ದಮೋಹ (ಮಧ್ಯಪ್ರದೇಶ)ದಲ್ಲಿ ಮತಾಂಧ ಮಾವನಿಂದ ಸೊಸೆಯ ಮೇಲೆ ಅತ್ಯಾಚಾರ

ಈ ಕುರಿತು ಮಹಿಳಾ ಸಂಘಟನೆಗಳು ಎಂದಿಗೂ ಏನನ್ನೂ ಮಾತನಾಡುವುದಿಲ್ಲ, ಎನ್ನುವುದನ್ನು ಗಮನಿಸಿರಿ !

ಯಾವಾಗಲೂ ಶರಿಯತ ಕಾನೂನು ಜಾರಿಗೊಳಿಸಲು ಒತ್ತಾಯಿಸುವವರು ಇಂತಹ ಘಟನೆಗಳ ಬಗ್ಗೆ ಆರೋಪಿಗೆ ಶರಿಯತ ಕಾನೂನಿನಂತೆ ಕೈಕಾಲು ಮುರಿಯುವ, ಹಾಗೆಯೇ ನಡುರಸ್ತೆಯಲ್ಲಿ ಕಟ್ಟಿಹಾಕಿ ಅವನನ್ನು ಕಲ್ಲಿನಿಂದ ಹೊಡೆದು ಶಿಕ್ಷಿಸಬೇಕೆಂದು ಒತ್ತಾಯಿಸುವುದಿಲ್ಲ, ಎನ್ನುವುದನ್ನು ಗಮನಿಸಿರಿ !

ದಮೋಹ (ಮಧ್ಯಪ್ರದೇಶ) – ಇಲ್ಲಿ ಓರ್ವ ಸೊಸೆ ತನ್ನ ಮಾವ ರಶೀದ ಖಾನ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಮಾವನ ವಿರುದ್ಧ ದೂರು ದಾಖಲಿಸಿ, ಅವನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪತಿಯ ವಿರುದ್ಧವೂ ದೂರು ದಾಖಲಿಸಲಾಗಿದ್ದು, ಸದ್ಯ ಅವನು ಪರಾರಿಯಾಗಿದ್ದಾನೆ.

ಈ ಮಹಿಳೆಯು ಪತ್ರಕರ್ತರೊಂದಿಗೆ ಮಾತನಾಡುತ್ತಾ, ನನ್ನ ನಿಕಾಹ ೨೦೨೦ ರಲ್ಲಿ ಆಗಿತ್ತು. ಆಗಿನಿಂದ ರಾಶೀದ ಖಾನ ನನ್ನ ಕಡೆಗೆ ವಕ್ರದೃಷ್ಟಿಯಿಂದ ನೋಡುತ್ತಿದ್ದನು. ಆದ್ದರಿಂದ ನಾನು ಅವನಿಂದ ನನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆನು; ಆದರೆ ನಾನು ನನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯಾವಾಗ ನನ್ನ ಗಂಡ ಮನೆಯಲ್ಲಿ ಇರುತ್ತಿರಲಿಲ್ಲವೋ, ಆಗ ಅವನು ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದನು. ಈ ವಿಷಯದಲ್ಲಿ ಯಾರಿಗಾದರೂ ಹೇಳಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ಮಾವನ ಈ ಕೃತ್ಯದ ಕುರಿತು ಗಂಡನಿಗೆ ಹೇಳಿದಾಗ ಅವನು ನನ್ನನ್ನೇ ಬೆದರಿಸಿದನು ಮತ್ತು ಮಾವನ ಕೃತ್ಯವನ್ನು ಬೆಂಬಲಿಸಿದನು ಎಂದು ಹೇಳಿದರು.