ಝಾರಖಂಡನಲ್ಲಿ ಹಿಂದೂ ಹೊಸವರ್ಷ ಸಮಾರಂಭದ ಸಮಯದಲ್ಲಿ ‘ಜಯ ಶ್ರೀರಾಮ’ ಘೋಷಣೆ ಕೂಗಿದ ಇಬ್ಬರು ವಿದ್ಯಾರ್ಥಿಗಳ ಅಮಾನತ್ತು !

ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಸಿಟ್ಟಿಗೆದ್ದರಿಂದ ಕ್ರಮ !

ಝಾರಖಂಡ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿ ? ರಾಜ್ಯದಲ್ಲಿ ರಾಷ್ಟ್ರಘಾತಕ ವಿಚಾರಸರಣಿಯ ಝಾರಖಂಡ ಮುಕ್ತಿ ಮೋರ್ಚಾದ ಸರಕಾರವಿರುವುದರಿಂದ ಇಂತಹ ಪ್ರಕರಣಗಳು ಹೆಚ್ಚಿದರೆ ಆಶ್ಚರ್ಯ ಪಡಬಾರದು !

ಅಲ್ಪಸಂಖ್ಯಾತ ವಿದ್ಯಾರ್ಥಿ ಸಿಟ್ಟಿಗೆದ್ದ ಕಾರಣ ‘ಜಯ ಶ್ರೀರಾಮ’ ಎಂದು ಘೋಷಣೆ ನೀಡುವ ವಿದ್ಯಾರ್ಥಿಗಳನ್ನು ತೆಗೆದುಹಾಕುವ ಸರಕಾರಿ ವಿಶ್ವವಿದ್ಯಾಲಯಗಳ ವ್ಯವಸ್ಥಾಪಕ ಆಡಳಿತ ಮಂಡಳಿ ಇಂತಹ ಮತಾಂಧ ವಿದ್ಯಾರ್ಥಿಗಳ ಹೇಳಿಕೆಯಂತೆ ವಿಶ್ವವಿದ್ಯಾಲಯದಲ್ಲಿ ನಮಾಜಗಾಗಿ ಅಥವಾ ಮತಾಂಧ ಚಟುವಟಿಕೆಗಳಿಗೆ ಅನುಮತಿಯನ್ನು ಕೊಡಬಹುದು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು !

(ಸೌಜನ್ಯ – ಭಾಸ್ಕರ್ ನ್ಯೂಸ್)

ರಾಂಚಿ (ಝಾರಖಂಡ) – ಝಾರಖಂಡನ ಜಗನ್ನಾಥಪುರಿ ಸರಕಾರಿ ‘ಪಾಲಿಟೆಕ್ನಿಕ್ ವಿಶ್ವವಿದ್ಯಾಲಯ’ದ ಪರಿಸರದಲ್ಲಿ ಹಿಂದೂ ಹೊಸವರ್ಷದ ಸಮಾರಂಭದ ಸಮಯದಲ್ಲಿ ‘ಜಯ ಶ್ರೀರಾಮ’ ಮತ್ತು ‘ಭಾರತ ಮಾತಾ ಕಿ ಜೈ’ ಎಂದು ಘೋಷಣೆ ಮಾಡುವ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತ್ತುಗೊಳಿಸಲಾಯಿತು. ಒಬ್ಬ ವಿದ್ಯಾರ್ಥಿಗೆ ವಿಶ್ವವಿದ್ಯಾಲಯದಿಂದ ತೆಗೆದು ಹಾಕಲಾಯಿತು. ಹಾಗೆಯೇ ಶಿಕ್ಷೆಯೆಂದು ವಿಶ್ವವಿದ್ಯಾಲಯದ ಸುಮಾರು ೫೦೦ ಹಿಂದು ವಿದ್ಯಾರ್ಥಿಗಳಿಗೆ ಊಟವನ್ನು ನಿರಾಕರಿಸಲಾಯಿತು. ಎಂದು ಹಿಂದಿ ದೈನಿಕ ‘ಜಾಗರಣ’ದಲ್ಲಿ ಸುದ್ದಿಯನ್ನು ಪ್ರಕಟಿಸಿದೆ.

ಎಪ್ರಿಲ ೨ರಂದು ಹಿಂದೂ ಹೊಸವರ್ಷದ ಮೊದಲ ದಿನವನ್ನು ಆಚರಿಸಲು ವಿದ್ಯಾರ್ಥಿಗಳು ಜಗನ್ನಾಥಪೂರ ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ವಸತಿ ಗೃಹದ ಮೇಲ್ಛಾವಣಿಯ ಮೇಲೆ ಗುಂಪು ಗೂಡಿದರು. ಈ ಸಮಾರಂಭವನ್ನು ಆಚರಿಸುತ್ತಿರುವಾಗ ಕೆಲವು ವಿದ್ಯಾರ್ಥಿಗಳು ‘ಜಯ ಶ್ರೀರಾಮ’ ಮತ್ತು ‘ಭಾರತ ಮಾತಾಕಿ ಜೈ’ ಎಂದು ಘೋಷಣೆ ಕೂಗಿದರು. ಇದರಿಂದ ವಿಶಿಷ್ಟ ಸಮುದಾಯದ ಜಾತ್ಯತೀತರೆಂದು ಹೇಳಿಕೊಳ್ಳುವ ವಿದ್ಯಾರ್ಥಿಗಳು ಸಿಟ್ಟಿಗೆದ್ದರು. (ಯಾರಿಗೆ ಜೈ ಶ್ರೀರಾಮನ ಘೋಷಣೆ ನಡೆಯುವುದಿಲ್ಲವೋ, ಅವರು ಭಾರತ ಬಿಟ್ಟು ತೊಲಗಬೇಕು ! – ಸಂಪಾದಕರು) ಅವರು ವಿಶ್ವವಿದ್ಯಾಲಯದ ಕುಲಪತಿಯವರಲ್ಲಿ ಈ ಬಗ್ಗೆ ದೂರು ದಾಖಲಿಸಿದರು. ಕುಲಪತಿಯವರು ಈ ಸಮಾರಂಭದ ಮುದಾಳತ್ವವನ್ನು ವಹಿಸಿದ್ದ ಒಬ್ಬ ವಿದ್ಯಾರ್ಥಿಯನ್ನು ವಿಶ್ವವಿದ್ಯಾಲಯದಿಂದ ತೆಗೆದುಹಾಕಿದರು. ಇಬ್ಬರು ವಿದ್ಯಾರ್ಥಿಗಳನ್ನು ಅಮಾನತ್ತುಗೊಳಿಸಿದರು. ‘ವಿಶ್ವವಿದ್ಯಾಲಯದಲ್ಲಿ ಎಲ್ಲ ಧರ್ಮದ ವಿದ್ಯಾರ್ಥಿಗಳಿದ್ದಾರೆ. ಆದುದರಿಂದ ಶಿಸ್ತನ್ನು ಪಾಲಿಸದಿರುವ ವಿದ್ಯಾರ್ಥಿಗಳನ್ನು ತೆಗೆದು ಹಾಕಲಾಯಿತು’, ಎಂದು ಹೇಳುತ್ತಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.