ಬೆಂಗಳೂರಿನಲ್ಲಿ ಊರ್ದು ಮಾತನಾಡದಿರುವುದರಿಂದ ಮತಾಂಧರಿಂದ ಯುವಕನ ಹತ್ಯೆ !

ಕರ್ನಾಟಕದಲ್ಲಿ ಮತಾಂಧರಿಂದ ಹಿಂದೂ, ಕ್ರೈಸ್ತ ತರುಣರ ಹತ್ಯೆಯಾಗುತ್ತಿರುವಾಗ ಜಾತ್ಯಾತೀತವಾದಿಗಳು ಮಾತ್ರ ಮೌನ ಪಾಲಿಸುತ್ತಾರೆ ! ಅವರಿಗೆ ಮತಾಂಧರ ಈ ಅಸಹಿಷ್ಣತೆಯು ಕಾಣಿಸುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !

ಬೆಂಗಳೂರು (ಕರ್ನಾಟಕ) – ಇಲ್ಲಿ ಚಂದ್ರು ಎಂಬ ಹೆಸರಿನ ೨೨ ವರ್ಷದ ಕ್ರೈಸ್ತ ತರುಣನು ಉರ್ದು ಭಾಷೆ ಮಾತನಾಡದಿರುವುದರಿಂದ ಮೂವರು ಮತಾಂಧರು ಚಾಕುವಿನಿಂದ ಹತ್ಯೆ ಮಾಡಿದ್ದಾರೆ. ಈ ಘಟನೆಯು ಏಪ್ರಿಲ್‌ ೫ರಂದು ಹಳೇಗುಡ್ಡದಹಳ್ಳಿಯಲ್ಲಿ ನಡೆದಿದೆ. ಚಂದ್ರು ದ್ವಚಕ್ರವಾಹನದಿಂದ ಹೋಗುತ್ತಿರುವಾಗ ಅವನು ಇನ್ನೊಂದು ದ್ವಿಚಕ್ರಕ್ಕೆ ಸ್ವಲ್ಪ ಗುದ್ದಿದನು. ಆ ವಾಹನದ ಚಾಲಕನಾದ ಶಾಹಿದ ಪಾಶಾನು ಚಂದ್ರುವಿನೊಂದಿಗೆ ವಾದ ಮಾಡಿದನು.

(ಸೌಜನ್ಯ – TV9 ಕನ್ನಡ)

ಚಂದ್ರು ಮತಾಂಧರೊಂದಿಗೆ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿದ್ದನು. ಅವನು ಉರ್ದು ಭಾಷೆಯಲ್ಲಿ ಮಾತನಾಡದಿರುವುದರಿಂದ ಸಿಟ್ಟಿನಿಂದ ಚಾಕುವಿನಿಂದ ಅವನ ಹತ್ಯೆ ಮಾಡಿದನು. ಈ ಸಮಯದಲ್ಲಿ ಶಾಹಿದನ ಕೆಲವು ಜೊತೆಗಾರರೂ ಉಪಸ್ಥಿತರಿದ್ದರು. ಈ ಘಟನೆಯ ಸಿಸಿಟಿವಿ ಚಿತ್ರೀಕರಣವು ಬಹಿರಂಗವಾಗಿದೆ. ಇದರಲ್ಲಿ ಅನೇಕ ಜನರ ಕೈಯಲ್ಲಿ ಖಡ್ಗ ಮತ್ತು ಚಾಕೂ ಇರುವುದು ಕಂಡುಬರುತ್ತಿದೆ. ಹತ್ಯೆಯ ಮೊದಲು ಚಂದ್ರೂ ತನ್ನನ್ನು ಬಿಟ್ಟುಬಿಡಲು ವಿನಂತಿಸುತ್ತಿರುವುದೂ ಕಂಡುಬರುತ್ತಿದೆ. ಪೊಲೀಸರು ೨೧ ವರ್ಷದ ಶಾಹಿದ ಪಾಶಾ, ೨೨ ವರ್ಷದ ಶಾಹಿದ ಗೋಲಿ ಮತ್ತು ಇನ್ನೋರ್ವ ಅಪ್ರಾಪ್ತ ಯುವಕನನ್ನು ಬಂಧಿಸಿದ್ದಾರೆ.