ಯುವಕರಿಗೆ ಕಡ್ಡಾಯವಾಗಿ ೩ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಲು ಕೆಂದ್ರ ಸರಕಾರ ಯೋಜಿಸುತ್ತಿದೆ !

ಯೋಜನೆಯಡಿ ಸೇನೆಗೆ ಸೇರುವ ಯುವಕರನ್ನು ‘ಅಗ್ನಿವೀರ’ ಎಂದು ಕರೆಯಲಾಗುವುದು !

ಸ್ವಾತಂತ್ರ ವೀರ ಸಾವರಕರ ಅವರು ಚೀನಾದೊಂದಿಗೆ ಯುದ್ಧದ ಸಾದ್ಯತೆಯನ್ನು ಅರ್ಥ ಮಾಡಿಕೊಂಡು ಆಗಿನ ಕಾಲದ ೧೯೫೯ ರಲ್ಲೇ ಪ್ರತ್ಯೇಕ ಭಾರತೀಯ ಯುವಕನಿಗೆ ಸೈನಿಕ ಪ್ರಶಿಕ್ಷಣ ನೀಡಬೇಕು, ಎಂದು ಹೇಳಿದ್ದರು; ಆದರೆ ಈ ಸಲಹೆಯನ್ನು ಅಂದಿನ ಪ್ರಧಾನಿ ನೆಹರೂ ಅವರಿಂದ ಹಿಡಿದು ಇಂದಿನವರೆಗಿನ ಎಲ್ಲಪಕ್ಷದ ಆಡಳಿತಗಾರರು ನಿರ್ಲಕ್ಷಿಸಿದ್ದು ನಾಚಿಕೆಗೇಡಿನ ಸಂಗತಿ !

ನವ ದೆಹಲಿ – ರಾಷ್ಟ್ರಪ್ರೀತಿ ಮತ್ತು ರಾಷ್ಟ್ರದ ಸೇವೆ ಮಾಡಲು ಇಸ್ರೇಲನ ಎಲ್ಲಾ ನಾಗರಿಕರನ್ನು ಒಮ್ಮೆಯಾದರೂ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ಅದೇ ಮಾದರಿಯಲ್ಲಿ ಭಾರತದಲ್ಲಿ ೩ ವರ್ಷಗಳ ಕಾಲ ಸೇನೆಯಲ್ಲಿ ಸೇವೆಸಲ್ಲಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ರಕ್ಷಣಾ ಪಡೆಗಳ ಮೇಲಿನ ಹೆಚ್ಚಿದ ವೆಚ್ಚ ಮತ್ತು ವಯಸ್ಸಿನ ಮಿತಿಯನ್ನು ಕಡಿಮೆ ಮಾಡಲು ಕೇಂದ್ರ ಸರಕಾರವು ‘ಅಗ್ನಿ ಪಥ ಎಂಟ್ರಿ ಸ್ಕೀಮ್’ ಎಂಬ ಹೊಸ ಯೋಜನೆಯನ್ನು ಹಮ್ಮಿಕೊಳ್ಳಲಿದೆ. ಅದಕ್ಕನುಸಾರ ದೇಶದ ಯುವಕರು ೩ ವರ್ಷಗಳ ಕಾಲ ಸೇನೆಯಲ್ಲಿ ಭಾಗವಹಸಬಹುದಾಗಿದೆ.