾರಗಳು ಮತಪೆಟ್ಟಿಗೆಯ ರಾಜಕಾರಣದ ದುಷ್ಪರಿಣಾಮಗಳಾಗಿವೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರತಿಪಾದಿಸಿದ್ದಾರೆ. ಭಾರತೀಯ ಜನತಾಪಕ್ಷದ ೪೨ನೇ ಸ್ಥಾಪನಾ ದಿನದ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
It’s ‘parivar bhakti’ vs ‘rashtra bhakti’, PM Modi says on BJP foundation day
Read: https://t.co/Ijniw4PD6D#FoundationDay #NarendraModi pic.twitter.com/n536TrvwAm
— The Times Of India (@timesofindia) April 6, 2022
ಪ್ರಧಾನಿಗಳು ಮಾತನಾಡುತ್ತ ಹೀಗೆ ಹೇಳಿದರು,
೧. ಜನರಿಗೆ ಯಾವುದೇ ಸರಕಾರ ಬಂದಿದ್ದರೂ ಪರಿಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಸತತವಾಗಿ ಅನಿಸುತ್ತಿದ್ದ ಕಾಲವಿತ್ತು, ಆದರೆ ಭಾಜಪವು ಈ ವಿಚಾರದಲ್ಲಿ ಬದಲಾವಣೆಯನ್ನು ತಂದಿದೆ.
೨. ಇಂದು ದೇಶದ ಬಳಿ ಧೋರಣೆ ಮತ್ತು ನಿರ್ಣಯ ತೆಗೆದುಕೊಳ್ಳುವ ಶಕ್ತಿಯಿದೆ. ನಮ್ಮ ಸರಕಾರವು ರಾಷ್ಟ್ರೀಯತ್ವಕ್ಕೆ ಮಹತ್ವವನ್ನು ನೀಡುತ್ತದೆ. ನಾವು ಗುರಿ ಇಟ್ಟಿದ್ದನ್ನು ಪೂರ್ಣಗೊಳಿಸುತ್ತಿದ್ದೇವೆ. ಸರಕಾರವು ದೇಶದ ಹಿತವನ್ನು ಗಮನದಲ್ಲಿಟ್ಟು ನಿರ್ಣಯ ತೆಗೆದುಕೊಳ್ಳುತ್ತಿದೆ. ಆದುದರಿಂದ ನಮಗೆ ‘ಸಬಕಾ ಸಾಠ ಸಬಕಾ ವಿಕಾಸ’ದೊಂದಿಗೆ ಈಗ ‘ಸಬಕಾ ವಿಶ್ವಾಸ’ವೂ ದೊರೆಯುತ್ತಿದೆ.
೩. ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಮಯದಲ್ಲಿ ಭಾರತದ ವಿಚಾರವು ಸ್ವಾವಲಂಬಿಯಾಗುವುದು, ಹಾಗೆಯೇ ಸಾಮಾಜಿಕ ನ್ಯಾಯ ಮತ್ತು ಸಾಮರಸ್ಯದ್ದಾಗಿತ್ತು. ಇದೇ ಸಂಕಲ್ಪದ ಆಧಾರದಲ್ಲಿ ಒಂದು ವಿಚಾರಸರಣಿಯ ರೂಪದಲ್ಲಿ ಭಾರತೀಯ ಜನತಾ ಪಕ್ಷದ ಸ್ಥಾಪನೆಯಾಗಿತ್ತು; ಆದುದರಿಂದಲೇ ಈ ಅಮೃತಕಾಲವು ಭಾಜಪದ ಪ್ರತಿಯೊಂದು ಕಾರ್ಯಕರ್ತರಿಗಾಗಿ ಕರ್ತವ್ಯದ ಕಾಲವಾಗಿದೆ.